ತಾಲ್ಲೂಕಿನ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ (ಪಿಎಸಿಸಿಎಸ್) ನಡೆದ ನಿರ್ದೆðಶಕರ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಜಯಭೇರಿ ಭಾರಿಸುವ ಮೂಲಕ ಅಧಿಕಾರದ ಗದ್ದುಗೆ ಏರುವಲ್ಲಿ ಯಶಸ್ವಿಯಾಗಿದ್ದಾರೆ.

ಪಟ್ಟಣದÀ ಕಸಬಾ ಸಹಕಾರ ಸಂಘಕ್ಕೆ 5 ವರ್ಷಗಳ ಆಡಳಿತ ಮಂಡಳಿಗೆ ಭಾನುವಾರ ಚುನಾವಣೆ ನಿಗಧಿಯಾಗಿತ್ತು. ಈ ಚುನಾವಣೆಯು ಪಟ್ಟಣದಲ್ಲಿ ಶಾಸಕ ಕೆ.ಮಹದೇವ್ ನೇತೃತ್ವದಲ್ಲಿ ನಡೆದ ಮೊದಲ ಚುನಾವಣೆಯಾಗಿದ್ದು, ಒಟ್ಟು 12 ಸ್ಥಾನಗಳಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು 11 ಸ್ಥಾನವನ್ನು ಗೆಲ್ಲುವ ಮೂಲಕ ಪ್ರಥಮ ಬಾರಿಗೆ ಪಟ್ಟಣದ ಕಸಬಾ ಸಹಕಾರವನ್ನು ಜೆಡಿಎಸ್ ವಶ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರು, ಕಾಂಗ್ರೆಸ್ ಬೆಂಬಲಿತರು ಕೇವಲ 1 ಸ್ಥಾನವನ್ನು ಗೆಲ್ಲುವ ಮೂಲಕ ಮುಖಭಂಗ ಅನುಭವಿಸುಂತಾಗಿದೆ. ಸಹಕಾರ ಸಂಘಕ್ಕೆ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ರಮೇಶ್, ಪಿ.ಕೆ.ಕುಮಾರ್, ಬೆಕ್ಯಾ ಸತೀಶ್‌ಕುಮಾರ್, ನಟರಾಜು, ವಿ.ಆರ್.ವೆಂಕಟೇಶ್, ಶಿವಣ್ಣ, ಪಾರ್ವತಿ, ಗೀತಾ, ಸೈಯದ್ ಸಿರಾಜ್, ಸಣ್ಣಪ್ಪ, ಕರಿನಾಯಕ ಗೆಲುವು ಸಾಧಿಸಿದರೆ. ಕಾಂಗ್ರೆಸ್ ಬೆಂಬಲಿತ ಪ್ರಭುಕುಮಾರ್ ಮಾತ್ರ ಜಯಗಳಿಸಿದರು.
ಈ ಸಂದರ್ಭದಲ್ಲಿ ಶಾಸಕ ಕೆ.ಮಹದೇವ್ ನೂತನ ನಿರ್ದೆಶಕರನ್ನು ಅಭಿನಂಧಿಸಿ ಮಾತನಾಡಿ ಕಸಬಾ ಸಹಕಾರ ಸಂಘವು ಪ್ರಾರಂಭವಾಗಿದಾಗಿನಿAದ ಇದುವರೆಗೂ ಕಾಂಗ್ರೆಸ್ ಹಿಡಿತದಲ್ಲಿತ್ತು ನಾನು ಶಾಸಕನಾಗಿ ಆಯ್ಕೆಯಾದ ನೂರುದಿನಗಳಾದ ಹಿನ್ನೆಲೆಯಲ್ಲಿ ಈ ಸಹಕಾರ ಸಂಘದ ಗೆಲುವನ್ನು ಕೊಡುಗೆಯಾಗಿ ನೀಡಿದ್ದಾರೆ. ಅದೇರೀತಿ ತಾಲೂಕಿನಲ್ಲಿ ಇಂದು ವಿವಿಧ 5 ಸಹಕಾರ ಸಂಘಗಳಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಅಧಿಕಾರದ ಗದ್ದುಗೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಸಿ.ಎನ್.ರವಿ, ರಘುನಾಥ್, ಪ್ರದೀಪ್, ಸುರೇಶ್, ಚಂದ್ರು, ಶ್ರೀನಿವಾಸ್, ರಘು, ಚುನವಣಾಧಿಕಾರಿಗಳಾದ ಎ.ಹಸೀನಾ, ಸಹಕಾರ ಸಂಘದ ಸಿಇಒ ಪ್ರವೀಣ್ ಸೇರಿದಂತೆ ಮತ್ತಿತರರು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top