ಮಾಜಿ ಶಾಸಕ ಕೆ.ವೆಂಕಟೇಶ್‌ರವರು ಪಟ್ಟಣದ ಜನತೆಗೆ ಶಾಸಕರಾಗಿದ್ದ ಅವಧಿಯ ಸುಳ್ಳು ಮಾಹಿತಿ ಮತ್ತು ಅಭಿವೃದ್ದಿ ಕಾರ್ಯಗಳ ಪುಸ್ತಕ ಮುದ್ರಿಸಿ ಮನೆಮನೆಗೆ ತಲುಪಿಸಿ ಜನತೆಯ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಅವರ ಅವಧಿಯ ಅಭಿವೃದ್ದಿ ಕಾರ್ಯಗಳ ಬಗ್ಗೆ ಸಾರ್ವಜನಿಕವಾಗಿ ಬಹಿರಂಗ ಚರ್ಚೆಗೆ ಬರಲಿ ಉತ್ತರಿಸುವೇ ಎಂದು ಶಾಸಕ ಕೆ.ಮಹದೇವ್ ಸವಾಲೆಸೆದರು.

ಇತ್ತಿಚಿಗೆ ತಾಲ್ಲೂಕಿನ 10 ಸಹಕಾರ ಸಂಘಗಳಿಗೆ ನಡೆದ ಚುನಾವಣೆಗಳಲ್ಲಿ ಜೆಡಿಎಸ್ ಬೆಂಬಲಿತ 120 ನಿರ್ದೇಶಕರಲ್ಲಿ 105 ನಿರ್ದೇಶಕರು ಆಯ್ಕೆಯಾಗುವ ಮೂಲಕ ತಾಲ್ಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ಜೆಡಿಎಸ್ ಶಕ್ತಿಯನ್ನು ಹೆಚ್ಚಿಸಿದ್ದಾರೆ. ಜನತೆಯ ಬೆಂಬಲಕ್ಕೆ ಧನ್ಯಾವಾದ ತಿಳಿಸಿ ಅವರು ಪಕ್ಷದ ಮೇಲಿಟ್ಟಿರುವ ನಂಬಿಕೆಗೆ ಚ್ಯುತಿ ಬರದಂತೆ ಕೆಲಸ ನಿರ್ವಹಿಸುವುದಾಗಿ ತಿಳಿಸಿದರು. ಕಾಂಗ್ರೆಸ್ ಬೆಂಬಲಿತರು ಕೇವಲ 15 ನಿರ್ದೇಶಕರು ಆಯ್ಕೆಯಾಗುವ ಮೂಲಕ ತಾಲ್ಲೂಕಿನಲ್ಲಿ ಕಾಂಗ್ರೆಸ್ ಹೀನಾಯ ಸ್ಥಿತಿಗೆ ತಲುಪುತ್ತಿರುವುದಕ್ಕೆ ನಿದರ್ಶನವಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರೈತರ ಸಾಲಮನ್ನಾ ಮಾಡುವ ದೃಢ ನಿರ್ಧಾರದಿಂದ ರೈತರು ಜೆಡಿಎಸ್ ಪಕ್ಷವನ್ನು ಬೆಂಬಲಿಸುವ ನಿರ್ಣಯ ಕೈಗೊಂಡಿರುವುದು ಸಂತಸದ ಬೆಳವಣಿಯಾಗಿದೆ. ಅಂತೆಯೇ ಪಟ್ಟಣದ ಮತದಾರರು ಮುಂಬರುವ ಪುರಸಭಾ ಚುನಾವಣೆಯಲ್ಲಿ ಎಲ್ಲಾ ವಾರ್ಡ್ಗಳಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಳ ಪರ ಮತನೀಡುವ ಭರವಸೆ ಇದೆ. ಮಾಜಿ ಶಾಸಕ ಕೆ.ವೆಂಕಟೇಶ್ ಸೋಲಿನ ಹತಾಶೆಯಿಂದಾಗಿ ನನ್ನ ವಿರುದ್ದ ಹೇಳಿಕೆಗಳನ್ನು ನೀಡುತ್ತಿದ್ದು ಪಟ್ಟಣದ ಅಭಿವೃದ್ದಿಯಲ್ಲಿ ನನ್ನ ಕೊಡುಗೆ ಏನೆಂಬುದು ಮತದಾರರಿಗೆ ತಿಳಿದಿದೆ. ಈ ಬಗ್ಗೆ ಮಾಜಿ ಶಾಸಕರು ನನ್ನೊಂದಿಗೆ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು. ಕಳೆದ 30 ವರ್ಷಗಳ ಅವರ ರಾಜಕೀಯ ಜೀವನ ಹಾಗೂ ನನ್ನ 30 ತಿಂಗಳ ಪ.ಪಂ.ಅಧ್ಯಕ್ಷ ಅವಧಿಯ ಕೆಲಸಗಳು ಏನೆಂಬುದು ಜನರ ಮುಂದೆ ಚರ್ಚೆಯಾಗಲಿ ಅವರ ಅವಧಿಯಲ್ಲಿ ತುಘಲಕ್ ದರ್ಬಾರ್ ಮಾದರಿ ಆಡಳಿತ ನಡೆಸಿದ್ದರು ಎಂದು ಆರೋಪಿಸಿದರು. ಮಾಜಿ ಶಾಸಕರ ಆಡಳಿತಾವಧಿಯ ಕಿರುಹೊತ್ತಿಗೆಯ ಮಾಹಿತಿಗಳೆಲ್ಲವು ಶುದ್ದ ಸುಳ್ಳಿನಿಂದ ಕೂಡಿವೇ ಇದಕ್ಕೆಲ್ಲ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ತಾ.ಪಂ.ಸದಸ್ಯರಾದ ಎಸ್.ರಾಮು, ಮೋಹನ್‌ರಾಜ್, ಪುರಸಭಾ ಸದಸ್ಯ ಅಮ್ಜದ್ ಷರೀಫ್, ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಸಿ.ಎನ್.ರವಿ, ರೈತ ಮೋರ್ಚಾ ತಾಲ್ಲೂಕು ಅಧ್ಯಕ್ಷ ದೇವರಾಜು, ಮುಖಂಡರಾದ ಶಿವಣ್ಣ, ಜಿ.ಗೋವಿಂದೇಗೌಡ, ಚನ್ನಯ್ಯ, ಲೋಕೇಶ್ ಮತ್ತಿತರರು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top