ಪಟ್ಟಣದ ತಾ.ಪಂ.ಸಭಾAಗಣದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಕನ್ನಡ ನಾಡು ಅನ್ಯ ಭಾಷಿಗರಿಗೂ ಸಹ ಜೀವನ ನಡೆಸಲು ನೆಲೆ ನೀಡಿದೆ, ಬಹುಭಾಷೆಗಳ ನಾಡು ಕನ್ನಡನಾಡು, ಅಂತಹ ನಾಡಿನಲ್ಲಿ ಹುಟ್ಟಿರುವುದು ನಮ್ಮಗಳ ಸುದೈವವಾಗಿದೆ, ಕನ್ನಡ ನಾಡಿಗೆ ಗೌರವ ಸಲ್ಲಿಸಬೇಕಾದರೆ ಪ್ರತಿಯೊಬ್ಬರೂ ಹೆಚ್ಚಿನ ಭಾಷಾಭಿಮಾನ ಬೆಳೆಸಿಕೊಳ್ಳಬೇಕು, ಬಹಳ ವರ್ಷಗಳ ನಂತರ ತಾಲ್ಲೂಕಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ತಾಲ್ಲೂಕಿನ ಜನತೆಗೆ ಖುಷಿ ತಂದಿದ್ದು ಈ ಅವಧಿಯಲ್ಲಿ ನಾನು ತಾಲ್ಲೂಕಿನ ಶಾಸಕನಾಗಿರುವುದಕ್ಕೆ ಹೆಮ್ಮೆ ಎನಿಸುತ್ತದೆ. ತಾಲ್ಲೂಕಿನ ಪ್ರತಿಯೊಂದು ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸ್ವಇಚ್ಚೆಯಿಂದ ಭಾಗವಹಿಸುವುದರ ಮುಖಾಂತರ ಸಮ್ಮೇಳನದ ಯಶಸ್ಸಿಗೆ ಸಹಕಾರ ನೀಡಬೇಕು. ಜವಾಬ್ದಾರಿಗಳನ್ನು ನಿರ್ವಹಿಸುವುದು ಕಠಿಣವಾಗಿದ್ದರೂ ಸಹ ನಾಡುನುಡಿಯ ವಿಚಾರ ಬಂದಾಗ ನಾವೆಲ್ಲರೂ ಮೊದಲು ಕನ್ನಡ ನಾಡಿನ ವಿಷಯಕ್ಕೆ ಬದ್ದರಾಗಬೇಕು, ಸಮ್ಮೇಳನಕ್ಕೆ ಅಗತ್ಯವಿರುವ ಹಣಕಾಸು ವಿಚಾರ ಹಾಗೂ ಬಂದAತಹ ಅತಿಥಿಗಳ ಸತ್ಕಾರ ವಿಚಾರದಲ್ಲಿ ಯಾವುದೇ ಲೋಪದೋಷಗಳಾಗದಂತೆ ಶಿಸ್ತು ಬದ್ದತೆಯಿಂದ ಪ್ರತಿಯೊಬ್ಬರೂ ತೊಡಗಿಸಿಕೊಳ್ಳುವಂತೆ ಮನವಿ ಮಾಡಿದರು.
ಆದೇಶ : ಸಭೆಗೆ ಗೈರಾಗಿದ್ದ ಅಧಿಕಾರಿಗಳಿಗೆ ಸ್ವತ: ಶಾಸಕರೇ ದೂರವಾಣಿ ಕರೆ ಮಾಡಿ ಮುಂದಿನ ದಿನಗಳಲ್ಲಿ ಸಕ್ರಿಯವಾಗಿ ಸಮ್ಮೇಳನದ ಸಿದ್ದತೆಯಲ್ಲಿ ತೊಡಗಿಸಿಕೊಳ್ಳುವಂತೆ ಸೂಚಿಸಿದರು. ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನದಲ್ಲಿ ಪಾಲ್ಗೊಳ್ಳುವುದರಿಂದ ಸಮ್ಮೇಳನದ ಕಾರ್ಯಚಟುವಟಿಕೆಗಳ ಬಗ್ಗೆ ಪ್ರತಿನಿತ್ಯ ನಿಗಾ ವಹಿಸುವಂತೆ ತಹಸೀಲ್ದಾರ್ ರವರಿಗೆ ತಿಳಿಸಿದರು.
ಮುಖಂಡರಾದ ಅಣ್ಣöಯ್ಯಶೆಟ್ಟಿ ಮಾತನಾಡಿ ಸಮ್ಮೇಳನದ ಯಶಸ್ಸಿಗೆ ರಚಿಸಿರುವ ಸಮಿತಿಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಕೇವಲ ನೆಪಮಾತ್ರವಾಗಿ ಆಹ್ವಾನ ಪತ್ರಿಕೆಗಳಲ್ಲಿನ ಹೆಸರಿಗೆ ಸೀಮಿತವಾಗದೆ ತಮಗೆ ವಹಿಸಿದ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ನಾಡಿಗೆ ಮತ್ತು ಸಾಹಿತ್ಯ ಬದುಕಿಗೆ ಗೌರವ ತಂದುಕೊಟ್ಟು ಅದ್ದೂರಿಯಾಗಿ ವಿಶಿಷ್ಟತೆಯಿಂದ ಸಮ್ಮೇಳನ ನಡೆಸುವಂತೆ ಸಹಕರಿಸಬೇಕೆಂದು ಕೋರಿದರು.
ತಾ.ಪಂ.ಅಧ್ಯಕ್ಷೆ ಕೆ.ಆರ್.ನಿರೂಪ ಮಾತನಾಡಿ ಜನಪ್ರತಿನಿಧಿಗಳು ಕೇವಲ ಹೆಸರಿಗೆ ಮತ್ತು ಪದವಿಗೆ ಸೀಮಿತವಾಗದೆ ಎಲ್ಲರನ್ನೂ ಪಕ್ಷಾತೀತವಾಗಿ ಒಗ್ಗೂಡಿಸಿಕೊಂಡು ಸಮ್ಮೇಳನದ ಯಶಸ್ಸಿಗೆ ಪ್ರತಿಯೊಬ್ಬರ ಪಾತ್ರ ಅಪಾರವಾಗಿದೆ ಎಂದರು.