ನಂತರ ಮಾತನಾಡಿದ ಅವರು ರಾಜಕೀಯದಲ್ಲಿ ಸರಳ, ಸಜ್ಜನಿಕೆಗೆ ಹೆಸರಾಗಿದ್ದ ಅನಂತಕುಮಾರ್ ರವರ ನಿಧನ ರಾಜಕೀಯ ವಲಯದಲ್ಲಿ ತುಂಬಲಾರದ ನಷ್ಟವಾಗಿದೆ, ರಾಜ್ಯದ ಸಮಸ್ಯೆಗಳನ್ನು ಪಕ್ಷಾತೀತವಾಗಿ ಸಂಸತ್ ಭವನದಲ್ಲಿ ಚರ್ಚಿಸಿ ಪರಿಹಾರ ದೊರಕಿಸುತ್ತಿದ್ದರು, ತಮ್ಮ ರಾಜಕೀಯ ಜೀವಿತಾವಧಿಯಲ್ಲಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಪಕ್ಷ ಸಂಘಟಿಸಿದ ಮಹಾನ್ ಚತುರ ಅವರಾಗಿದ್ದರು, ಭಗವಂತ ಅವರ ಕುಟುಂಬಕ್ಕೆ ದು:ಖ ಭರಿಸುವ ಶಕ್ತಿ ನೀಡಲಿ ಎಂದು ಕೋರಿದರು.
ಇದೇ ವೇಳೆ ಗ್ರಾಮಸ್ಥರು ಶಾಸಕರಾಗಿ ಆಯ್ಕೆಯಾದ ನಂತರ ಮೊದಲ ಬಾರಿ ಗ್ರಾಮಭೇಟಿ ನೀಡಿದ್ದರಿಂದ ಹಾರ ತುರಾಯಿ ಹಾಗೂ ಮೆರವಣಿಗೆಯೊಂದಿಗೆ ಸನ್ಮಾನಿಸಲು ಮುಂದಾದಾಗ ಶಾಸಕರು ಪ್ರತಿಕ್ರಿಯಿಸಿ ಪೂರ್ವನಿಗದಿಯಂತೆ ಕಾರ್ಯಕ್ರಮ ಇದ್ದುದರಿಂದ ತಮ್ಮ ಗ್ರಾಮಕ್ಕೆ ಆಗಮಿಸಿದ್ದೇನೆ, ರಾಜ್ಯದಲ್ಲಿ ಶೋಕಾಚರಣೆ ಇರುವುದರಿಂದ ಸಂಭ್ರಮಿಸುವುದು ಬೇಡ ಎಂದು ಮನವಿ ಮಾಡಿ ಹಾರ ತುರಾಯಿಯನ್ನು ನಿರಾಕರಿಸಿದರು.
ಅಕ್ರಮ ಗಣಿಗಾರಿಕೆಗೆ ಕಡಿವಾಣ : ಶಾಸಕರು ತಾಲ್ಲೂಕಿನ ರಾಗಿಆಲದಮರ ಗ್ರಾಮದಲ್ಲಿ ಕುಂದು ಕೊರತೆ ಆಲಿಸುವಾಗ ಸ್ಥಳೀಯರು ಗಣಿಗಾರಿಕೆಗೆ ತಾವು ತಡೆಹಿಡಿದಿರುವುದರಿಂದ ಕೆಲಸವಿಲ್ಲದೆ ಜೀವನ ನಿರ್ವಹಣೆ ಕಷ್ಟವಾಗಿದೆ, ಎಂಬ ಪ್ರಶ್ನೆಗೆ ಶಾಸಕರು ಉತ್ತರಿಸಿ ತಾಲ್ಲೂಕಿನ ಹಲವೆಡೆ ನೀತಿ ನಿಯಮಗಳನ್ನು ಮೀರಿ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿರುವುದರಿಂದ ಸ್ಥಳೀಯರಿಗೆ ತೊಂದರೆಯಾಗುತ್ತಿದ್ದು ಅಂತಹವರ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸುವಂತೆ ಸಂಬAಧಿಸಿದ ಇಲಾಖೆಗಳಿಗೆ ತಿಳಿಸಿದ್ದೇನೆ ಹೊರತು ನಿಮ್ಮ ಕೆಲಸಕ್ಕೆ ನಾನೇಕೆ ಅಡ್ಡಿಪಡಿಸಲಿ ಎಂದು ಉತ್ತರಿಸಿದರು.
ಈ ಸಂದರ್ಭ ಜಿ.ಪಂ.ಸದಸ್ಯೆ ರುದ್ರಮ್ಮ ನಾಗಯ್ಯ, ತಾ.ಪಂ.ಸದಸ್ಯೆ ಪುಷ್ಪಲತಾ ಪುಟ್ಟಸ್ವಾಮಿ, ಮಾಜಿ ಸದಸ್ಯ ಅತ್ತರ್ ಮತೀನ್, ಗ್ರಾ.ಪಂ.ಅಧ್ಯಕ್ಷ ಲೋಕೇಶ್, ಉಪಾಧ್ಯಕ್ಷ ಮಲ್ಲೇಶ್, ಸದಸ್ಯರಾದ ರಾಮಸ್ವಾಮಿ, ಅಯ್ಯರ್ ಗಿರಿ, ಸುರೇಶ್, ಜಗದೀಶ್, ಶಾಯಿನ್ ಬಾನು, ನಾಗಯ್ಯ, ಜೆಡಿಎಸ್ ಯುವ ಘಟಕ ಅಧ್ಯಕ್ಷ ವಿದ್ಯಾಶಂಕರ್, ಮುಖಂಡರಾದ ಅಲೀಜಾನ್, ರಘು, ಲೋಕೇಶ್, ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ತಾಲ್ಲೂಕಿನ ಬೆಕ್ಕರೆ ಗ್ರಾಮದ ಶ್ರೀ ಬಾಲಚಂದ್ರ ಬಸವೇಶ್ವರ ದೇವಾಲಯದಲ್ಲಿ ಕಾರ್ತಿಕ ಮಾಸದ ವಿಶೇಷ ಉತ್ಸವ ಪೂಜೆಗೆ ಸೋಮವಾರ ಚಾಲನೆ ದೊರೆಯಿತು.
ದೀಪಾವಳಿ ಅಮಾವಾಸ್ಯೆ ದಿನದಿಂದ ದೇವಾಲಯದಲ್ಲಿ ಕಾರ್ತಿಕ ಮಾಸದ ವಿಶೇಷ ಪೂಜೆಗಳು ಆರಂಭವಾಗಲಿದ್ದು ಪ್ರತಿ ಸೋಮವಾರ ಹಾಗೂ ಶುಕ್ರವಾರಗಳಂದು ಹರಕೆ ಹೊತ್ತ ಭಕ್ತಾದಿಗಳು ಉತ್ಸವ ಪೂಜೆ ನೆರವೇರಿಸಲಿದ್ದು ಉಳಿದ ದಿನಗಳಲ್ಲಿ ಪ್ರತಿದಿನ ಸಂಜೆ ದೇವಾಲಯದ ಆವರಣದಲ್ಲಿ ಪೂಜೆ ನಡೆಯಲಿದೆ. ಉತ್ಸವ ದಿನಗಳಂದು ದೇವಾಲಯವನ್ನು ವಿವಿಧ ಪುಷ್ಪಗಳು ಹಾಗೂ ತಳಿರು ತೋರಣ ಮತ್ತು ವಿದ್ಯುತ್ ದೀಪಗಳಿಂದ ಅಲಂಕರಿಸಿ ಶ್ರೀ ಬಾಲಚಂದ್ರ ಬಸವೇಶ್ವರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ನಡೆಸುವುದು ಹಿಂದಿನ ಕಾಲದಿಂದಲೂ ನಡೆದುಬಂದ ಸಂಪ್ರದಾಯವಾಗಿದೆ. ಕಡೆ ಕಾರ್ತಿಕ ಸೋಮವಾರದ ಮುಂದಿನ ಸೋಮವಾರ ಗ್ರಾಮದಲ್ಲಿ ಕಡೆ ಕಾರ್ತಿಕ ಪೂಜೆಯನ್ನು ಅದ್ದೂರಿಯಾಗಿ ಆಚರಿಸಿ ಕಾರ್ತಿಕ ಮಾಸದ ವಿಶೇಷ ಪೂಜೆಗಳಿಗೆ ತೆರೆ ಬೀಳಲಿದೆ. ಗ್ರಾಮದಲ್ಲಿ ಬಸವ ಇರುವುದು ಸಹ ವಿಶೇಷವಾಗಿದೆ.
ಈ ಸಂದರ್ಭ ನೂರಾರು ಭಕ್ತಾದಿಗಳು ಆಗಮಿಸಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಲಿದ್ದಾರೆ.