ಪಟ್ಟಣದ ಗೋಣಿಕೊಪ್ಪ ರಸ್ತೆಯಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ತಾಲ್ಲೂಕು ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ 72ನೇ ಸ್ವಾತಂತ್ರö್ಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬ್ರಿಟೀಷರ ಆಳ್ವಿಕೆಯಿಂದ ಭಾರತ ದೇಶವನ್ನು ಮುಕ್ತಗೊಳಿಸಲು ಹಲವಾರು ನಾಯಕರು ತಮ್ಮ ಪ್ರಾಣ ಬಲಿಕೊಟ್ಟಿದ್ದಾರೆ. ದೇಶವನ್ನು ಪರಕೀಯರಿಂದ ಮುಕ್ತಿಗೊಳಿಸಿ ಸ್ವಾತಂತ್ರö್ಯ ನೀಡಿರುವ ದೇಶ ಪ್ರೇಮಿಗಳ ಮಹತ್ವವನ್ನು ಅರಿತು ನಾವೆಲ್ಲರೂ ದೇಶ ಪ್ರೇಮವನ್ನು ಮೈಗೂಡಿಸಿಕೊಂಡು ಭಾರತಾಂಬೆಯನ್ನು ಗೌರವಿಸಿ ನಾಯಕರುಗಳ ತತ್ವ ಆದರ್ಶಗಳನ್ನು ಪರಿಪಾಲಿಸಬೇಕೆಂದು ಕರೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಚಿಕ್ಕಸ್ವಾಮಿ ಮುಖ್ಯ ಭಾಷಣಕಾರರಾಗಿ ಮಾತನಾಡಿ ಸ್ವತಂತ್ರö್ಯ ಹೋರಾಟಗಾರರ ತ್ಯಾಗ ಬಲಿದಾನ ಪರಿಶ್ರಮದಿಂದ ಭಾರತೀಯರೆಲ್ಲಾ ಇಂದು ಸ್ವತಂತ್ರವಾಗಿ ಜೀವಿಸುತ್ತಿದ್ದೇವೆ, ಸ್ವತಂತ್ರö್ಯ ಪೂರ್ವ ಭಾರತದಲ್ಲಿ ಬ್ರಿಟೀಷರ ದಬ್ಬಾಳಿಕೆಯಿಂದ ಗುಲಾಮಗಿರಿ ಆಳ್ವಿಕೆ ನಡೆಯುತ್ತಿತ್ತು, ದೇಶದಿಂದ ಬ್ರಿಟೀಷರನ್ನು ಹೊರದಬ್ಬಿ ನಮಗೆ ಸ್ವಾತಂತ್ರö್ಯ ಬರಲು ಕಾರಣರಾದ ಮಹನೀಯರನ್ನು ನಾವೆಲ್ಲರೂ ನೆನೆದು ಗೌರವಿಸಿ ಅವರ ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆಯಬೇಕೆಂದು ತಿಳಿಸಿದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ತಹಶೀಲ್ದಾರ್ ಜೆ.ಮಹೇಶ್ ತಾಲ್ಲೂಕು ಆಡಳಿತ ಭವನ ಹಾಗೂ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿದರು. ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಶಾಲಾ ಮಕ್ಕಳು ನಡೆಸಿಕೊಟ್ಟ ಪಥಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನೆರೆದಿದ್ದವರನ್ನು ರಂಜಿಸಿತು. ಕಂಸಾಳೆ, ಡೊಳ್ಳುಕುಣಿತ ಹಾಗೂ ಸ್ವಾತಂತ್ರ ಹೋರಾಟಗಾರರ ವೇಶಭೂಶಣ ತೊಟ್ಟಿದ್ದ ವಿದ್ಯಾರ್ಥಿಗಳು ಸಮಾರಂಭದ ಆಕರ್ಷಣೆಯಾಗಿದ್ದರು. ತಾಲ್ಲೂಕಿನ ನಿವೃತ್ತ ಸೈನಿಕರಾದ ಸುಂಡವಾಳು ಗ್ರಾಮದ ಲೋಕನಾಥ್, ಬೆಕ್ಕರೆ ಗ್ರಾಮದ ರವಿಕುಮಾರ್, ಮಾಗಳಿ ಗ್ರಾಮದ ಮಲ್ಲೇಶ್ರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಳೆದೆರಡು ದಿನಗಳಿಂದ ತಾಲ್ಲೂಕಿನಾದ್ಯಂತ ಎಡಬಿಡದೆ ಸುರಿದ ಜಿಟಿಜಿಟಿ ಮಳೆ ಸ್ವಾತಂತ್ರö್ಯದಿನದAದು ಸ್ವಲ್ಪ ಕಡಿಮೆಯಾದ್ದರಿಂದ ಕಾರ್ಯಕ್ರಮ ಸಂಭ್ರಮದಿAದ ನಡೆಯಲು ಅವಕಾಶವಾಯಿತು.
ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ವೇಣುಗೋಪಾಲ್, ತಾ.ಪಂ.ಅಧ್ಯಕ್ಷೆ ಕೆ.ಆರ್.ನಿರೂಪ, ಜಿ.ಪಂ.ಸದಸ್ಯರಾದ ರಾಜೇಂದ್ರ, ಮಂಜುನಾಥ್, ಟಿಎಪಿಸಿಎಂಎಸ್ ಅಧ್ಯಕ್ಷ ಚಂದ್ರಶೇಖರ್, ಇಒ ಶೃತಿ, ಸಿಪಿಐ ಹೆಚ್.ಎನ್. ಸಿದ್ದಯ್ಯ, ಪುರಸಭೆ ಮುಖ್ಯಾಧಿಕಾರಿ ಕೃಷ್ಣ, ದೈಹಿಕ ಪರೀಕ್ಷಕ ಕೆ.ಎಸ್.ಮಹದೇವಪ್ಪ ಸೇರಿದಂತೆ ವಿವಿಧ ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು.