ಶ್ರಮಿಕ ವರ್ಗದ ಕಾಯಕ ಸಮಾಜದಿಂದ ಬಂದವರಾಗಿದ್ದ ಹಡಪದ ಅಪ್ಪಣ್ಣ ಸಮಾಜದಲ್ಲಿನ ಮೂಢನಂಬಿಕೆಗಳ ವಿರುದ್ದ ಹೋರಾಡಿದವರ ಸಾಲಿನ ಪ್ರಮುಖರು ಎಂದು ಶಾಸಕ ಕೆ.ಮಹದೇವ್ ಹೇಳಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶೋಷಿತ ಸಮುದಾಯ ಸಂಘಟಿತರಾದರೆ ಅಭಿವೃದ್ಧಿ ಸಾಧ್ಯ, ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕವಾಗಿ ಆಭಿವೃದ್ಧಿಯಾಗಲು ಸಂಘಟನೆ ಪ್ರಮುಖ ಪಾತ್ರ ವಹಿಸಲಿದೆ ಕಾಯಕ ಸಮಾಜದ ಅಭಿವೃದ್ದಿಗೆ ಸದಾ ಬದ್ದ ಎಂದರು.
ರಾವಂದೂರು ಮುರುಘಾ ಮಠದ ಶ್ರೀಮೋಕ್ಷಪತಿ ಸ್ವಾಮೀಜಿ ಮಾತನಾಡಿ ಅರ್ಪಣಾ ಮನೋಭಾವದಿಂದ ಕಾಂiÀi, ವಾಚಾ, ಮನಸಾ ಜೀವನ ನಡೆಸುವ ಮತ್ತು ಕಾಯಕ ನಿಷ್ಠೆಯಿಂದ ಕೆಲಸ ನಿರ್ವಹಿಸಿದ ಅಪ್ಪಣ್ಣನವರ ಜೀವನ ನಮ್ಮೆಲ್ಲರಿಗೂ ಮಾದರಿಯಾಗಿದೆ, ಶರಣರ ಜೀವನವನ್ನು ಅಧ್ಯಯನ ಮಾಡಿ ಅವರ ಆದರ್ಶ ಜೀª£ವÀÀನ್ನು ನಾವು ಅಳವಡಿಸಿಕೊಳ್ಳ ಬೇಕು ಆಗ ನಮ್ಮ ಬದುಕು ಸಾರ್ಥಕವೆನ್ನಿಸಿಕೊಳ್ಳಲಿದೆ ಎಂದು ಅಭಿಪ್ರಾಯಪಟ್ಟರು.
ಸಮಾರಂಭದಲ್ಲಿ ಬೆಕ್ಕರೆ ಗ್ರಾಮದ ನಂಜುAಡಸ್ವಾಮಿ ಪ್ರಧಾನ ಭಾಷಣಕಾರರಾಗಿ ಮಾತನಾಡಿ ಕಾಯಕ ಸಮಾಜದ ಮಹನೀಯರ ಜಯಂತಿ ಆಚರಣೆಯನ್ನು ಪ್ರಥಮ ಬಾರಿಗೆ ನಡೆಸುವ ಮೂಲಕ ಸರ್ಕಾರ ಶೋಷಿತ ಸಮಾಜಕ್ಕೆ ಗೌರವ ತಂದುಕೊಟ್ಟಿದೆ. ಶರಣಾದಿ ಪ್ರಮುಖರ ಆಶಯ ಸಮಾಜದಲ್ಲಿ ತಾರತಮ್ಯ ಹೋಗಲಾಡಿಸುವುದಾಗಿತ್ತು. ಕಾಯಕದಲ್ಲಿ ಗೌರವ ಕಾಣುತ್ತಿದ್ದ ಹಡಪದ ಅಪ್ಪಣ್ಣ ಅವರನ್ನು ಬಸವಣ್ಣ ತಮ್ಮ ಆಪ್ತ ಬಳಗದಲ್ಲಿಟ್ಟು ಕೊಳ್ಳುವ ಮೂಲಕ ಶೋಷಿತ ಸಮುದಾಯಕ್ಕೆ ಸಮಾಜದಲ್ಲಿ ಗೌರವ ತಂದು ಕೊಡುವ ಕೆಲಸ ಮಾಡಿದ್ದರು ಎಂದರು.
ಕಾರ್ಯಕ್ರಮಕ್ಕೆ ಮೊದಲು ಪಟ್ಟಣದಲ್ಲಿ ಹಡಪದ ಅಪ್ಪಣನವರ ಭಾವಚಿತ್ರವನ್ನು ಕಲಾತಂಡದೊAದಿಗೆ ಮೆರವಣಿಗೆ ಮಾಡಲಾಯಿತು.
ಸಮಾರಂಭದಲ್ಲಿ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಜಿ.ಪಂ.ಸದಸ್ಯರಾದ ವಿ.ರಾಜೇಂದ್ರ, ಕೆ.ಎಸ್.ಮಂಜುನಾಥ್, ತಾ.ಪಂ.ಅಧ್ಯಕ್ಷೆ ಕೆ.ಆರ್.ನಿರೂಪಾ, ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಈರಯ್ಯ, ಪುರಸಭೆ ಅಧ್ಯಕ್ಷ ವೇಣುಗೋಪಾಲ್, ತಾ.ಪಂ.ಸದಸ್ಯರಾದ ಎಸ್.ರಾಮು, ಮಲ್ಲಿಕಾರ್ಜುನ್, ಪುರಸಭೆ ಸದಸ್ಯ ಅಮ್ಜದ್ ಷರೀಫ್, ತಹಶೀಲ್ದಾರ್ ಜೆ.ಮಹೇಶ್, ಇಓ ಡಿ.ಸಿ.ಶೃತಿ, ಪುರಸಭಾ ಮುಖ್ಯಾಧಿಕಾರಿ ಕೃಷ್ಣ, ಬಿಇಒ ಚಿಕ್ಕಸ್ವಾಮಿ, ಸಿಪಿಐ ಹೆಚ್.ಎನ್.ಸಿದ್ದಯ್ಯ, ಸವಿತಾ ಸಮಾಜದ ಮುಖಂಡರಾದ ಕೃಷ್ಣ, ಪಿ.ಎಸ್.ಸುಬ್ರಮಣ್ಯ, ನಾರಾಯಣ ಸೇರಿದಂತೆ ಮತ್ತಿತರರು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top