ತಾಲ್ಲೂಕಿನ ಬೆಕ್ಕರೆ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದ ಕುಂದುಕೊರತೆಗಳನ್ನು ಆಲಿಸಿ ಅವರು ಮಾತನಾಡಿ ಹೆಚ್.ಡಿ.ಕುಮಾರಸ್ವಾಮಿಯವರು ಬೆಟ್ಟದಪುರಕ್ಕೆ ಚುನಾವಣಾ ಪ್ರಚಾರಕ್ಕೆಂದು ಆಗಮಿಸಿದ್ದ ವೇಳೆ ಅವರನ್ನು ಬೆಕ್ಕರೆ ಗ್ರಾಮದ ದೇವಾಲಯಕ್ಕೆ ಭೇಟಿ ನೀಡಿಸಿ ರಾಜ್ಯದ ಮುಖ್ಯಮಂತ್ರಿಯಾಗಲೆAದು ಹಾಗೂ ನಾನು ಶಾಸಕನಾಗಿ ಆಯ್ಕೆಯಾಗಲೆಂದು ವಿಶೇಷ ಪೂಜೆ ಸಲ್ಲಿಸಿ ಹರಕೆ ಹೊತ್ತಿದ್ದೆವು, ಭಗವಂತನ ದಯೆಯಿಂದ ಹೆಚ್.ಡಿ.ಕುಮಾರಸ್ವಾಮಿಯವರು ರಾಜ್ಯದ ಮುಖ್ಯಮಂತ್ರಿಯಾಗಿದ್ದು ಮುಂಬರುವ ದಿನಗಳಲ್ಲಿ ಅವರನ್ನು ದೇವಾಲಯಕ್ಕೆ ಕರೆತಂದು ಹರಕೆ ತೀರಿಸುವುದಾಗಿ ತಿಳಿಸಿದರು.
ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಸಮುದಾಯ ಭವನಕ್ಕೆ ಅನುದಾನ, ರಸ್ತೆಗಳ ಅಭಿವೃದ್ದಿ, ಶುದ್ದ ಕುಡಿಯುವ ನೀರಿನ ಘಟಕ, ಶಾಲಾ ಕೊಠಡಿಗಳ ನಿರ್ಮಾಣ ಮತ್ತಿತರ ಸಮಸ್ಯೆಗಳ ಬಗ್ಗೆ ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿದ ಶಾಸಕರು ಈಗಾಗಲೇ ಗ್ರಾಮದ ಅಭಿವೃದ್ದಿಗೆ ಕಾವೇರಿ ನೀರಾವರಿ ನಿಗಮದ ಮುಖಾಂತರ ರೂ. 2 ಕೋಟಿ ವೆಚ್ಚದಲ್ಲಿ ಕ್ರಿಯಾ ಯೋಜನೆ ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಶೀಘ್ರದಲೇ ಅನುದಾನ ಮಂಜೂರು ಮಾಡಿಸಿ ಕಾಮಗಾರಿಗಳಿಗೆ ಚಾಲನೆ ನೀಡುವ ಭರವಸೆ ನೀಡಿದರು.
ಸರ್ಕಾರದ ಸವಲತ್ತುಗಳಾದ ವೃದ್ದಾಪ್ಯ ವೇತನ, ವಿಧವಾ ವೇತನ, ವಸತಿ ರಹಿತರಿಗೆ ನಿವೇಶನ ಮಂಜೂರು ಮುಂತಾದ ಯೋಜನೆಗಳಿಗೆ ಸಂಬAಧಿಸಿದ ಇಲಾಖೆಗಳಿಗೆ ಸಾರ್ವಜನಿಕರು ಅರ್ಜಿ ಸಲ್ಲಿಸಿ ಸವಲತ್ತುಗಳನ್ನು ಪಡೆಯುವಂತೆ ಕೋರಿದರು. ಗ್ರಾಮದ ಪರಿಶಿಷ್ಟ ಜಾತಿ ಜನಾಂಗದ ಕಾಲೋನಿಗೆ ಭೇಟಿ ನೀಡಿ ಮೂಲಭೂತ ಸೌಕರ್ಯಗಳ ಕೊರತೆ ನಿಗಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದರು.
ಗ್ರಾಮದಲ್ಲಿ ಕಾಲುಬಾಯಿ ಜ್ವರದಿಂದ ದನಕರುಗಳು ಸಾವನಪ್ಪುತ್ತಿರುವ ಬಗ್ಗೆ ದೂರು ಆಲಿಸಿದ ಶಾಸಕರು ಸ್ಥಳದಲ್ಲಿ ಹಾಜರಿದ್ದ ಪಶು ಇಲಾಖಾ ಅಧಿಕಾರಿಗಳಿಗೆ ಜಾನುವಾರುಗಳಿಗೆ ನೀಡಬೇಕಾದ ಸೂಕ್ತ ಚಿಕಿತ್ಸೆ ಹಾಗೂ ಔಷದಿಗಳನ್ನು ಕೂಡಲೇ ವಿತರಿಸುವಂತೆ ಆದೇಶಿಸಿದರು.
ಈ ಸಂದರ್ಭ ಜಿ.ಪಂ. ಸದಸ್ಯ ಕೆ.ಎಸ್.ಮಂಜುನಾಥ್, ತಾ.ಪಂ.ಸದಸ್ಯೆ ಶೋಭಚಂದ್ರು, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಸಿ.ಎನ್.ರವಿ, ಗ್ರಾ.ಪಂ.ಅಧ್ಯಕ್ಷ ಈರೇಗೌಡ, ಸದಸ್ಯರಾದ ಲೋಕೇಶ್, ಅನ್ನಪೂರ್ಣಭಾಸ್ಕರ್, ಯ. ಹುಚ್ಚೇಗೌಡ, ವಿವಿಧ ಸರ್ಕಾರಿ ಇಲಾಖಾ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.