ತಾಲ್ಲೂಕಿನ ಹಿಟ್ನೆಹೆಬ್ಬಾಗಿಲು, ಬೆಟ್ಟದಪುರ, ಹಲಗನಹಳ್ಳಿ, ಕಣಗಾಲು, ಕೊಪ್ಪ, ಬೈಲಕುಪ್ಪೆ, ಚಿಟ್ಟೇನಹಳ್ಳಿ, ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ನರೇಗಾ ಯೋಜನೆಯಡಿಯ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದು ಹಲಗನಹಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಸದನಗಾಗಿ ಆಯ್ಕೆಯಾದಾಗಿನಿಂದ ಮೈಸೂರು ಭಾಗದ ಎಲ್ಲಾ ತಾಲ್ಲೂಕುಗಳಲ್ಲಿನ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದು ಸಂಸದರ ಅನುದಾನದಡಿ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದು ಅಭಿವೃದ್ಧಿಪಡಿಸಲಾಗಿದೆ, ಗ್ರಾ.ಪಂ.ವ್ಯಾಪ್ತಿಗಳಲ್ಲಿ ನಡೆಯುವ ಉದ್ಯೋಗಖಾತ್ರಿ ಯೋಜನೆಯು ಕೇಂದ್ರ ಸರ್ಕಾರದ ಕೊಡುಗೆಯಾಗಿದ್ದು ಗ್ರಾ.ಪಂ.ವ್ಯಾಪ್ತಿಯಲ್ಲಿನ ಹಳ್ಳಿಗಳಲ್ಲಿನ ಮೂಲಭೂತ ಸೌಕರ್ಯಗಳ ಕೊರತೆ ನೀಗಿಸುವ ಕೆಲಸಗಳಿಗೆ ಖರ್ಚು ಮಾಡುವ ಹಣಕ್ಕೆ ಯಾವುದೇ ಪರಿಮಿತಿ ಇಲ್ಲ, ಸಾರ್ವಜನಿಕರು ಇದನ್ನು ಅರಿತು ತಮ್ಮ ಗ್ರಾಮಗಳಲ್ಲಿನ ಸಮಸ್ಯೆಗಳ ಬಗ್ಗೆ ಪಿಡಿಒಗಳಿಗೆ ತಿಳಿಸಿ ತಮ್ಮ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳಬೇಕು, ಸಾರ್ವಜನಿಕರ ಮನವಿಗಳನ್ನು ನಿರ್ಲಕ್ಷö್ಯ ಮಾಡು ಪಿಡಿಒಗಳ ವಿರುದ್ಧ ಮಾಹಿತಿ ನೀಡಿದರೆ ಸೂಕ್ತ ಕಾನೂನು ಕ್ರಮ ಜರುಗಿಸುವುದಾಗಿ ತಿಳಿಸಿದರು.
ಮೈಸೂರಿನಿಂದ ಮಡಿಕೇರಿಗೆ ನಾಲ್ಕು ಪಥದ ರಸ್ತೆಗೆ ಕ್ರಿಯಾಯೋಜನೆಯನ್ನು ತಯಾರಿಸಿದ್ದು, ಪಿರಿಯಾಪಟ್ಟಣ ನಗರ ವ್ಯಾಪ್ತಿಯಲ್ಲಿ ಸಂಚಾರ ದಟ್ಟಣೆಯನ್ನು ತಪ್ಪಿಸಲು ಬೈಪಾಸ್ ರಸ್ತೆ ನಿರ್ಮಿಸಲಾಗುವುದು ಈ ಭಾಗದ ಜನರ ಬಹುದಿನಗಳ ಬೇಡಿಕೆಯಾದ ರೈಲುಮಾರ್ಗ ಯೋಜನೆಗೆ 2016-17ರ ಕೇಂದ್ರ ಬಜೆಟ್‌ನಲ್ಲಿಯೇ ಹಣ ಮೀಸಲಿರಿಸಿದ್ದು ಈ ಸಂಬAಧ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರವರೊಂದಿಗೆ ಮಾತುಕತೆ ನಡೆಸಿದ್ದು, ಸಕಾರಾತ್ಮಕವಾಗಿ ಸ್ಪಂಧಿಸಿದ್ದಾರೆ ಕೂಡಲೇ ಯೋಜನೆಗೆ ಬೇಕಾದ ಭೂಸ್ವಾಧೀನಪಡಿಸಿಕೊಂಡು ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.
ಮೈಸೂರು ನಗರದ ಹೊರವರ್ತುಲ ರಸ್ತೆಗಳ ಅಭಿವೃದ್ಧಿ, ಪ್ರಪ್ರಥಮ ಮೇಲುಸೇತುವೆ ಕಾಮಗಾರಿ, ಪಾಸ್‌ಪೋರ್ಟ್ ಸೇವಾಕೇಂದ್ರ ಪ್ರಾರಂಭ ಸೇರಿದಂತೆ ಹಲವಾರು ಜನಪರ ಕಾರ್ಯಕ್ರಮಗಳನ್ನು ನನ್ನ ಅವಧಿಯಲ್ಲಿ ಪ್ರಾಮಾಣಿಕವಾಗಿ ಜಾರಿಗೆ ತಂದಿದ್ದೇನೆ ಎಂದರು.
ಮುಂದಿನ ಬಾರಿಯೂ ಬೆಂಬಲಿಸಲು ಮನವಿ :
ಗುರುವಾರದಂದು ತಾಲ್ಲೂಕಿನ ವಿವಿಧೆಡೆ ಸಂಸದರ ಪ್ರವಾಸ ಕಾರ್ಯಕ್ರಮ ಹಾಗೂ ಶಾಸಕ ಕೆ.ಮಹದೇವ್‌ರವರ ಕಾರ್ಯಕ್ರಮ ಒಟ್ಟಿಗೆ ಇದ್ದು ಪ್ರಥಮ ಬಾರಿಗೆ ವೇಧಿಕೆ ಹಂಚಿಕೊAಡರು. ತಾಲ್ಲೂಕಿನ ಹಲಗನಹಳ್ಳಿಯಲ್ಲಿ ಮಾತನಾಡಿದ ಸಂಸದರು ಪಿರಿಯಾಪಟ್ಟಣ ತಾಲ್ಲೂಕಿನ ಜನತೆ ಈ ಬಾರಿಯ ಚುನಾವಣೆಯಲ್ಲಿ ಜನರ ಕೈಗೆ ಸಿಗುವಂತಹ ಶಾಸಕರನ್ನು ಆಯ್ಕೆ ಮಾಡಿದ್ದು ಸಂತಸದ ವಿಷಯ. ಕೆ.ಮಹದೇವ್‌ರವರನ್ನು ಬೆಂಬಲಿಸಿದAತೆ ಮುಂದಿನ ಚುನಾವಣೆಯಲ್ಲಿ ನನ್ನನ್ನೂ ಬೆಂಬಲಿಸಿ ಎಂದು ಪರೋಕ್ಷಕವಾಗಿ ಮುಂದಿನ ಬಾರಿಯೂ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುವ ಸುಳಿವು ನೀಡಿದರು.
ಈ ಸಂದರ್ಭ ಮಾಜಿ ಶಾಸಕ ಹೆಚ್.ಸಿ.ಬಸವರಾಜ್, ತಾ,ಬಿಜೆಪಿ ಅಧ್ಯಕ್ಷ ಪಿ.ಜೆ.ರವಿ, ಮುಖಂಡರುಗಳಾದ ಶಶಿಕುಮಾರ್, ಕೆ.ಕೆ.ಶಶಿ, ವಿಕ್ರಂರಾಜ್, ಆರ್.ಟಿ.ಸತೀಶ್, ಪಿ.ಟಿ.ಲಕ್ಷಿö್ಮನಾರಾಯಣ್, ಕಿರಣ್, ಜಯರಾಮ್‌ಗೌಡ, ಆನಂದ್, ಮಲ್ಲೇಶ್, ನಾಗೇಶ್, ಪ್ರವೀಣ್ ಸೇರಿದಂತೆ ಮತ್ತಿತರರು ಹಾಜರಿದ್ದರು.