ತಾಲ್ಲೂಕಿನ ಸುಳಗೋಡು, ಪಾರೇಕೊಪ್ಪಲು, ಹಬಟೂರು, ತಿಮಕಾಪುರ, ಹುಣಸವಾಡಿ, ನವಿಲೂರು, ಬೆಮ್ಮತಿ, ಐಲಾಪುರ, ನಂದಿನಾಥಪುರ ಚೌತಿ, ಲಕ್ಷಿö್ಮÃಪುರ, ಕೋಗಿಲವಾಡಿ, ಭೂತನಹಳ್ಳಿ, ಆಲನಹಳ್ಳಿ, ಗ್ರಾಮಗಳಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಿ ಸಾರ್ವಜನಿಕರಿದಂದ ಕುಂದುಕೊರತೆ ಬೇಡಿಕೆಗಳನ್ನು ಸ್ವೀಕರಿಸಿ ಮಾತನಾಡಿದರು. ಈ ಹಿಂದೆ ತಾಲ್ಲೂಕಿನ ಶಾಸಕರಾಗಿದ್ದ ದಿ. ಕಾಳಮರೀಗೌಡ ಹಾಗೂ ಹೆಚ್.ಸಿ.ಬಸವರಾಜುರವರು ವಿಧಾನಸಭಾ ಚುನಾವಣಾ ಪೂರ್ವ ಸರ್ಕಾರದಿಂದ ಅನುದಾನಗಳನ್ನು ತಂದು ಗುದ್ದಲಿಪೂಜೆ ನೆರವೇರಿಸಿದ್ದರು ಆದರೆ ಅವರುಗಳು ಚುನಾವಣೆಯಲ್ಲಿ ಸೋತ ಸಂದರ್ಭ ಶಾಸಕರಾಗಿ ಆಯ್ಕೆಯಾದ ಮಾಜಿ ಶಾಸಕ ಕೆ.ವೆಂಕಟೇಶ್‌ರವರು ಮತ್ತೆ ಅದೇ ಕಾಮಗಾರಿಗಳಿಗೆ ಚಾಲನೆ ನೀಡುವಾಗ ಮಾಜಿ ಶಾಸಕರುಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರೆ ಎಂದು ಪ್ರಶ್ನಿಸಿದರು. ಸೋಲಿನ ಹತಾಶೆಯಿಂದ ಕಗ್ಗೆಟ್ಟಿರುವ ಕಾಂಗ್ರೆಸ್ ಪಕ್ಷದ ಮುಖಂಡರುಗಳು ಅಧಿಕಾರಿಗಳ ವಿರುದ್ದ ಮಾತನಾಡುತ್ತಿರುವುದು ಅವರ ರಾಜಕೀಯ ಅಧಿಕಾರದ ದುರಾಸೆಯನ್ನು ಎತ್ತಿ ತೊರಿಸುತ್ತದೆ. ಹೋರಾಟದ ಮೂಲಕ ಪಕ್ಷ ಸಂಘಟನೆ ಮಾಡಿ ಕಾರ್ಯಕರ್ತರ ಬೆನ್ನೆಲುಭಾಗಿ ನಿಂತು ಶಾಸಕನಾಗಿ ಆಯ್ಕೆಯಾಗಿದ್ದೇನೆ. ಆರೋಪಗಳನ್ನು ಬಿಟ್ಟು ತಾಲ್ಲೂಕಿನ ಅಭಿವೃದ್ದಿಗೆ ಸಹಕರಿಸಲಿ ಎಂದರು.
ಹಾಡಿಗಳ ಅಭಿವೃದ್ದಿಗೆ ಆದೇಶ : ತಾಲ್ಲೂಕಿನ ಹೊಸೂರು ಕರೆಮಾಳದ ಬೋಜಯ್ಯಹಾಡಿಗೆ ಭೇಟಿ ನೀಡಿ ಗಿರಿಜನರ ಮೂಲಭೂತ ಸೌಕರ್ಯಗಳ ಸಮಸ್ಯೆಗಳನ್ನು ಆಲಿಸಿ ರಸ್ತೆ, ವಿದ್ಯುತ್, ಕುಡಿಯುವ ನೀರು, ಚರಂಡಿ ವ್ಯವಸ್ಥೆಯನ್ನು ಇನ್ನೆರಡು ತಿಂಗಳ ಒಳಗಾಗಿ ಕಲ್ಪಿಸಬೇಕೆಂದು ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಆದೇಶ ಮಾಡಿದರು.
ತಾಲ್ಲೂಕು ಪ್ರವಾಸ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದ ಅಧಿಕಾರಿಗಳಿಗೆ ಸಾರ್ವಜನಿಕ ಕೆಲಸ ಮಾಡಲು ಇಷ್ಟವಿಲ್ಲದಿದ್ದರೆ ನಮ್ಮ ತಾಲ್ಲೂಕಿನಿಂದ ಬೇರೆಡೆಗೆ ವರ್ಗಾವಣೆ ಪಡೆದುಹೋಗಲಿ ಎಂದು ಎಚ್ಚರಿಸಿದರು.
ಬೈಕ್‌ನಲ್ಲಿ ಕುಳಿತ ಶಾಸಕ : ಪಟ್ಟಣದ ಟ್ಯಾಂಕ್ ಬಡಾವಣೆಯ ಕುಂದುಕೊರತೆ ಆಲಿಸಲು ಹೊರಟ ಸಂದರ್ಭ ಆ ರಸ್ತೆಯಲ್ಲಿ ಕಾರು ಚಲಯಿಸಲು ಆಗದ ಕಾರಣ ಕಾರ್ಯಕರ್ತರ ಬೈಕ್ ಏರಿ ಹೊರಟು ನಿವಾಸಿಗಳ ಸಮಸ್ಯೆ ಆಲಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯ ಕೆ.ಸಿ.ಜಯಕುಮಾರ್, ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ರಾಮು, ಸದಸ್ಯ ಟಿ.ಈರಯ್ಯ, ಮಾಜಿ ಸದಸ್ಯ ರಘುನಾಥ್, ಗ್ರಾ.ಪಂ.ಸದಸ್ಯರಾದ ಆಶಾ, ರವಿ, ಮಾಜಿ ಅಧ್ಯಕ್ಷ ಪ್ರದೀಪ್, ಮುಖಂಡರಾದ ತಮ್ಮಣ್ಣಯ್ಯ, ವಸಂತ, ಚನ್ನಪ್ಪ, ಶಿವಣ್ಣ, ರಾಮಚಂದ್ರು, ಹೆಚ್.ಕೆ.ಶಿವರಾಜ್, ಸಿದ್ದೇಗೌಡ, ಕರೀಗೌಡ, ರಘು, ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.