ಮಳೆ ಹಾನಿ ಹಾಗೂ ನೆರೆ ಹಾವಳಿಯಿಂದ ಸಂಕಷ್ಟಕ್ಕೊಳಗಾದ ತಾಲ್ಲೂಕಿನ ಪ್ರದೇಶಗಳಿಗೆ ಶಾಸಕ ಕೆ.ಮಹದೇವ್ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸುವ ಸಂದರ್ಭ ಸಂಘ ಸಂಸ್ಥೆಗಳು ನೀಡಿದ ನೆರವನ್ನು ನಿರಾಶ್ರಿತರಿಗೆ ವಿತರಿಸಿದರು.

ತಾಲ್ಲೂಕಿನ ಆವರ್ತಿ, ಮುತ್ತಿನಮುಳುಸೋಗೆ, ದಿಂಡಗಾಡು, ಆನಂದನಗರ, ಚಿಕ್ಕನೇರಳೆ ಸೇರಿದಂತೆ ತಾಲೂಕಿನ ಹಲವು ಗ್ರಾಮಗಳ ನಷ್ಟಗೊಂಡ ಸ್ಥಳ ಪರಿಶೀಲನೆ ವೇಳೆ ಅರಸು ಯುವ ಬ್ರಿಗೇಡ್, ಅಳಿಲು ಸೇವಾ ಸಂಸ್ಥೆ, ಅಖಿಲ ಕರ್ನಾಟಕ ರವಿಚಂದ್ರನ್ ಅಭಿಮಾನಿ ಸಂಘದ ವತಿಯಿಂದ ನಿರಾಶ್ರಿತರಿಗೆ ಬ್ಲಾಂಕೆಟ್ ಗಳನ್ನು ವಿತರಿಸಿ ಮಾತನಾಡಿದ ಅವರು ಈ ಬಾರಿಯ ಹೆಚ್ಚು ಮಳೆಗೆ ಹಲವರು ತಮ್ಮ ಮನೆ ಹಾಗು ಜಮೀನುಗಳನ್ನು ಕಳೆದುಕೊಂಡಿದ್ದು ಅಂತಹವರಿಗೆ ತಾರತಮ್ಯ ಮಾಡದೆ ಪಕ್ಷಾತೀತವಾಗಿ ನೆರವು ನೀಡುತ್ತೇನೆ ಹಾಗೂ ತಾಲೂಕಿನ ಹಲವು ಸಂಘ ಸಂಸ್ಥೆಗಳು ಹಾನಿಗೊಳಗಾದ ಜನತೆಗೆ ಆತ್ಮಸ್ಥೆöÊರ್ಯ ತುಂಬಿ ನೆರವು ನೀಡುತ್ತಿರುವುದು ಶ್ಲಾಘನೀಯ ಎಂದರು.
ಅರಸು ಯುವ ಬ್ರಿಗೇಡ್ ನ ಸಂಚಾಲಕ ಯಶವಂತ ಅರಸ್ ಮಾತನಾಡಿ ಕೊಡಗಿನಲ್ಲಷ್ಟೇ ಅಲ್ಲದೆ ಕಾವೇರಿ ತೀರದ ನಮ್ಮ ತಾಲ್ಲೂಕಿನ ಹಲವು ಭಾಗಗಳಲ್ಲಿ ಅಪಾರ ನಷ್ಟವುಂಟಾಗಿದೆ. ಸಮಾನ ಮನಸ್ಕ ಸ್ವಯಂಸೇವಾ ಸಂಸ್ಥೆಗಳ ಸಹಾಯದೊಂದಿಗೆ ನಿರಾಶ್ರಿತರಿಗೆ ಕೈಲಾದ ಸಹಾಯ ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ಕೊಡಗಿನ ಹಾನಿಯುಂಟಾದ ಪ್ರದೇಶಗಳ ಸ್ವಚ್ಚತೆಗೆ ಸಂಘದವರು ಧಾವಿಸಲಿದ್ದೇವೆ ಎಂದರು. ಕೊಡಗಿಗೂ ಸಹ ತಮ್ಮ ಕೈಲಾದ ಅಗತ್ಯ ವಸ್ತುಗಳನ್ನು ಪೂರೈಸಿ ನಿರಾಶ್ರಿತರಿಗೆ ತಲುಪಿಸುವ ಕೆಲಸವನ್ನು ಸದಸ್ಯರು ಮಾಡುತ್ತಿದ್ದಾರೆ ಎಂದರು.
ಇದೇ ಸಂದರ್ಭ ತಾಲ್ಲೂಕಿನ ರಾಜನಬಿಳಗುಲಿಯಲ್ಲಿ ತೆರೆದಿರುವ ಗಂಜಿ ಕೇಂದ್ರದ ನಿರಾಶ್ರಿತರಿಗೆ ಶಾಸಕ ಕೆ.ಮಹದೇವ್ ಸಾಂತ್ವನ ಹೇಳಿ ಸಂಘ ಸಂಸ್ಥೆಯವರು ನೀಡಿದ ಬ್ಲಾಂಕೆಟ್ ಗಳನ್ನು ವಿತರಿಸಿದರು.
ತಹಸೀಲ್ದಾರ್ ಜೆ.ಮಹೇಶ್, ಜಿ.ಪಂ.ಸದಸ್ಯ ರಾಜೇಂದ್ರ, ಅಳಿಲು ಸೇವಾ ಸಂಸ್ಥೆ, ಅಖಿಲ ಕರ್ನಾಟಕ ರವಿಚಂದ್ರನ್ ಅಭಿಮಾನಿ ಸಂಘದ ಜಿಲ್ಲಾಧ್ಯಕ್ಷ ಬೆಕ್ಕರೆ ಸತೀಶ್‌ಆರಾಧ್ಯ, ಅರಸು ಯುವ ಬ್ರಿಗೇಡ್ ನ ಪುನೀತ್ ಅರಸ್, ಪ್ರಜ್ವಲ್ ಅರಸ್, ಮುಖಂಡರಾದ ಸೋಮಶೇಖರ್, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top