ದೇವಾಲಯದ ಅಭಿವೃದ್ಧಿಗೆ 4.95 ಕೋಟಿ ಅನುದಾನ ಬಿಡಗಡೆ ಮಾಡಿಸಲಾಗಿದೆ ತಾಲ್ಲೂಕಿನ ಅಭಿವೃದ್ಧಿ ಮಾಡಲು ಗ್ರಾಮ ದೇವತೆ ಇನ್ನು ಹೆಚ್ಚಿನ ಶಕ್ತಿ ನೀಡಿದರೆ ತಾಲ್ಲೂಕು ಅಭಿವೃದ್ಧಿ ಪಥದತ್ತ ಸಾಗಲಿದೆ ಎಂದು ಶಾಸಕ ಕೆ.ಮಹದೇವ್ ತಿಳಿಸಿದರು.

ಪಟ್ಟಣದ ರೋಟರಿ ಭವನದಲ್ಲಿ ಭಾನುವಾರ ಮಸಣೀಕಮ್ಮ ದೇವಾಲಯ ಅಭಿವೃದ್ಧಿ ಸಮಿತಿವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ದೇವಾಲಯದ ಸುತ್ತಮುತ್ತ ಇರುವ ಅಕ್ರಮ ಅಂಗಡಿ ಮಳಿಗೆಗಳನ್ನು ಪುರಸಭೆ ತೆರವುಗೊಳಿಸಿದರೆ ಇನ್ನೂ 2 ಕೋಟಿ ಅನುದಾನ ತಂದು ಹೆಚ್ಚಿನ ಅಭಿವೃದ್ಧಿ ಕಾರ್ಯ ನಡೆಸಲಾಗುವುದು ತೆರವುಗೊಳಿಸುವ ಕಾರ್ಯ ನಡೆಯದಿದ್ದರೆ ಬೆಟ್ಟದಪುರದಲ್ಲಿ ಯಾತ್ರಿ ನಿವಾಸ ನಿರ್ಮಾಣಕ್ಕಾಗಿ ಆ ಹಣವನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ ಎಂದರು. ನನ್ನ ರಾಜಕೀಯ ವಿರೋಧಿಗಳು ನನಗೆ ಗ್ರಾಮ ದೇವತೆ ಮಸಣೀಕಮ್ಮ ಆಶೀರ್ವದಿಸಿಲ್ಲ ಎಂದು ಅಪಪ್ರಚಾರ ಮಾಡಿದರು. ಆದರೆ ತಾಲ್ಲೂಕಿನ ಜನತೆಯ ಆಶೀರ್ವಾದ ಮತ್ತು ತಾಯಿ ಆಶೀರ್ವಾದ ಇಬ್ಬರ ಆಶೀರ್ವಾದ ನನಗೆ ದೊರಕಿ ಶಾಸಕನಾಗಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಪಿ.ಎಂ.ವಿನೋದ್, ಪಿ.ಸಿ.ಕೃಷ್ಣ, ಮಂಜುನಾಥ್ ಸಿಂಗ್, ಮಂಜುಳಾಚೆನ್ನಬಸವರಾಜು, ರವಿ, ಪ್ರಕಾಶ್ ಸಿಂಗ್, ಅರ್ಷದ್, ಭಾರತಿ, ಶ್ವೇತಕುಮಾರ್, ಸುವರ್ಣ, ಮಹೇಶ್, ಪ್ರಕಾಶ್, ರೇವತಿ,ರತ್ನಮ್ಮ, ನೂರ್‌ಜಾನ್, ನೂರುಲ್ಲಾಖಾನಂ ಅವರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಡಿ.ಪುಟ್ಟರಾಜು, ಸಮಿತಿ ಅಧ್ಯಕ್ಷ ಎಸ್.ಆರ್.ಎಸ್.ಗೌಡ, ಉಪಾಧ್ಯಕ್ಷ ಎಚ್.ಸಿ.ಬಸವರಾಜು, ಸಂಚಾಲಕ ಬಿ.ವಿ.ಜವರೇಗೌಡ, ಕಾರ್ಯದರ್ಶಿ ಕಾಂತರಾಜು, ಖಜಾಂಚಿ ಷಣ್ಮುಖರಾವ್, ¸ಹಸಂಚಾಲಕ ಅಣ್ಣಯ್ಯ, ಸದಸ್ಯರಾದ ನೇಮಿಚಂದ್ ಜೈನ್, ಡಾ.ಪ್ರಕಾಶ್ ಬಾಬುರಾವ್, ಪಿ.ವಿ.ಕುಮಾರಸ್ವಾಮಿ ಸೇರಿದಂತೆ ಹಲವರು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top