ತಾಲ್ಲೂಕಿನ ಎಲ್ಲೆಡೆಯೂ
ಮೂಲಭೂತ ಸೌಕರ್ಯಕ್ಕೆ ಮೊದಲ ಆದ್ಯತೆ.
- ಕೆ.ಮಹದೇವ್, ಶಾಸಕರು
ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರ
ತಾಲ್ಲೂಕಿನ ಏಳಿಗೆಗಾಗಿ, ಪಕ್ಷಬೇಧವಿಲ್ಲ
ಪ್ರಾಮಾಣಿಕತೆ ಹಾಗು ಪಾರದರ್ಶಕತೆಯಿಂದ ಜನರಿಗೆ ನೆರವು
- ಕೆ.ಮಹದೇವ್, ಶಾಸಕರು
ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರ
ತಾಲ್ಲೂಕಿನ ಜನರ ಸಂಕಷ್ಟ ಪರಿಹರಿಸಲು ಹಗಲಿರುಳು ಶ್ರಮ. ಪ್ರತಿಯೊಬ್ಬರ ಕಷ್ಟ ಆಲಿಸಿ ತಕ್ಷಣವೇ ಪರಿಹಾರ
ದೊರಕಿಸುವ ಪ್ರಾಮಾಣಿಕ ಪ್ರಯತ್ನ.
- ಕೆ.ಮಹದೇವ್, ಶಾಸಕರು
ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರ
ನನ್ನ ಬಗ್ಗೆ ನನ್ನ ಮಾತು
ನನ್ನ ಬಾಲ್ಯ ಮತ್ತು ಇತಿಹಾಸ:
ಕರ್ನಾಟಕದ ಅತ್ಯಂತ ಹಿಂದುಳಿದ ಗ್ರಾಮ ಅಥವಾ ಪಟ್ಟಣಗಳಲ್ಲಿ ಒಂದಾದ ಪಿರಿಯಾಪಟ್ಟಣದಲ್ಲಿ ನಾನು ಯಾವುದೇ ರಾಜಕೀಯ ಗಂಧ-ಗಾಳಿಯ ಹಿನ್ನೆಲೆಯಿಲ್ಲದ ಸಾಮಾನ್ಯ ರೈತ ಕುಟುಂಬದಲ್ಲಿ ದಿನಾಂಕ: 11.05.1955ರಲ್ಲಿ ಜನಿಸಿದೆನು. ಶ್ರೀ ಕರಿಯಪ್ಪ ಮತ್ತು ಶ್ರೀಮತಿ ಪದ್ಮಮ್ಮನವರಿಗೆ ಜನಿಸಿದ್ದ ಐದು ಗಂಡು ಮಕ್ಕಳು ಮತ್ತು ಕೊನೆಯ ಒಬ್ಬ ಹೆಣ್ಣು ಮಗಳ ಪೈಕಿ ನಾನು ಹಿರಿಯ ಮಗನಾಗಿದ್ದೇನೆ. ನನ್ನದು ಒಕ್ಕಲಿಗ ಸಮುದಾಯದ ಬಡ ರೈತ ಕುಟುಂಬ. ಕೇವಲ ನಾಲ್ಕುವರೆ ಎಕರೆ ತರಿ ಜಮೀನು ಇವರ ಜೀವನ ನಿರ್ವಹಣೆಗೆ ಇದ್ದ ಆಸ್ತಿ. ಜೀವನೋಪಾಯಕ್ಕೆ ಇದ್ದ ಆ ನಾಲ್ಕುವರೆ ಎಕರೆ ಜಮೀನಿನಲ್ಲಿ ಬರುತ್ತಿದ್ದ ಆದಾಯ ಕುಟುಂಬದ ನಿರ್ವಹಣೆಗೆ ಸಾಕಾಗುತ್ತಿರಲಿಲ್ಲ. ಮನೆಯ ಹಿರಿಯ ಮಗನಾಗಿದ್ದ ನನಗೆ ಕುಟುಂಬ ನಿರ್ವಹಣೆಗಾಗಿ ಕೃಷಿ ಚಟುವಟಿಕೆಯೊಂದಿಗೆ ಕೃಷಿಯೇತರ ಚಟುವಟಿಕೆಯನ್ನು ಅವಲಂಬಿಸುವುದು ಅನಿವಾರ್ಯವಾಯಿತು. ಇಂಥಹ ಪರಿಸ್ಥಿತಿಯಲ್ಲಿ ನಾನು ಸಾಮಾಜಿಕ ಭದ್ರತಾ ಕಾರ್ಯಕ್ರಮಗಳಲ್ಲಿ ಒಂದಾದ ಪಡಿತರ ವಿತರಣೆ ಚಟುವಟಿಕೆಯಲ್ಲಿ ನನ್ನನ್ನು ತೊಡಗಿಸಿಕೊಂಡೆ. ಇದರಿಂದ ನನ್ನ ಸಾರ್ವಜನಿಕ ಜೀವನದ ಸಂಪರ್ಕ ಹೆಚ್ಚಾಗತೊಡಗಿತು. ಮುಂದಿನ ದಿನಗಳಲ್ಲಿ ಇದು ವಿಸ್ತಾರವಾದಂತೆ ಸ್ಥಳೀಯ ರಾಜಕೀಯ ವ್ಯವಸ್ಥೆಯಲ್ಲಿ ನನಗೇ ಅರಿವಿಲ್ಲದಂತೆ ಸಕ್ರಿಯವಾಗತೊಡಗಿದೆ. ಇದು ನನ್ನ ರಾಜಕೀಯ ಜೀವನದ ಆರಂಭದ ಹೆಜ್ಜೆಯಾಗಿತ್ತು.
Recent Article & Event
ಶಾಸಕನಾಗಿ ನನ್ನ ಸಂಕಲ್ಪ
ಮೂಲಭೂತ ಸೌಕರ್ಯ
ನನ್ನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲ ಗ್ರಾಮೀಣ ಮತ್ತು ನಗರ ಪ್ರದೇಶದ ಜನತೆಗೆ ಅಗತ್ಯವಿರುವ ರಸ್ತೆ ಅಭಿವೃದ್ಧಿ, ಕುಡಿಯುವ ನೀರಿನ ವ್ಯವಸ್ಥೆ, ಸ್ವಚ್ಛತೆ ಹಾಗೂ ವಿದ್ಯುತ್ ಪೂರೈಕೆಗೆ ಅಗತ್ಯ ಕ್ರಮ ಕೈಗೊಂಡು ಕ್ಷೇತ್ರದ ಜನತೆಯ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವುದು ನನ್ನ ಉದ್ದೇಶ.
ವಸತಿ
ನನ್ನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲ ಗ್ರಾಮೀಣ ಮತ್ತು ನಗರ ಪ್ರದೇಶದ ವಸತಿ ರಹಿತ ಮತ್ತು ನಿವೇಶನ ರಹಿತ ಕುಟುಂಬಗಳನ್ನು ಗುರುತಿಸಿ ಅವರ ಕುಟುಂಬಕ್ಕೆ ಅಗತ್ಯವಾದ ಸೂರು ಒದಗಿಸಲು ನನ್ನ ಶಕ್ತಿ ಮೀರಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
ಶಿಕ್ಷಣ
ನನ್ನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲ ಗ್ರಾಮೀಣ ಮತ್ತು ನಗರ ಪ್ರದೇಶದ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಿಸುವ ನಿಟ್ಟಿನಲ್ಲಿ ಪೂರಕ ವಾತಾವರಣ ನಿರ್ಮಾಣ ಮಾಡುವುದು. ಹಾಗೂ ಇದಕ್ಕೆ ಅಗತ್ಯವಿರುವ ಎಲ್ಲ ರೀತಿಯ ಮೂಲಭೂತ ಸೌಕರ್ಯ ಕಲ್ಪಿಸಲು ಬದ್ಧವಾಗಿರುವುದು.
ಆರೋಗ್ಯ
ನನ್ನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲ ಗ್ರಾಮೀಣ ಮತ್ತು ನಗರ ಪ್ರದೇಶದ ಸರ್ವ ಜನತೆಯ ಆರೋಗ್ಯ ರಕ್ಷಣೆಗಾಗಿ ಅಗತ್ಯವಿರುವ ಎಲ್ಲ ಪೂರಕ ಕ್ರಮಗಳನ್ನು ಕೈಗೊಳ್ಳಲಾಗುವುದು. ಮುಖ್ಯವಾಗಿ ವಯೋವೃದ್ಧರು, ಯುವಕರು, ಮಕ್ಕಳು ಮತ್ತು ಮಹಿಳೆಯರ ಆರೋಗ್ಯ ರಕ್ಷಣೆ, ಈ ಕಾಲದ ಮಹಾ ಮಾರಿ ಕೊರೋನಾ ನಿಯಂತ್ರಣ, ಒಟ್ಟಾರೆ ಕ್ಷೇತ್ರದ ಜನತೆಯ ಆರೋಗ್ಯ ರಕ್ಷಣೆಗಾಗಿ ಅಗತ್ಯವಿರುವ ಎಲ್ಲ ರೀತಿಯ ಮೂಲಭೂತ ಸೌಕರ್ಯ ಕಲ್ಪಿಸಲು ಬದ್ಧವಾಗಿರುವುದು.