ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಪಟ್ಟಣದ ತಾ.ಪಂ.ಸಭಾAಗಣದಲ್ಲಿ ನಡೆದ ನಾಡಪ್ರಭು ಕೆಂಪೇಗೌಡರ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹನೀಯರನ್ನು ನಿರ್ಧಿಷ್ಟ ಜಾತಿಗಳಿಗೆ ಸೀಮಿತ ಪಡಿಸುತ್ತಾ ಜಾತಿಯ ಆಧಾರದ ಮೇಲೆ ಜಯಂತಿಗಳನ್ನು ಆಚರಿಸುತ್ತಿರುವುದು ಉತ್ತಮ ಬೆಳವಣಿಗೆಯಲ್ಲ, ಅವರು ಸಮಾಜಕ್ಕೆ ನೀಡಿದ ಕೊಡುಗೆಗಳು ಸರ್ವ ಜನರಿಗೂ ಅನ್ವಯಿಸುವುದರಿಂದ ಅವರು ನಾಡಿಗೆ ನೀಡಿರುವ ಮಹತ್ವಪೂರ್ಣ ಸಂದೇಶಗಳನ್ನು ಸಾರ್ವತ್ರಿಕವಾಗಿ ಮನವರಿಕೆ ಮಾಡಿಕೊಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ, ಎಲ್ಲಾ ಮಹನೀಯರ ಜಯಂತಿಯ ಆಚರಣೆಗಳಲ್ಲಿ ಸರ್ಕಾರಿ ರಜೆಯನ್ನು ರದ್ದುಗೊಳಿಸಿ ಸರ್ವರೂ ಆಚರಿಸಿದಲ್ಲಿ ಮಾತ್ರ ಜಯಂತಿಯ ಆಚರಣೆಗೆ ಮಹತ್ವ ಬರಲಿದೆ ಎಂದು ತಿಳಿಸಿದರು.
ಮುಖ್ಯ ಭಾಷಣಕಾರರಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಚಿಕ್ಕಸ್ವಾಮಿ ಮಾತನಾಡಿ ಕೆಂಪೇಗೌಡರ ಕನಸಿನಿಂದ ನಿರ್ಮಿತವಾದ ಬೆಂಗಳೂರು ನಗರವು ಇಂದು ವಿಶ್ವದ ಪ್ರಮುಖ ವಾಣಿಜ್ಯ ನಗರಿಯಾಗಿ ರೂಪುಗೊಂಡು ಸಿಲಿಕಾನ್ ವ್ಯಾಲಿ ಎಂದು ಹೆಸರು ಪಡೆದು ವಿಶ್ವಮಟ್ಟದಲ್ಲಿ ಹೆಸರುವಾಸಿಯಾಗಿದೆ, ವಿಜಯನಗರದ ವೈಭವಪೂರ್ಣ ಆಡಳಿತದ ಇತಿಹಾಸವನ್ನು ಅರಿತಿದ್ದ ಕೆಂಪೇಗೌಡರು ವಿವಿಧ ವೃತ್ತಿ ಆಧಾರಿತ ಜನರ ಬದುಕು ಹಸನಾಗುವಂತೆ ಬೆಂಗಳೂರು ನಗರವನ್ನು ನಿರ್ಮಿಸಿದರು.
ನಗರದಲ್ಲಿ 9 ಬೃಹತ್ ಕೆರೆಗಳನ್ನು ನಿರ್ಮಿಸಿ ಪ್ರತಿಯೊಂದು ಕೆರೆಗಳಿಗೂ ಸಂಪರ್ಕವಿರುವAತೆ ರಾಜ ಕಾಲುವೆಗಳನ್ನು ನಿರ್ಮಿಸಿದ್ದ ಕೆಂಪೇಗೌಡರ ಯೋಜನೆಗಳು ಇಂದಿಗೂ ಸ್ಮರಣೀಯವಾಗಿವೆ ಎಂದರು. ಇತ್ತೀಚಿನ ದಿನಗಳಲ್ಲಿ ಕೆರೆಗಳ ಒತ್ತುವರಿ ಹೆಚ್ಚುತ್ತಿದ್ದು ರಾಜ್ಯದಲ್ಲಿ ಈ ಹಿಂದೆ 46ಸಾವಿರದಷ್ಟಿದ್ದ ಕೆರೆಗಳ ಸಂಖ್ಯೆ ಈಗ 22ಸಾವಿರಕ್ಕೆ ಇಳಿದಿರುವುದು ಆತಂಕಕಾರಿಯಾದ ವಿಷಯವಾಗಿದೆ, ಮಹಾನ್ನಾಯಕರ ಆದರ್ಶಗಳನ್ನು ನಾವುಗಳು ಸ್ವಲ್ಪವಾದರೂ ಅಳವಡಿಸಿಕೊಂಡಲ್ಲಿ ಜಯಂತಿಯ ಆಚರಣೆಗಳಿಗೆ ಅರ್ಥ ಬರಲಿದೆ ಎಂದರು.
ಕಾರ್ಯಕ್ರಮದಲ್ಲಿ ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ರಾಮು, ಮಾಜಿ ಜಿ.ಪಂ.ಉಪಾಧ್ಯಕ್ಷ ವಿ.ಜಿ.ಅಪ್ಪಾಜಿಗೌಡ ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರಕೃತಿ ವಿಕೋಪದಿಂದ ಹಾನಿಗೊಳಗಾದವರಿಗೆ ಸರ್ಕಾರದ ವತಿಯಿಂದ ನೀಡಲಾಗುವ ಪರಿಹಾರ ಹಣದ ಚೆಕ್ಗಳನ್ನು ವಿತರಿಸಲಾಯಿತು.
ವೇದಿಕೆಯಲ್ಲಿ ಸರ್ವ ಜನಾಂಗದ ಮುಖಂಡರುಗಳು : ಕೆ.ಮಹದೇವ್ ನೂತನ ಶಾಸಕರಾಗಿ ಆಯ್ಕೆಯಾದ ನಂತರ ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ ಮೊದಲ ಕಾರ್ಯಕ್ರಮ ಇದಾಗಿದ್ದು ವೇದಿಕೆಯಲ್ಲಿ ಕೇವಲ ಒಂದು ವರ್ಗದ ನಾಯಕರುಗಳನ್ನು ಕೂರಿಸಿಕೊಳ್ಳದೆ ವಿವಿಧ ವರ್ಗಗಳ ತಾಲ್ಲೂಕಿನ ಮುಖಂಡರುಗಳನ್ನು ಆಹ್ವಾನಿಸಿ ವೇದಿಕೆಗೆ ಕರೆದದ್ದು ವಿಶೇಷವಾಗಿತ್ತು. ಶಾಸಕರು ಬೇರೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರಿಂದ ನಿಗದಿತ ಸಮಯಕ್ಕಿಂತ ಒಂದು ಗಂಟೆ ತಡವಾಗಿ ಆರಂಭವಾದರೂ ತಾಲ್ಲೂಕಿನ ವಿವಿಧ ಇಲಾಖೆಯ ಸರ್ಕಾರಿ ಅಧಿಕಾರಿಗಳು ಮತ್ತು ವಿವಿಧ ಸಮಾಜದ ಮುಖಂಡರು, ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾದು ಕುಳಿತಿದ್ದು, ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಜಿ.ಪಂ.ಸದಸ್ಯ ಪಿ.ರಾಜೇಂದ್ರ, ತಾ.ಪಂ.ಉಪಾಧ್ಯಕ್ಷೆ ಜಯಮ್ಮ, ಸದಸ್ಯರಾದ ಆರ್.ಎಸ್.ಮಹದೇವ್, ಟಿ.ಈರಯ್ಯ, ಮಲ್ಲಿಕಾರ್ಜುನ, ಮೋಹನ್ರಾಜು, ಎಪಿಎಂಸಿ ಅಧ್ಯಕ್ಷ ಆರ್.ಟಿ.ರೇವಣ್ಣ, ತಾ.ಪಂ.ಇಒ ಡಿ.ಸಿ.ಶೃತಿ, ತಹಸೀಲ್ದಾರ್ ಜೆ.ಮಹೇಶ್, ಶಿರಸ್ತೆದಾರ್ ಪ್ರಕಾಶ್, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹದೇವಪ್ಪ, ಮುಖಂಡರಾದ ಅಣ್ಣೇಗೌಡ, ಚಂದ್ರು, ರಾಮೇಗೌಡ, ದಿನೇಶ್, ಅತ್ತರ್ಮತೀನ್, ಶಿವಣ್ಣ, ನಾಗಯ್ಯ ಮತ್ತಿತರರು ಹಾಜರಿದ್ದರು.