ಗ್ರಾಮ ಸ್ಪಂದನ ಕಾರ್ಯಕ್ರಮ ಅಂಗವಾಗಿ ತಾಲ್ಲೂಕಿನ ಮಾಕೋಡು ಗ್ರಾ.ಪಂ.ವ್ಯಾಪ್ತಿಯ ಗ್ರಾಮಗಳಾದ ಆರ್.ಹೊಸಹಳ್ಳಿ, ಮಂಟಿಕೊಪ್ಪಲು, ಹೆಗ್ಗಡಿಕೊಪ್ಪಲು, ಗಂಗೂರು, ಮಾಕೋಡು, ಕೆರೆಮೇಗಳಕೊಪ್ಪಲು, ಸೀಗಡಿಕಟ್ಟೆ, ಮಲಗನಕೆರೆ, ಶೆಟ್ಟಹಳ್ಳಿ ಮತ್ತು ಶೆಟ್ಟಹಳ್ಳಿ ಕೊಪ್ಪಲುಗಳಿಗೆ ಭೇಟಿ ನೀಡಿ ಕುಂದುಕೊರತೆಗಳ ಬಗ್ಗೆ ಸಮಾಲೋಚಿಸಿ ಅವರು ಮಾತನಾಡಿದರು.
ತಾಲ್ಲೂಕಿನ ವಿವಿದೆಡೆ ಮೂಲಭೂತ ಸೌಕರ್ಯಗಳ ಕೊರತೆ ತಾಂಡವವಾಡುತ್ತಿದ್ದು ಗ್ರಾಮಗಳಿಗೆ ಭೇಟಿ ನೀಡಿದ ಕಡೆಗಳಲ್ಲೆಲ್ಲಾ ಮನವಿಗಳು ಸಾಕಷ್ಟು ಬರುತ್ತಿದ್ದು ಸಂಬAಧಿಸಿದ ಅಧಿಕಾರಿಗಳಿಗೆ ಅಭಿವೃದ್ದಿಯ ಕಡೆ ಗಮನ ಹರಿಸುವಂತೆ ಸೂಚಿಸಿದ್ದೇನೆ. ಅಭಿವೃದ್ದಿಯ ವಿಚಾರದಲ್ಲಿ ನನ್ನ ಪ್ರಗತಿಯನ್ನು ಸಹಿಸದ ವಿರೋಧಿಗಳು ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ, ಚುನಾವಣಾ ಫಲಿತಾಂಶದ ನಂತರ ತಾಲ್ಲೂಕಿನ ಜನತೆಗೆ ಅಭಿವೃದ್ದಿಯ ಸತ್ಯಾಂಶ ತಿಳಿದಿದೆ. ಕಳೆದ ಎರಡು ಚುನಾವಣೆಗಳಲ್ಲಿ ಸೋಲು ಅನುಭವಿಸಿದ್ದರೂ ಗ್ರಾಮಾಂತರ ಪ್ರದೇಶದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲಿಸಿ ಶಾಸಕನಾಗಿ ಆಯ್ಕೆ ಮಾಡಿರುವುದಕ್ಕೆ ಚ್ಯುತಿ ಬರದಂತೆ ಕೆಲಸ ನಿರ್ವಹಿಸುವ ಭರವಸೆ ನೀಡಿದರು.
ಈ ವೇಳೆ ಗ್ರಾಮಸ್ಥರುಗಳು ರಸ್ತೆ, ಸಾರಿಗೆ, ಕುಡಿಯುವ ನೀರು, ಕೆರೆಗಳಿಗೆ ನೀರು ತುಂಬಿಸುವ ಸಮಸ್ಯೆಗಳ ಬಗ್ಗೆ ಶಾಸಕರಿಗೆ ಮನವಿ ಸಲ್ಲಿಸಿದರು. ಮಾಕೋಡು ಗ್ರಾಮದ ಮುಖಂಡ ಜವರಪ್ಪ ಮಾತನಾಡಿದರು.
ಈ ಸಂದರ್ಭ ತಾ.ಪಂ.ಉಪಾಧ್ಯಕ್ಷೆ ಜಯಮ್ಮ ಜವರಪ್ಪ, ಇಒ ಡಿ.ಸಿ.ಶೃತಿ, ಜಿ.ಪಂ.ಮಾಜಿ ಸದಸ್ಯ ಶಿವಣ್ಣ, ಮುಖಂಡರಾದ ಅಣ್ಣಯ್ಯಶೆಟ್ಟಿ, ಆರ್.ಎಲ್.ಮಣಿ, ಸಮಾಜ ಕಲ್ಯಾಣಾಧಿಕಾರಿ ರಾಮೇಗೌಡ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವಿಜಯ್, ಜಿ.ಪಂ.ಇAಜಿನಿಯರ್ ಅರ್ಷದ್ ಪಾಷ, ಗ್ರಾಮೀಣ ನೈರ್ಮಲ್ಯ ಕುಡಿಯುವ ನೀರು ಅಭಿವೃದ್ದಿ ಇಲಾಖೆ ಎಇಇ ಪ್ರಭು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಮುಖಂಡರುಗಳು ಹಾಜರಿದ್ದರು.