ಸಹಕಾರ ಸಂಘಗಳ ನೌಕರರ ಬೇಡಿಕೆಗಳಿಗೆ ಸ್ಪಂದಿಸಿ ಪರಿಹರಿಸುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸುವುದಾಗಿ ಶಾಸಕ ಕೆ.ಮಹದೇವ್ ಭರವಸೆ ನೀಡಿದರು.

ಪಟ್ಟಣದ ಮಂಜುನಾಥ ಸಮುದಾಯ ಭವನದಲ್ಲಿ ತಾಲ್ಲೂಕು ಹಾಲು ಉತ್ಪಾದಕರ ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ರೈತರು ತಮ್ಮ ಕುಟುಂಬ ನಿರ್ವಹಣೆಗಾಗಿ ಹೈನುಗಾರಿಕೆಯಂತಹ ಉಪ ಕಸುಬುಗಳನ್ನು ಅವಲಂಬಿಸಿದ್ದು ಅವರಿಗೆ ಯಾವುದೇ ರೀತಿಯ ಅನ್ಯಾಯವಾಗದಂತೆ ನೌಕರರು ನಿಗವಹಿಸಬೇಕು. ಮೈಮುಲ್ ನಿರ್ದೇಶಕ ಪಿ.ಎಂ.ಪ್ರಸನ್ನ ನನ್ನ ಮಗನಾಗಿದ್ದರೂ ಸಹ ಅವರಿಂದ ನೌಕರರಿಗೆ ಯಾವುದೇ ರೀತಿಯ ತಪ್ಪುಗಳು ಕಂಡುಬAದಲ್ಲಿ ಕೂಡಲೇ ಅವರ ರಾಜೀನಾಮೆ ಕೊಡಿಸುವುದಾಗಿ ಭರವಸೆ ನೀಡಿದರು. ಮಾಜಿ ಶಾಸಕ ಕೆ.ವೆಂಕಟೇಶ್ ತಮ್ಮ ಸುಧೀರ್ಘ 30 ವರ್ಷಗಳ ರಾಜಕೀಯದ ಅವಧಿಯಲ್ಲಿ ಜನರಿಗೆ ಟೋಪಿ ಹಾಕುವ ಕೆಲಸ ಮಾಡಿದರೇ ವಿನಃ ಜನರ ಸಮಸ್ಯೆಗಳಿಗೆ ಸ್ಪಂದಿಸುವ ನೈಪುಣ್ಯತೆಯನ್ನು ಬೆಳೆಸಿಕೊಳ್ಳಲಿಲ್ಲ ಎಂದು ಟೀಕಿಸಿದರು.
ಮೈಮುಲ್ ನಿರ್ದೇಶಕ ಪಿ.ಎಂ.ಪ್ರಸನ್ನ ಮಾತನಾಡಿ ಮುಂದಿನ ದಿನಗಳಲ್ಲಿ ತಾಲ್ಲೂಕಿನಲ್ಲಿರುವ ಪ್ರತಿ ಗ್ರಾಮಗಳಲ್ಲೂ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ತೆರೆದು ಹೈನುಗಾರಿಕೆ ಪ್ರೋತ್ಸಾಹಿಸುವ ಕೆಲಸ ಮಾಡುತ್ತೇನೆ.ಇದಕ್ಕೆ ರೈತರು ಹಾಗೂ ಶಾಸಕರ ಸಹಕಾರ ಅಗತ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಈರಯ್ಯ, ಸದಸ್ಯ ಆರ್.ಎಸ್.ಮಹದೇವ್, ಮಾಜಿ ಸದಸ್ಯ ಅತ್ತರ್‌ಮತ್ತೀನ್, ಮೈಲಾರಪ್ಪ, ಜಿಲ್ಲಾ ಹಾಲು ಒಕ್ಕೂಟದ ಉಪವ್ಯವಸ್ಥಾಪಕ ಎನ್.ಕುಮಾರ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಹಾಲು ಉತ್ಪಾದಕರ ನೌಕರರ ಸಂಘದ ಅಧ್ಯಕ್ಷ ಪ್ರಕಾಶ್, ಉಪಾಧ್ಯಕ್ಷ ಶಿವಕುಮಾರ್, ಪ್ರಧಾನಕಾರ್ಯದರ್ಶಿ ರವಿ, ಎಪಿಎಂಸಿ ಸದಸ್ಯರಾದ ಹರೀಶ್, ಮಹದೇವ್, ಲೆಕ್ಕಾಪರಿಶೋಧಕ ವಾಸು, ತಾ.ಪಂ.ಸದಸ್ಯ ಮಲ್ಲಿಕಾರ್ಜುನ, ನಿವೃತ್ತ ಸಹಕಾರಿ ಅಧಿಕಾರಿ ಪುಟ್ಟಸ್ವಾಮಿಗೌಡ, ಮುಖಂಡರಾದ ರಘುನಾಥ್, ದೊರೆಕೆರೆ ನಾಗೇಂದ್ರ, ಇಸ್ರಾರ್‌ಅಹಮ್ಮದ್, ಸಿಬ್ಬಂದಿಗಳಾದ ನಿಶ್ಚಿತ್, ತುಳಸಿಕುಮಾರ್, ಶ್ರೀಕಾಂತ್, ಬಿ.ಬಿ.ಸುರೇಶ್ ಮತ್ತಿತರರು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top