ಪಿರಿಯಾಪಟ್ಟಣ: ದೇಶಕ್ಕೆ ಸ್ವಾತಂತ್ರ ಬಂದ ಮರುವರ್ಷ ಸ್ಥಾಪಿತವಾದ ಶಾಲೆಯ ಕೊಠಡಿಗಳು ಶಿಥಿಲಗೊಂಡು ಬೀಳುವ ಹಂತ ತಲುಪಿರುವುದರಿಂದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಯದ ವಾತವರಣದಲ್ಲೇ ಕುಳಿತು ಪಾಠಪ್ರವಚನ ಕೇಳುವ ದುಸ್ಥಿತಿ ತಾಲೂಕಿನ ಅತ್ತಿಗೋಡು ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ನಿರ್ಮಾಣವಾಗಿ ಕಾಯಕಲ್ಪಕ್ಕಾಗಿ ಕಾಯುತ್ತಿದೆ.


ಭಯದ ವಾತವರಣ: 1948ರಲ್ಲಿ ಎರಡು ಕೊಠಡಿಗಳಿಂದ ಆರಂಭವಾದ ಈ ಶಾಲೆ ಪ್ರಸ್ತುತ 8 ಕೊಠಡಿಗಳಿಂದ ಕೂಡಿದ್ದು, ಇದರಲ್ಲಿ ಹಳೆಯ ಕೊಠಡಿಗಳ ಮೇಲ್ಚಾವಣಿಯ ತಾರಸಿ ಒಡೆದುಹೋಗಿ ಕಬ್ಬಿಣದ ಸರಳುಗಳು ಕಾಣಿಸುತ್ತಿವೆ, ಗೋಡೆಗಳು ಬಿರುಕು ಬಿಟ್ಟಿದ್ದು, ಕೊಠಡಿಯ ಬಾಗಿಲು ಹಾಗೂ ಕಿಟಕಿಗಳಿಗೆ ಅಳವಡಿಸಿದ್ದ ಕಬ್ಬಿಣದ ಶೀಟ್‌ಗಳು ತುಕ್ಕುಹಿಡಿದು ಸಂಪೂರ್ಣ ಹಾಳಾಗಿ ದುರಸ್ಥಿ ಪಡಿಸಲಾಗದ ಸ್ಥಿತಿ ತಲುಪಿವೆ. ಮಳೆಗಾಲದಲ್ಲಿ ಕೊಠಡಿಯೊಳಗೆ ನೀರು ಸೋರಿ ಆವರಣ ಕೆರೆಯಂತ್ತಾಗುತ್ತಿದೆ.
ಪ್ರಸ್ತುತ ಶಾಲೆಯಲ್ಲಿ ಒಂದರಿAದ ಹತ್ತನೆ ತರಗತಿಯ ವರೆಗೆ 291 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಪ್ರಾಥಮಿಕ ಶಾಲೆಯಲ್ಲಿ 131 ವಿದ್ಯಾರ್ಥಿಗಳು, ಪ್ರೌಢಶಾಲೆಯಲ್ಲಿ 160 ವಿದ್ಯಾರ್ಥಿಗಳಿದ್ದು 11 ಮಂದಿ ಶಿಕ್ಷಕರಿದ್ದಾರೆ.
ಕಾಮಗಾರಿ ವಿಳಂಬ: 2011-12 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಹಳೆಯ ಕೊಠಡಿಗಳಿದ್ದ ಶಾಲೆಯಲ್ಲಿ ಪ್ರೌಢ ಶಾಲೆಯನ್ನು ಆರಂಭಿಸಲಾಗಿ 2014-15 ನೇ ಸಾಲಿನಲ್ಲಿ ಗ್ರಾಮದ ಮತ್ತೊಂದು ಸ್ಥಳದಲ್ಲಿ ನೂತನ 3 ಮಹಡಿಯ ಪ್ರೌಢಶಾಲಾ ಕಟ್ಟಡ ಪ್ರಾರಂಭಕ್ಕಾಗಿ ನೆಲ ಹಂತದಲ್ಲಿ 4 ಕೊಠಡಿ, ಮೊದಲ ಹಂತದಲ್ಲಿ 4 ಕೊಠಡಿ, ಎರಡನೆ ಹಂತದಲ್ಲಿ 2 ಕೊಠಡಿ ನಿರ್ಮಿಸಲು ಸರ್ಕಾರದಿಂದ ಅನುದಾನ ದೊರೆತಿದ್ದು, ಕೆಲಸ ಪ್ರಾರಂಭವಾಗಿ 3 ವರ್ಷ ಕಳೆದಿದ್ದರೂ ಕಾಮಗಾರಿ ಪೂರ್ಣಗೊಳ್ಳದೆ ಪ್ರಸ್ತುತ ಬಣ್ಣ ಹಾಗೂ ವಿದ್ಯುತ್ ಸಂಪರ್ಕದ ಕೊರತೆಯಿಂದ ಶಾಲಾ ಕೊಠಡಿಗಳ ಉದ್ಘಟನಾ ಭಾಗ್ಯ ಕಂಡಿಲ್ಲ.
ಪ್ರತಿ ಶೈಕ್ಷಣಿಕ ವರ್ಷದ ಆರಂಭದಿAದಲೂ ಶಾಲೆಯ ಮುಖ್ಯಶಿಕ್ಷಕರು ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಶಾಸಕರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಸಂಬAಧಪಟ್ಟವರು ಕ್ರಮಕೈಗೊಳ್ಳದೆ ನಿರ್ಲಕ್ಷö್ಯ ವಹಿಸುತ್ತಿದ್ದಾರೆ.
ಉತ್ತಮ ಫಲಿತಾಂಶ: ಇಂಥಹ ಸಮಸ್ಯೆಗಳ ಮಧ್ಯೆಯೂ ಈ ಶಾಲೆಯು ಪ್ರಾರಂಭವಾದಗಿನಿAದ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಶೇ.95 ಕ್ಕೂ ಹೆಚ್ಚು ಹಾಗೂ ಕಳೆದೆರಡು ಬಾರಿಯಿಂದ ಶೇ. 100 ಫಲಿತಾಂಶ ಪಡೆದು ತಾಲೂಕಿಗೆ ಕೀರ್ತಿ ತರುತ್ತಿದೆ.
ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಣವನ್ನು ಪ್ರೋತ್ಸಹಿಸಲು ಸರ್ಕಾರ ಹಲವಾರು ಯೋಜನೆಯನ್ನು ಜಾರಿಗೆ ತಂದು ಕೋಟ್ಯಾಂತರ ರೂ ವೆಚ್ಚ ಮಾಡುತ್ತಿದ್ದರು ಪ್ರಯೋಜನಕ್ಕೆ ಬಾರದಿರುವುದು ವಿಷಾದಕರ ಸಂಗತಿಯಾಗಿದ್ದು ಇನ್ನು ಮುಂದಾದರು ಸಂಬAದಿಸಿದವರು ಗಮನಹರಿಸಬೇಕೆಂದು ಶಿಕ್ಷಣಾಸಕ್ತರು ಆಗ್ರಹಿಸಿದ್ದಾರೆ.

Leave a Comment

Your email address will not be published. Required fields are marked *

error: Content is protected !!
Scroll to Top