ಪಟ್ಟಣದಲ್ಲಿ ಅಂಬೇಡ್ಕರ್ ಸೇನೆ ತಾಲ್ಲೂಕು ಘಟಕದ ಕಚೇರಿಯನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು. ನಾನು ಈ ಬಾರಿ ಶಾಸಕನಾಗಿ ಆಯ್ಕೆಯಾಗಲು ದಲಿತರು ಕಾರಣವಾಗಿದ್ದು ಅವgನ್ನು ನಮ್ಮ ಕುಟುಂಬದ ಸದಸ್ಯರೆಂದು ಭಾವಿಸಿದ್ದೇನೆ ಎಂದರು. ಯಾವುದೇ ಸಂಘಟನೆಗಳು ತುಳಿತಕ್ಕೊಳಗಾದವರವನ್ನು ಮೇಲೆತ್ತುವ ಕೆಲಸ ಮಾಡುವ ಮೂಲಕ ಸಂಘನೆಯ ಗುರಿ ತಲು¥ಲು ಯತ್ನಿಸ ಬೇಕು ಎಂದು ತಿಳಿಸಿದರು. ಸಮಾಜದಲ್ಲಿ ಮೂಡನಂಬಿಕೆ, ಕಂದಾಚಾರದAತಹ ಅನಿಷ್ಠ ಪದ್ದತಿಯನ್ನು ಕೈಬಿಟ್ಟು ದಲಿತ ಸಮಾಜದವರು ಕೈಬಿಟ್ಟು ತಮ್ಮ ಆರ್ಥಿಕಾಭಿವೃದ್ದಿಯ ಕಡೆ ಹೆಚ್ಚು ಒತ್ತು ನೀಡ ಬೇಕು ಎಂದು ಮನವಿ ಮಾಡಿದರು. ಸಮಾಜದಲ್ಲಿ ಅನ್ಯಾಂiÀi ಜರುಗಿದಾಗ ಅದರ ವಿರುದ್ಧ ದ್ವನಿ ಎತ್ತುವ ಮೂಲಕ ಸಮಾಜದ ಕಟ್ಟಕಡೆಯ ಜನರಿಗೆ ನ್ಯಾಯ ದೊರಕಿಸಿಕೊಡುವ ಕೆಲಸ ಮಾಡಲು ಸಂಘಟನೆಗಳು ಮುಂದಾಗ ಬೇಕಿದೆ ಎಂದು ತಿಳಿಸಿದರು.
ಎಲ್ಲಾ ಜಾತಿ ಜನಾಂಗದವರು ನಾವೆಲ್ಲೂ ಒಂದೆ ಎಂಬ ಭಾವನೆಯಿಂದ ಬದುಕಿದರೆ ಸಮಾಜದಲ್ಲಿ ಸಂಘರ್ಷವಿಲ್ಲದೆ ಶಾಂತಿಯಿAದ ಬದುಕ ಬಹುದು ಎಂದು ತಿಳಿಸಿದರು.
ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ಪಿ.ಮೂರ್ತಿ ಮಾತನಾಡಿ ರಾಜ್ಯಾದ್ಯಂತ ದಲಿತ ಸಂಘಟನೆಗೆ ಯುವ ನಾಯಕತ್ವದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ದಲಿತರ ಹೆಸರಿನಲ್ಲಿ ಅಧಿಕಾರ ಅನುಭವಿಸುತ್ತಿರುವ ರಾಜಕಾರಣಿಗಳಿಂದ ಇದುವರೆಗೆ ಸಮಾಜಕ್ಕೆ ಯಾವುದೇ ಪ್ರಯೋಜನವಿಲ್ಲ ಎಂದು ಆರೋಪಿಸಿದರು. ಕಾನೂನಿನಲ್ಲಿ ದಲಿತರಿಗೆ ಕಲ್ಪಿಸಿರುವ ಅಟ್ರಾಸಿಟಿ ಕಾಯಿದೆಯನ್ನು ಕೆಲವು ಕಿಡಿಗೇಡಿಗಳು ದುರ್ಬಳಕೆ ಮಾಡಿಕೊಂಡು ದಲಿತ ಸಮಾಜ ತಲೆ ತಗ್ಗಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಸಮಾರಂಭದಲ್ಲಿ ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಈರಯ್ಯ, ಸದಸ್ಯ ಎಸ್.ರಾಮು ಮಾತನಾಡಿದರು.
ಸಮಾರಂಭದಲ್ಲಿ ಪುರಸಭೆ ಅಧ್ಯಕ್ಷ ವೇಣುಗೋಪಾಲ್, ತಾಲ್ಲೂಕು ಸಮಿತಿ ಅಧ್ಯಕ್ಷ ಸಿ.ಕೆ.ರಾಜಣ್ಣ, ಕಾರ್ಯಾಧ್ಯಕ್ಷ ಬಸವರಾಜು, ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಮನುಕುಮಾರ, ಉಪಾಧ್ಯಕ್ಷರಾದ ದಾಸರಾಜು,ಚಿಕ್ಕರಾಜು,ಖಜಾಂಚಿ ಗಣೇಶ, ಮುಖಂಡರಾದ ಬಿ.ಶಿವಣ್ಣ, ವಸಂತ್ ಸೇರಿದಂತೆ ಹಲವರು ಹಾಜರಿದ್ದರು.