ಪ್ರತಿಯೊಬ್ಬರು ಪರಿಸರ ಸಂರಕ್ಷಣೆಗೆ ಒತ್ತು ನೀಡಿ ಹೆಚ್ಚು ಗಿಡಮರಗಳನ್ನು ಬೆಳೆಸುವಂತೆ ಶಾಸಕ ಕೆ. ಮಹದೇವ್ ಕರೆ ನೀಡಿದರು.

ತಾಲ್ಲೂಕಿನ ಕುಂದನಹಳ್ಳಿ ಗ್ರಾಮದಲ್ಲಿ ಅರಣ್ಯ ಇಲಾS,ೆ ತಾಲ್ಲೂಕು ಪಂಚಾಯಿತಿ, ಬಿಸಿಎಂ ಇಲಾಖೆ, ವಿಜ್ಞಾನ ಪರಿಷತ್ ಸಹಯೋಗದಲ್ಲಿ ಬಿಸಿಎಂ ವಿದ್ಯಾರ್ಥಿ ನಿಲಯದಲ್ಲಿ ನಡೆದ ವನಮಹೋತ್ಸವ ಹಾಗೂ ಪರಿಸರ ಜಾಗೃತಿ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪರಿಸರ ನಾಶದಿಂದಾಗಿ ವಾತಾವರಣದಲ್ಲಿ ಉತ್ತಮ ಗಾಳಿ ಸಿಗದೆ ಉಸಿರಾಡಲು ಕಷ್ಟವಾಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಮಾನವನ ಅತಿ ಆಸೆಗೆ ಪರಿಸರ ನಾಶವಾಗುತ್ತಿದ್ದು ಅದರ ನೇರ ಪರಿಣಾಮವನ್ನು ನಾವೇ ಎದುರಿಸಬೇಕಾಗಿರುವುದರಿಂದ ನಾವೆಲ್ಲರೂ ಎಚ್ಚೆತ್ತುಕೊಂಡು ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದರು.
ರಾಜ್ಯ ಪರಿಸರ ಪರಿಸ್ಕೃತ ಶಿಕ್ಷಕ ಹಾಗೂ ರಾಜ್ಯ ವಿಜ್ಞಾನ ಪರಿಷತ್ ಪರಿಸರ ಜಾಗೃತಿ ಆಂದೋಲನ ಸಂಚಾ¯ಕ ಟಿ.ಜಿ. ಪ್ರೇಮ್‌ಕುಮಾರ್ ಮಾತನಾಡಿ ಪ್ರಾಕೃತಿಕ ಸಂಪನ್ಮೂಲಗಳ ನಾಶದಿಂದ ಪರಿಸರ ಹಾಳಾಗುತ್ತಿದೆ, ಹೆಚ್ಚು ಪ್ಲಾಸ್ಟಿಕ್ ವಸ್ತುಗಳ ಬಳಕೆಯಿಂದ ಪರಿಸರ ವಿನಾಶದತ್ತ ಸಾಗುತ್ತಿದ್ದು ನಾವೆಲ್ಲರೂ ಎಚ್ಚೆತ್ತು ಪರಿಸರ ಸಂರಕ್ಷಣೆಗೆ ಮುಂದಾಗದಿದ್ದರೆ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ. ಅರಣ್ಯ ಇಲಾಖೆ ವತಿಯಿಂದ ಉಚಿತವಾಗಿ ಸಸಿಗಳ ವಿತರಣೆಯಾಗುತ್ತಿದ್ದು ರೈತರು ತಮ್ಮ ಜಮೀನಿನ ಖಾಲಿ ಜಾಗಗಳಲ್ಲಿ ಗಿಡಮರಗಳನ್ನು ಬೆಳೆಸಬೇಕು ಎಂದರು.
ತಾ.ಪA. ಸದಸ್ಯ ಎಸ್. ರಾಮು ಮಾತನಾಡಿ ಪರಿಸರ ಸಂರಕ್ಷಣೆ ಕಾರ್ಯಕ್ರಮ ಕೇವಲ ಒಂದು ದಿನಕ್ಕೆ ಸೀಮಿತವಾಗದೇ ಪ್ರತಿನಿತ್ಯ ನಮ್ಮ ಸುತ್ತಮುತ್ತಲಿನ ಗಿಡಮರಗಳನ್ನು ಸಂರಕ್ಷಿಸಿ ಬೆಳೆಸಿದಾಗ ನಮಗೆ ಉಸಿರಾಡಲು ಉತ್ತಮ ಗಾಳಿ ಸಿಗುತ್ತದೆ. ವಿದ್ಯಾರ್ಥಿಗಳು ಹೆಚ್ಚಾಗಿ ಪರಿಸರ ಸಂರಕ್ಷಣೆ ಮಹತ್ವವನ್ನು ಅರಿತು ಇತರರಿಗೂ ತಿಳಿಸಬೇಕು ಎಂದರು
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಕುಂದನಹಳ್ಳಿ ಶಿವಣ್ಣ ಅವರನ್ನು ಸನ್ಮಾನಿಸಿ ವಿವಿಧ ಬಗೆಯ 150 ಕ್ಕೂ ಹೆಚ್ಚು ಗಿಡಗಳನ್ನು ನೆಡಲಾಯಿತು.
ಸಾಮಾಜಿಕ ಅರಣ್ಯ ಇಲಾಖೆಯ ಅರಣ್ಯ ಅಧಿಕಾರಿ ಎಲ್. ಶೈಲಜಾ, ಬಿಸಿಎಂ ಅಧಿಕಾರಿ ಮೋಹನ್ ಮುಖಂಡರಾದ ಸಿ.ಎನ್. ರವಿ, ಚನ್ನಪ್ಪ, ಗೋವಿಂದೇಗೌಡ ಮಂಜುನಾಥ್, ಗಣೇಶ್, ಕುಮಾರ್, ಲೋಕೇಶ್, ಜಯರಾಮ್, ಸಿದ್ದಪ್ಪ ಉಪ್ಪಾರ್ ಹಾಜರಿದ್ದರು

Leave a Comment

Your email address will not be published. Required fields are marked *

error: Content is protected !!
Scroll to Top