ಮಳೆ ಹಾನಿಯಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರು ಹಾಗೂ ನಿರಾಶ್ರಿತರಿಗೆ ಶೀಘ್ರ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಆದೇಶಿಸಿದರು.
ತಾಲ್ಲೂಕಿನ ಗಡಿಭಾಗದ ಕಾವೇರಿ ತೀರದಲ್ಲಿ ಮಳೆಯಿಂದಾಗಿ ಹಾನಿಯಾಗಿರುವ ಪ್ರದೇಶಗಳಿಗೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು. ಕೊಡಗು ಭಾಗದಲ್ಲಿ ಬೀಳುತ್ತಿರುವ ಹೆಚ್ಚು ಮಳೆಯಿಂದಾಗಿ ಕಾವೇರಿ ನದಿ ತುಂಬಿ ಹರಿಯುತ್ತಿದ್ದು ಅಪಾಯದ ಮಟ್ಟ ತಲುಪಿರುವುದರಿಂದ ನದಿ ಪ್ರದೇಶದ ಹಲವು ಪ್ರದೇಶಗಳು ಜಲಾವೃತಗೊಂಡಿರುವುದರಿAದ ಅಪಾರ ಪ್ರಮಾಣದ ಹಾನಿ ಸಂಭವಿಸಿದ್ದು ಸ್ಥಳೀಯರು ಮುಂಜಾಗೃತೆಯಾಗಿ ಎಚ್ಚರ ವಹಿಸಬೇಕು. ಜಿಲ್ಲಾಡಳಿತ ಹಾಗೂ ಸಂಬAಧಿಸಿದ ಅಧಿಕಾರಿಗಳು ಕೂಡಲೇ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ನಷ್ಟದ ಅಂದಾಜು ತಯಾರಿಸಿ ವರದಿ ನೀಡಿ ಸಂತ್ರಸ್ತರಿಗೆ ಪರಿಹಾರ ಒದಗಿಸುವ ಕಾರ್ಯಕ್ಕೆ ಮುಂದಾಗಬೇಕು. ಪರಿಹಾರ ನೀಡುವಾಗ ಯಾವುದೇ ಲೋಪದೋಷಗಳಗಾದ ಹಾಗೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಮಳೆ ಹಾನಿಯಿಂದ ನಷ್ಟವಾಗಿರುವ ತಾಲ್ಲೂಕಿನ ಕೊಪ್ಪ ಭಾಗದ ಮುಸ್ಲಿಂ ಕಾಲೋನಿ, ಗೊಲ್ಡನ್ ಟೆಂಪಲ್ ರಸ್ತೆ, ಆವರ್ತಿ ರಸ್ತೆ ಗಳಿಗೆ ಭೇಟಿ ನೀಡಿ ಪರಿಶೀಲಿಸಿ ಕೊಪ್ಪದಲ್ಲಿ ತೆರೆದಿರುವ ಗಂಜಿ ಕೇಂದ್ರಕ್ಕೆ ಭೇಟಿ ನೀಡಿದರು.
ಕಂದಾಯ ಸಚಿವ ಆರ್.ವಿ.ದೇಶಪಾಂಡೆಯವರೊAದಿಗೆ ಪ್ರವಾಸೋದ್ಯಮ ಸಚಿವ ಹಾಗೂ ಕೊಡಗು ಜಿಲ್ಲಾ ಉಸ್ತುವರಿ ಸಚಿವ ಸಾ.ರಾ.ಮಹೇಶ್ ಜೊತೆಗಿದ್ದು ಮಳೆ ಹಾನಿ ಹಾಗೂ ಭೂ ಕುಸಿತದಿಂದ ಉಂಟಾಗಿರುವ ನಷ್ಟಗಳ ಬಗ್ಗೆ ವಿವರಿಸಿದರು.
ತಾಲ್ಲೂಕಿನ ಕೊಪ್ಪ ಹಾಗೂ ರಾಜನಬಿಳಗುಲಿ ಗ್ರಾಮಗಳಲ್ಲಿ ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ.
ಈ ಸಂದರ್ಭದಲ್ಲಿ ಮಾಜಿ ಶಾಸಕ ವಾಸು, ಮೈಮುಲ್ ನಿರ್ದೇಶಕ ಪಿ.ಎಂ.ಪ್ರಸನ್ನ, ಜಿ.ಪಂ.ಸದಸ್ಯ ರಾಜೇಂದ್ರ, ಉಪವಿಭಾಗಾಧಿಕಾರಿ ನಿತೀಶ್ಕುಮಾರ್, ತಹಸೀಲ್ದಾರ್ ಜೆ.ಮಹೇಶ್, ಉಪತಹಸೀಲ್ದಾರ್ ಕುಬೇರ್, ಸಿಪಿಐ ಹೆಚ್.ಎನ್.ಸಿದ್ದಯ್ಯ, ಹಾಜರಿದ್ದರು.
ಪಿರಿಯಾಪಟ್ಟಣ ತಾಲ್ಲೂಕಿನ ಕಾವೇರಿ ನದಿ ಪ್ರದೇಶಗಳು ಸೇರಿದಂತೆ ಹಲವೆಡೆ ಕೆರೆಕಟ್ಟೆಗಳು ತುಂಬಿ ಹರಿಯುತ್ತಿವೆ. ಹಲವೆಡೆ ಮನೆಗಳು ಹಾಗೂ ತಂಬಾಕು ಬ್ಯಾರನ್ಗಳು ಕುಸಿದು ಅಪಾರ ಪ್ರಮಾಣದ ನಷ್ಟವಾದ ವರದಿಯಾಗಿದೆ.
ಮುಖ್ಯಮಂತ್ರಿಗಳಿಗೆ ಶಾಸಕ ಕೆ.ಮಹದೇವ್ ಮನವಿ : ಪಿರಿಯಾಪಟ್ಟಣ ಶಾಸಕ ಕೆ.ಮಹದೇವ್ ಗುರುವಾರ ಮುಖ್ಯಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವರಿ ಸಚಿವ ಜಿ.ಟಿ.ದೇವೇಗೌಡರನ್ನು ಭೇಟಿ ಮಾಡಿ ಮಳೆಯಿಂದ ತಾಲ್ಲೂಕಿನ ವಿವಿಧ ಪ್ರದೇಶಗಳಲ್ಲಾಗಿರುವ ನಷ್ಟದ ಪ್ರಮಾಣದ ಬಗ್ಗೆ ವಿವರಿಸಿ ಜಿಲ್ಲಾಧಿಕಾರಿಗಳ ವರದಿಯನ್ನು ಆಧರಿಸಿ ಕೂಡಲೇ ತಾಲ್ಲೂಕಿಗೆ ಅಗತ್ಯವಿರುವ ಪರಿಹಾರದ ಹಣವನ್ನು ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿದ್ದಾರೆ. ಶನಿವಾರದಂದು ಅಧಿಕಾರಿಗಳೊಂದಿಗೆ ತಾಲ್ಲೂಕಿನ ಹಾನಿಗೊಳಗಾದ ಪ್ರದೇಶಗಳು ಹಾಗೂ ನಿರಾಶ್ರಿತರನ್ನು ಭೇಟಿ ನೀಡಲಿದ್ದಾರೆ.
ನೆರವಿನ ಮಹಾಪೂರ : ಪಿರಿಯಾಪಟ್ಟಣ ಆರಕ್ಷಕ ಇಲಾಖೆ ವತಿಯಿಂದ ಸಿಪಿಐ ಹೆಚ್.ಎನ್.ಸಿದ್ದಯ್ಯ ನೇತೃತ್ವದಲ್ಲಿ ಹಾರಂಗಿ ಭಾಗದ ಸುಮಾರು 500 ನಿರಾಶ್ರಿತರಿಗೆ ಕುಡಿಯುವ ನೀರಿನ ಬಾಟಲ್, ಬಿಸ್ಕೇಟ್, ಬ್ರೇಡ್, ಚಿಪ್ಸ್ ವಿತರಿಸಲಾಯಿತು.
ಪಿರಿಯಾಪಟ್ಟಣ ಸೇವಾ ಭಾರತಿ ಸಂಸ್ಥೆಯ ಪದಾಧಿಕಾರಿಗಳು ಪಟ್ಟಣದ ಜವಳಿ ವರ್ತಕರು ಹಾಗೂ ಸಾರ್ವಜನಿಕರಿಂದ ಬ್ಲಾಂಕೇಟ್, ಮಕ್ಕಳ ಉಡುಪುಗಳು, ಸ್ಪೇಟರ್ ಸಂಗ್ರಹಿಸಿ ಸುಂಟಿಕೊಪ್ಪದ ನಿರಾಶ್ರಿತ ಕೇಂದ್ರಕ್ಕೆ ನೀಡಿದರು.
ಪಟ್ಟಣದ ರೋಟರಿ ಸಂಸ್ಥೆ, ಲಕ್ಷಿö್ಮÃ ಹೆಲ್ತ್ಕೇರ್ ಸೆಂಟರ್, ಆರೋಗ್ಯಭಾರತಿ, ಸಹಯೋಗದಲ್ಲಿ ಕೊಪ್ಪ ಬಳಿರುವ ಇಬ್ಬನಿ ಪ್ಯಾರಡೇಸ್ ಖಾಸಗಿ ಹೋಟೆಲ್ನಲ್ಲಿ ಗಂಜಿ ಕೇಂದ್ರ ತೆರೆದು ಕೊಡಗು ಭಾಗದ ನಿರಾಶ್ರಿತರಿಗೆ ಉಚಿತವಾಗಿ ಊಟ, ವಸತಿ, ವೈದ್ಯಕೀಯ ಸೌಲಭ್ಯ ಒದಗಿಸಿದ್ದಾರೆ.