ತಾಲ್ಲೂಕಿನ ಪಂಚವಳ್ಳಿಯ ಶ್ರೀ ಬಾಲಾಜಿ ಭಾರತ್ ಗ್ಯಾಸ್ ಏಜೆನ್ಸಿ ವತಿಯಿಂದ ಉಜ್ವಲ ಯೋಜನೆಯಡಿ ಉಚಿತವಾಗಿ ಗ್ಯಾಸ್ ಪರಿಕರಗಳನ್ನು ವಿತರಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶದ ಹಲವೆಡೆ ಮಹಿಳೆಯರು ಅಡುಗೆ ತಯಾರಿಸಲು ಉರುವಲುಗಳನ್ನು ಬಳಸುತ್ತಿರುವುದರಿಂದ ಉಸಿರಾಟ ತೊಂದರೆಯ ಕಾಯಿಲೆಗಳಿಂದ ಬಳಲುತ್ತಿದ್ದು ಕಂಡುಬರುತ್ತಿತ್ತು ಈ ಯೋಜನೆಯಿಂದ ಸಮಸ್ಯೆ ನಿವಾರಣೆಯಾಗಿದ್ದು ಕೇಂದ್ರ ಸರ್ಕಾರಕ್ಕೆ ಅಭಿನಂದನೆ ತಿಳಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ 150 ಫಲಾನುಭವಿಗಳಿಗೆ ಉಚಿತವಾಗಿ ಗ್ಯಾಸ್ ಪರಿಕರಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾ.ಪಂ.ಅಧ್ಯಕ್ಷೆ ಸುಧಾ, ಸದಸ್ಯೆ ರುಕ್ಮಣಿ, ಸಂಸ್ಥೆಯ ಮಂಜುನಾಥ್, ಸಂತೋಷ್, ಮುಖೇಶ್ಕುಮಾರ್, ತಾ.ಪಂ.ಸ್ಥಾಯಿ ಸಮಿತಿ ಸದಸ್ಯ ಟಿ.ಈರಯ್ಯ, ಮುಖಂಡರಾದ ಸಿ.ಎನ್.ರವಿ, ನಿಂಗರಾಜ್, ಶಿವಕುಮಾರ್ಸ್ವಾಮಿ, ರಾಜಣ್ಣ, ತಿಮ್ಮೇಗೌಡ, ಪಿಡಿಒ ಬಸವರಾಜ್ ಮತ್ತಿತರರು ಹಾಜರಿದ್ದರು.