ತಾಲೂಕಿನಲ್ಲಿ ನೆರೆ ಹಾವಳಿಯಿಂದ ಸಂಕಷ್ಟಕ್ಕೀಡಾದ ರೈತರು ಹಾಗೂ ಮಳೆ ಹಾನಿಯಿಂದಾಗಿ ಮನೆ ಕಳೆದುಕೊಂಡವರ ಸ್ಥಳಗಳಿಗೆ ಅಧಿಕಾರಿಗಳು ಖುದ್ದು ಭೇಟಿ ನೀಡಿ ನಷ್ಟದ ಅಂದಾಜು ತಯಾರಿಸಿ ಪರಿಹಾರದ ಸಮಗ್ರ ವರದಿ ನೀಡುವಂತೆ ಶಾಸಕ ಕೆ. ಮಹದೇವ್ ಅಧಿಕಾರಿಗಳಿಗೆ ಆದೇಶಿಸಿದರು.

ಪಿರಿಯಾಪಟ್ಟಣ ತಾಲ್ಲೂಕಿನ ಗಡಿ ಭಾಗದ ನದಿ ತೀರದ ಜಲಾವೃತ ಪ್ರದೇಶಗಳು ಹಾಗೂ ಮಳೆ ಹಾನಿಯಿಂದ ಮನೆ ಕಳೆದುಕೊಂಡ ಸಂತ್ರಸ್ತರನ್ನು ಭೇಟಿ ನೀಡಿ ಮಾತನಾಡಿದರು. ಈ ಬಾರಿ ಬಿದ್ದ ಅತಿ ಹೆಚ್ಚು ಮಳೆಯಿಂದಾಗಿ ಹಲವು ಪ್ರದೇಶಗಳು ಜಲಾವೃತವಾಗಿದ್ದು ರೈತರು ಬೆಳೆದಿದ್ದ ಬೆಳೆಯೂ ನಷ್ಟವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ , ಹಲವರು ತಮ್ಮ ವಾಸದ ಮನೆಗಳನ್ನು ಕಳೆದುಕೊಂಡು ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಹಲವೆಡೆ ಜಲಾವೃತವಾಗಿರುವುದರಿಂದ ರಸ್ತೆಗಳು ನೀರಿನಲ್ಲಿ ಮುಳುಗಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿದೆ. ಬಿರುಕು ಬಿಟ್ಟ ಮನೆಗಳಲ್ಲಿ ವಾಸಿಸುತ್ತಿದ್ದವರನ್ನು ಸ್ಥಳಾಂತರಿಸಿ ಕೂಡಲೇ ಅವರಿಗೆ ರ‍್ಯಾಯ ವ್ಯವಸ್ಥೆ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಆದೇಶಿಸಿದರು. ತಾಲ್ಲೂಕಿನಾದ್ಯಂತ ಮಳೆಯಿಂದಾಗಿ ಮನೆ ಕುಸಿತ ಉಂಟಾಗಿದ್ದು ಅಧಿಕಾರಿಗಳು ಅಂತಹವರನ್ನು ಭೇಟಿ ಮಾಡಿ ಸ್ಥಳದಲ್ಲೇ ವರದಿ ತಯಾರಿಸಿ ಪರಿಹಾರ ವಿತರಿಸುವಂತೆ ತಿಳಿಸಿದರು. ರೈತರು ಬೆಳೆದ ಬೆಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ನಷ್ಟದ ವರದಿ ತಯಾರಿಸುವಂತೆಯು ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಸೂಚಿಸಿದರು.
ಗಂಜಿ ಕೇಂದ್ರದಲ್ಲಿ ನಿರಾಶ್ರಿತರೊಂದಿಗೆ ಊಟ ಮಾಡಿದ ಶಾಸಕ : ನೆರೆ ಹಾವಳಿ ಪ್ರದೇಶಗಳಿಗೆ ಭೇಟಿ ನೀಡುವ ಸಂರ‍್ಭ ತಾಲ್ಲೂಕಿನ ಕೊಪ್ಪದಲ್ಲಿ ತೆರೆದಿರುವ ಗಂಜಿ ಕೇಂದ್ರಕ್ಕೆ ಭೇಟಿ ನೀಡಿದ ಶಾಸಕರು ಸ್ಥಳೀಯ ಸ್ವಯಂ ಸೇವಾ ಸಂಸ್ಥೆಗಳು ಗಂಜಿ ಕೇಂದ್ರಗಳಿಗೆ ವಿತರಿಸಿದ ಆಹಾರ ಪದರ‍್ಥಗಳು ಹಾಗೂ ವಸ್ತುಗಳನ್ನು ಸ್ವೀಕರಿಸಿ ಗಂಜಿ ಕೇಂದ್ರಗಳಿದ್ದ ನಿರಾಶ್ರಿತರೊಂದಿಗೆ ಊಟದ ಸವಿ ಸವಿದು ಸರಳತೆ ಮೆರೆದರು.
ಈ ಸಂರ‍್ಭ ಜಿ.ಪಂ.ಸದಸ್ಯರಾದ ರಾಜೇಂದ್ರ , ಜಯಕುಮಾರ್ ತಹಸೀಲ್ದಾರ್ ಜೆ.ಮಹೇಶ್ , ಇಒ ಡಿ.ಸಿ ಶ್ರುತಿ , ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರಾಮೇಗೌಡ , ಬಿಇಒ ಚಿಕ್ಕಸ್ವಾಮಿ , ಸಾರಿಗೆ ಅಧಿಕಾರಿ ಹೇಮಂತ್ ಕುಮಾರ್ , ಜಿ.ಪಂ ಇಂಜಿನಿಯರ್ ಆಲಿ ಮುಖಂಡರಾದ ಅಣ್ಣಯ್ಯ ಶೆಟ್ಟಿ , ಸೋಮಶೇಖರ್ , ಅಯ್ಯರ್ ಗಿರಿ , ಅರಸು ಯುವ ಬ್ರಿಗೇಡ್ ಸ್ವಯಂ ಸಂಸ್ಥೆಯ ಯಶವಂತ್ ಅರಸ್ , ಪುನೀತ್ ಅರಸ್ , ಪ್ರಜ್ವಲ್ ಅರಸ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top