ಹೆಸರು : ಶ್ರೀ ಕೆ. ಮಹದೇವ್
ತಂದೆಯ ಹೆಸರು : ಲೇ|| ಕರಿಯಪ್ಪ
ತಾಯಿಯ ಹೆಸರು : ಲೇ|| ಪದ್ಮಮ್ಮ
ವಯಸ್ಸು : 63 ವರ್ಷ (ಹುಟ್ಟಿದ ದಿನಾಂಕ: 11.05.1955)
ಸ್ವಂತ ಸ್ಥಳ : ಪಿರಿಯಾಪಟ್ಟಣ
ಪತ್ನಿಯವರ ಹೆಸರು : ಶ್ರೀಮತಿ ಸುಭದ್ರಮ್ಮ
ಮಕ್ಕಳು : ಇಬ್ಬರು ಗಂಡು ಮಕ್ಕಳು
ಮೊದಲನೆಯ ಮಗ : ಶ್ರೀ ಪಿ.ಎಂ. ಪ್ರಸನ್ನ (ವಿವಾಹಿತರು)
ಸೊಸೆ : ಶ್ರೀಮತಿ ಅನಿತಾ
ಮೊಮ್ಮಕ್ಕಳು : ಮೊಮ್ಮಗ – ಪ್ರಥಮ್
ಮೊಮ್ಮಗಳು-ಹಿರಣ್ಮಯಿ
ಎರಡನೆಯ ಮಗ : ಶ್ರೀ ಪಿ.ಎಂ. ಉಮೇಶ್ (ವಿವಾಹಿತರು)
ಸೊಸೆ : ಶ್ರೀಮತಿ ಪುನಿತಾ
ಮೊಮ್ಮಕ್ಕಳು : ಮೊಮ್ಮಗ – ಲಿಖಿತ್ ಮೊಮ್ಮಗ – ವರ್ಷಿತ್ ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ
ಮನೆ ವಿಳಾಸ : ಹೊನ್ನಸಿರಿ, ಪೋಸ್ಟ್ ಆಫೀಸ್ ರಸ್ತೆ,
ಪಿರಿಯಾಪಟ್ಟಣ
ಕಚೇರಿ ವಿಳಾಸ (ಪಿರಿಯಾಪಟ್ಟಣ) : ಶಾಸಕರ ಕಾರ್ಯಾಲಯ,
ತಾಲ್ಲೂಕು ಪಂಚಾಯ್ತಿ, ಕಾರ್ಯಾಲಯ
ಪಿರಿಯಾಪಟ್ಟಣ, ಮೈಸೂರು ಜಿಲ್ಲೆ
ಕಚೇರಿ ವಿಳಾಸ (ಬೆಂಗಳೂರು) : ಶಾಸಕರ ಭವನ-2,
ಕೊಠಡಿ ಸಂಖ್ಯೆ: 533 ಮತ್ತು 534
ವಿಧಾನಸೌಧ, ಬೆಂಗಳೂರು – 01
ಬಾಲ್ಯ ಮತ್ತು ಇತಿಹಾಸ:
ಕರ್ನಾಟಕದ ಅತ್ಯಂತ ಹಿಂದುಳಿದ ಗ್ರಾಮ ಅಥವಾ ಪಟ್ಟಣಗಳಲ್ಲಿ ಒಂದಾದ ಪಿರಿಯಾಪಟ್ಟಣದಲ್ಲಿ ಶ್ರೀ ಕೆ. ಮಹದೇವ್‌ರವರು ಯಾವುದೇ ರಾಜಕೀಯ ಗಂಧ-ಗಾಳಿಯ ಹಿನ್ನೆಲೆಯಿಲ್ಲದ ಸಾಮಾನ್ಯ ರೈತ ಕುಟುಂಬದಲ್ಲಿ
ದಿನಾAಕ: 11.05.1955ರಲ್ಲಿ ಜನಿಸಿದರು. ಶ್ರೀ ಕರಿಯಪ್ಪ ಮತ್ತು ಶ್ರೀಮತಿ ಪದ್ಮಮ್ಮನವರಿಗೆ ಜನಿಸಿದ್ದ ಐದು ಗಂಡು ಮಕ್ಕಳು ಮತ್ತು ಕೊನೆಯ ಒಬ್ಬ ಹೆಣ್ಣು ಮಗಳ ಪೈಕಿ ಕೆ. ಮಹದೇವ್‌ರವರು ಹಿರಿಯ ಮಗ. ಶ್ರೀ ಕರಿಯಪ್ಪ
ಮತ್ತು ಶ್ರೀಮತಿ ಪದ್ಮಮ್ಮನವರದು ಒಕ್ಕಲಿಗ ಸಮುದಾಯದ ಬಡ ರೈತ ಕುಟುಂಬ. ಕೇವಲ ನಾಲ್ಕುವರೆ ಎಕರೆ ತರಿ ಜಮೀನು ಇವರ ಜೀವನ ನಿರ್ವಹಣೆಗೆ ಇದ್ದ ಆಸ್ತಿ. ಜೀವನೋಪಾಯಕ್ಕೆ ಇದ್ದ ಆ ನಾಲ್ಕುವರೆ ಎಕರೆ ಜಮೀನಿನಲ್ಲಿ ಬರುತ್ತಿದ್ದ ಆದಾಯ ಕುಟುಂಬದ ನಿರ್ವಹಣೆಗೆ ಸಾಕಾಗುತ್ತಿರಲಿಲ್ಲ. ಮನೆಯ ಹಿರಿಯ ಮಗನಾಗಿದ್ದ ಕೆ. ಮಹದೇವ್‌ರವರಿಗೆ ಕುಟುಂಬ ನಿರ್ವಹಣೆಗಾಗಿ ಕೃಷಿ ಚಟುವಟಿಕೆಯೊಂದಿಗೆ ಕೃಷಿಯೇತರ ಚಟುವಟಿಕೆಯನ್ನು ಅವಲಂಬಿಸುವುದು ಅನಿವಾರ್ಯವಾಯಿತು. ಇಂಥಹ ಪರಿಸ್ಥಿತಿಯಲ್ಲಿ ಕೆ. ಮಹದೇವ್‌ರವರು ಸಾಮಾಜಿಕ ಭದ್ರತಾ ಕಾರ್ಯಕ್ರಮಗಳಲ್ಲಿ ಒಂದಾದ ಪಡಿತರ ವಿತರಣೆ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಇದರಿಂದ ಕೆ. ಮಹದೇವ್‌ರವ ಸಾರ್ವಜನಿಕ ಸಂಪರ್ಕ ಹೆಚ್ಚಾಗತೊಡಗಿತು. ಮುಂದಿನ ದಿನಗಳಲ್ಲಿ ಇದು ವಿಸ್ತಾರವಾದಂತೆ
ಸ್ಥಳೀಯ ರಾಜಕೀಯ ವ್ಯವಸ್ಥೆಯಲ್ಲಿ ತಮಗರಿವಿಲ್ಲದಂತೆ ಸಕ್ರಿಯವಾಗತೊಡಗಿದರು. ಇದು ಕೆ. ಮಹದೇವ್‌ರವ ರಾಜಕೀಯ ಜೀವನದ ಆರಂಭದ ಹೆಜ್ಜೆಯಾಗಿತ್ತು.
ರಾಜಕೀಯ ಹಿನ್ನೆಲೆ ಮತ್ತು ಬೆಳೆದುಬಂದ ಹಾದಿ:
1983-84ರ ಕಾಲದಲ್ಲಿ ಶ್ರೀ ಕೆ. ಮಹದೇವ್‌ರವರು ತಮ್ಮ ನೈಜ ಸ್ವಭಾವದಿಂದ ಸ್ಥಳೀಯವಾಗಿ ರ‍್ವಜನಿಕ ವಲಯದಲ್ಲಿ ಹೆಚ್ಚು ಕ್ರಿಯಾಶಿಲವಾಗಿದ್ದರು. ಅದು ಪಿರಿಯಾಪಟ್ಟಣ ಮಂಡಲ ಪಂಚಾಯ್ತಿ ಚುನಾವಣೆಯ ಸರ‍್ಭ. ಸ್ಥಳೀಯರ ಒತ್ತಾಯದ ಮೇರೆಗೆ 1984ರಲ್ಲಿ ಮೊದಲ ಬಾರಿಗೆ ಪಿರಿಯಾಪಟ್ಟಣ ಮಂಡಲ ಪಂಚಾಯ್ತಿ ಚುನಾವಣೆಯಲ್ಲಿ ಪಕ್ಷೇತರವಾಗಿ ಜೋಡಿ-ಹಕ್ಕಿ ಚಿನ್ಹೆಯಡಿ ಸ್ರ‍್ಧಿಸಿದರು. ಆದರೆ, ಚುನಾವಣೆಯಲ್ಲಿ ಸೋಲಾಯಿತು. ಇದರಿಂದ ದೃತಿಗೆಡದ ಅವರು ತಮ್ಮ ಸ್ಥಳೀಯರ ಆತ್ಮ ಸ್ಥೆರ‍್ಯ ಮತ್ತು ಬೆಂಬಲಕ್ಕೆ ತಲೆಬಾಗಿ ಸೋಲನ್ನು ಸವಾಲಾಗಿ ಸ್ವೀಕರಿಸಿದರು. ರಾಜಕೀಯ ಕ್ಷೇತ್ರದಲ್ಲಿ ಸ್ಥಳೀಯರ ಬೆಂಬಲದ ಜೊತೆಗೆ ರಾಜಕೀಯ ಪಕ್ಷವೊಂದರ ನೆರವೂ ಅಗತ್ಯವೆಂದು ಅರಿತ ಕೆ. ಮಹದೇವ್‌ರವರು 1989ರಲ್ಲಿ ಜನತಾ ಪಕ್ಷದ ಅಭ್ರ‍್ಥಿಯಾಗಿ
ಪಿರಿಯಾಪಟ್ಟಣ ಮಂಡಲ ಪಂಚಾಯ್ತಿ ಚುನಾವಣೆಯಲ್ಲಿ ಪುನಃ ಸ್ರ‍್ಧಿಸಿದರು. ಈ ಬಾರಿ ಅವರನ್ನು ಜನತೆ ಕೈಬಿಡಲಿಲ್ಲ. ಮೊದಲಬಾರಿಗೆ ಅವರು ಪಿರಿಯಾಪಟ್ಟಣ ಮಂಡಲ ಪಂಚಾಯ್ತಿ ಸದಸ್ಯರಾಗಿ ಆಯ್ಕೆಯಾದರು. ಇದು ಶ್ರೀ ಕೆ. ಮಹದೇವ್‌ರವರ ರಾಜಕೀಯ ಜೀವನದಲ್ಲಿ ಯಶಸ್ಸಿನ ಮೊದಲ ಹೆಜ್ಜೆ.
ನಂತರ 1994ರಲ್ಲಿ ಜನತಾದಳ ಪಕ್ಷದಿಂದ ತಾಲ್ಲೂಕು ಪ್ರಧಾನ ಕಾರ್ಯದರ್ಶಿಯಾಗಿ
ಆಯ್ಕೆಯಾದರು. ಅದೇ ವರ್ಷ ತಾಲ್ಲೂಕು ಪಂಚಾಯ್ತಿ ಚುನಾವಣೆಗೆ ಸ್ಪರ್ಧಿಸಿದರು, ಆದರೆ ಅಲ್ಪ ಮತಗಳಿಂದ ಸೋಲಬೇಕಾಯಿತು. ಮುಂದೆ 1996ರಲ್ಲಿ ಪಿರಿಯಾಪಟ್ಟಣ ನಗರವು ಮಂಡಲ ಪಂಚಾಯ್ತಿಯಿAದ ಟೌನ್ ಪಂಚಾಯ್ತಿಯಾಗಿ ಮೇಲ್ದರ್ಜೆಗೆ ಏರಿದಾಗ ನಡೆದ ಚುನಾವಣೆಯಲ್ಲಿ ಗೆದ್ದು ಅಧ್ಯಕ್ಷರಾದರು. ಇವರು ಅಧ್ಯಕ್ಷರಾಗುವ ವರೆಗೆ ಶ್ರೀ ಸಾಮಾನ್ಯನ ಪಾಲಿಗೆ ಪಿರಿಯಾಪಟ್ಟಣ ಪಂಚಾಯ್ತಿ ಕಾರ್ಯಾಲಯವೊಂದು ದೂರದ ಬೆಟ್ಟ. ಅಧಿಕಾರ
ವಿಕೇಂದ್ರೀಕರಣ ತತ್ವದಡಿಯಲ್ಲಿ ರೂಪುಗೊಂಡು ಸಮಾಜದ ಕಟ್ಟಕಡೆಯ ವ್ಯಕ್ತಿಯ ದೂರು, ದುಮ್ಮಾನ, ಅಳಲು ಮತ್ತು ಆಸೆಗಳನ್ನು ಆಲಿಸಲು ಬದ್ಧವಾಗಿರಬೇಕಾಗಿದ್ದ ಪಿರಿಯಾಪಟ್ಟಣ ಮಂಡಲ ಪಂಚಾಯ್ತಿ, ಮೇಲ್ದರ್ಜೆಗೆ ಏರಿ ಪರಿವರ್ತನೆಗೊಂಡ ನಂತರ ಸ್ಥಾಪನೆಯಾದ ಪಿರಿಯಾಪಟ್ಟಣ ಟೌನ್ ಪಂಚಾಯ್ತಿ ಕಾರ್ಯಾಲಯ ಸಾಮಾನ್ಯ ಜನರ ಪಾಲಿಗೆ ಮಿಲಿಟರಿ ಕ್ಯಾಂಪ್‌ನAತೆ ಕಾಣುತ್ತಿತ್ತು ಆದರೆ ಒಳಗಡೆ ಮಾತ್ರ ಉಳ್ಳವರ ಪ್ರಭಾವಕ್ಕೆ ತಕ್ಕಂತೆ ವರ್ತಿಸುವ ಒಂದು ತಾಣ. ಈ ಸಂದರ್ಭದಲ್ಲಿ ಶ್ರೀ ಕೆ. ಮಹದೇವ್‌ರವರು ಅಧ್ಯಕ್ಷರಾದ ನಂತರ ಟೌನ್ ಪಂಚಾಯ್ತಿ ಜನಸಾಮಾನ್ಯರಿಗೆ ಮುಕ್ತವಾದ ವಾತಾವರಣ ಸೃಷ್ಟಿಯಾಯಿತು. ಶ್ರೀ ಕೆ. ಮಹದೇವ್‌ರವರು ಪಿರಿಯಾಪಟ್ಟಣದಲ್ಲಿ ಅಧ್ಯಕ್ಷರಾದ ನಂತರ ಕೈಗೊಂಡ ಕೆಲಸ ಕಾರ್ಯಗಳು ಅನೇಕ. ಪಿರಿಯಾಪಟ್ಟಣದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ನಿವೇಶನ ರಹಿತರು ಮತ್ತು ವಸತಿ ರಹಿತರಿಗೆ ಅನುಕ್ರಮವಾಗಿ 1000 ನಿವೇಶನಗಳನ್ನು ಮತ್ತು 500 ವಸತಿಗಳನ್ನು ವಿತರಿಸಿದ ಕೀರ್ತಿ ಶ್ರೀ ಕೆ. ಮಹದೇವ್‌ರವರಿಗೆ ಸಲ್ಲುತ್ತದೆ. ಇದರ ಜೊತೆಗೆ ಪಿರಿಯಾಪಟ್ಟಣಕ್ಕೆ ಕಾವೇರಿ ನೀರನ್ನು ತಂದು ಸರಬರಾಜು ಮಾಡುವ ಕಾರ್ಯ, ಮಾರುಕಟ್ಟೆಯ ನಿರ್ಮಾಣ ಮುಂತಾದವುಗಳು ಇವರ ಅಧ್ಯಕ್ಷತೆಯ ಕಾಲದಲ್ಲಿ ಕೈಗೊಂಡ ಪ್ರಮುಖ ಕಾರ್ಯಗಳು. ಈ ಕಾರ್ಯಗಳು ಪಿರಿಯಾಪಟ್ಟಣ ನಗರದ ಜನಸಾಮಾನ್ಯರ ಮನಸ್ಸಿನಲ್ಲಿ ಇಂದಿಗೂ ಉಳಿದಿವೆ.
ಮುಂದೆ ತಮ್ಮ ಸ್ವಂತ ವರ್ಚಸ್ಸು ಮತ್ತು ಚರಿಷ್ಮದಿಂದ ತಾಲ್ಲೂಕಿನಾದ್ಯಂತ ಹೆಚ್ಚು ಪರಿಚಿತರು ಮತ್ತು ಪ್ರಭಾವಿಗಳಾಗಿ ಬೆಳದೆ ಶ್ರೀ ಕೆ. ಮಹದೇವ್‌ರವರು 2006ರಲ್ಲಿ ಮೊದಲ ಬಾರಿಗೆ ತಾಲ್ಲೂಕು ಜನತಾದಳದ ಅಧ್ಯಕ್ಷರಾಗಿ ಆಯ್ಕೆಯಾದರು. 2008ರಲ್ಲಿ ಮೊದಲಬಾರಿಗೆ ಜ್ಯಾತ್ಯತೀತ ಜನತಾದಳ ಪಕ್ಷದಿಂದ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದರು. ಆದರೆ ಕೇವಲ 879 ಮತಗಳ ಅಂತರದಿAದ ಸೋಲು
ಕಾಣಬೇಕಾಯಿತು. ಆದರೆ ಆ ವಿರೋಚಿತ ಸೋಲು ಶ್ರೀ ಕೆ. ಮಹದೇವ್‌ರವರನ್ನು ವಿಚಲಿತರನ್ನಾಗಿ ಮಾಡಲಿಲ್ಲ. ಬದಲಿಗೆ ತಾಲ್ಲೂಕಿನಲ್ಲಿ ಮೊದಲಬಾರಿಗೆ ತನ್ನ ಶಕ್ತಿಯನ್ನು ಎದುರಾಳಿಗಳಿಗೆ ಪರಿಚಯ ಮಾಡಿಸಿತು. ಪರಿಣಾಮವಾಗಿ ತಾಲ್ಲೂಕಿನಲ್ಲಿ ಇವರ ಮುಖಂಡತ್ವದಲ್ಲಿ 2008ರಿಂದ ಮುಂದೆ ನಡೆದ ಎಲ್ಲಾ ಗ್ರಾಮ ಪಂಚಾಯ್ತಿ,
ತಾಲ್ಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ, ಟೌನ್ ಪಂಚಾಯ್ತಿ ಮತ್ತು ಸಹಕಾರ ಕ್ಷೇತ್ರಗಳ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಸಂಘಟಿಸಿ, ಗೆಲ್ಲಿಸುವ ಮೂಲಕ ಪಕ್ಷವನ್ನು ಉನ್ನತಮಟ್ಟಕ್ಕೆ ಕೊಂಡೊಯ್ದರು. 2004ರ ನಂತರ ರಾಜ್ಯ ರಾಜಕಾರಣದಲ್ಲಿ ಉಂಟಾದ ಕ್ಷಿಪ್ರ ಬೆಳವಣಿಗೆಯಿಂದ ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಉಂಟಾಗಿದ್ದ ಜನತಾದಳದ ಪಕ್ಷದ ನಾಯಕತ್ವದ ಕೊರತೆಯನ್ನು ಯಾರೂ ಊಹಿಸದಂತಾ ರೀತಿಯಲ್ಲಿ ತುಂಬಿ ತಾಲ್ಲೂಕಿನ ಪಕ್ಷದ ಪ್ರಶ್ನಾತೀತ ಮತ್ತು ಪ್ರೇರಣಾ ಶಕ್ತಿಯಾಗಿ ಬೆಳೆದರು. ಮುಂದೆ, 2013ರ ವಿಧಾನಸಭಾ ಚುನಾವಣಾ ಸಂದರ್ಭ. ತಾಲ್ಲೂಕಿನಾದ್ಯಂತ ಶ್ರೀ ಕೆ. ಮಹದೇವ್‌ರವರ ಪರವಾದ ಅಲೆ. ತಾಲ್ಲೂಕಿನಲ್ಲಿ ಶ್ರೀ ಮಹದೇವರವರು ಗೆದ್ದೇಬಿಟ್ಟರು ಎಂಬಷ್ಟರ ಮಟ್ಟಿಗೆ ಉಂಟಾದ ವಾತಾವರಣದಲ್ಲಿ ವಿಧಿ ಮತ್ತೊಮ್ಮೆ ಶ್ರೀ ಕೆ. ಮಹದೇವ್‌ರವರನ್ನು ನೀನು ಇನ್ನುಷ್ಟು ದಿನ ಕಾಯಲೇಬೇಕು ಎಂದು ಪರೋಕ್ಷವಾಗಿ ಆದೇಶಿಸಿತ್ತು. ಚುನಾವಣೆಗೆ ಇನ್ನೆರಡು ದಿನ ಇದೆ ಎನ್ನುವ ವೇಳೆಗೆ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿದ್ದ ಸಣ್ಣಮೊಗೇಗೌಡರ ಅಕಾಲಿಕ ಮರಣ ಕೆ. ಮಹದೇವ್‌ರವರ ಪಾಲಿಗೆ ಮತ್ತೊಮ್ಮೆ
ಮಾರಕವಾಯಿತು. ಚುನಾವಣೆ ಸುಮಾರು ಇಪ್ಪತ್ತು ದಿನಗಳಷ್ಟು ಮುಂದೂಡಲ್ಪಟ್ಟಿತು. ಆದರೆ ರಾಜ್ಯದಲ್ಲಿ ಶ್ರೀ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬಂದಿತ್ತು. ನಂತರ ನಡೆದ ಪಿರಿಯಾಪಟ್ಟಣ ಉಪ ಚುನಾವಣೆಯಲ್ಲಿ ಇಡೀ ರಾಜ್ಯ ಸರ್ಕಾರ ಒಂದು ತಾಲ್ಲೂಕಿನಲ್ಲಿ ಟಿಕಾಣಿ ಹೂಡಿತು. ಅಧಿಕಾರವಿದ್ದ ಪಕ್ಷಕ್ಕೆ ತಾಲ್ಲೂಕಿನ ಅನೇಕ ಮುಖಂಡರು ವಲಸೆ ಹೋದರು. ಆದರೆ ಕೆ. ಮಹದೇವ್‌ರವರು ಯಾವಾಗಲೂ ನಂಬಿಕೊ0ಡಿದ್ದ ಶ್ರೀ ಸಾಮಾನ್ಯ ಮತದಾರರು ಮಾತ್ರ ಇವರ ಜೊತೆಗೇ ಇದ್ದರು. ಚುನಾವಣೆ ಫಲಿತಾಂಶ ಬಂತು. ಕೇವಲ 2088 ಮತಗಳ ಅಂತರದಿ0ದ ಮತ್ತೊಮ್ಮೆ ಸೋಲು ಕಾಣಬೇಕಾಯಿತು. ಸಣ್ಣಮೊಗೇಗೌಡರ ಅಕಾಲಿಕ ಮರಣ ಸಂಭವಿಸದಿದ್ದಲ್ಲಿ ಫಲಿತಾಂಶದ ದಿಕ್ಕೇ ಬದಲಾಗಿರುತ್ತಿತ್ತು ಎಂಬುದು ಇಂದಿಗೂ ತಾಲ್ಲೂಕಿನ ಬಹುತೇಕ ಮತದಾರರ ಅಭಿಪ್ರಾಯ. ಆದರೆ, ಈ ಸೋಲು ಶ್ರೀ ಕೆ. ಮಹದೇವ್‌ರವರಿಗಿಂತಲೂ ಅವರ ಬೆಂಬಲಿಗರು ಮತ್ತು
ಅಭಿಮಾನಿಗಳಲ್ಲಿ ಹೆಚ್ಚು ಕಿಚ್ಚನ್ನು ಹೊತ್ತಿಸಿತು.
ಮುಂದೆ ಬಂದ ಎಲ್ಲಾ ಗ್ರಾಮ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ, ಟೌನ್ ಪಂಚಾಯ್ತಿ ಮತ್ತು ಸಹಕಾರ ಕ್ಷೇತ್ರಗಳ ಚುನಾವಣೆಯಲ್ಲಿ ಬೆಂಬಲಿಗರು ಮತ್ತು ಅಭಿಮಾನಿಗಳು ಹಗಲು ರಾತ್ರಿಯೆನ್ನದೆ ದುಡಿದು ಪಕ್ಷವನ್ನು ಗೆಲ್ಲಿಸಿದರು. ತನ್ಮೂಲಕ 2018ರ ಚುನಾವಣೆಗೆ ಉಸಿರು ಬಿಗಿ ಹಿಡಿದು ಕಾಯತೊಡಗಿದರು. 2018ರ ಚುನಾವಣೆ ಬಂದೇಬಿಟ್ಟಿತು. ಈ ಸಂದರ್ಭದಲ್ಲಿ ಕಳೆದ ಐದು ವರ್ಷಗಳಲ್ಲಿ ಆಡಳಿಪಕ್ಷದಿಂದ ತಾಲ್ಲೂಕಿನಲ್ಲಿ ಉಂಟಾಗಿದ್ದ ಅನೇಕ ಬದಲಾವಣೆಗಳು ಕೆ. ಮಹದೇವ್ ಅವರ ಬೆಂಬಲಿಗರು ಮತ್ತು ಅಭಿಮಾನಿಗಳಲ್ಲಿ ಯಾವುದೇ ಪರಿಣಾಮಗಳನ್ನು ಉಂಟು ಮಾಡಲಿಲ್ಲ. ಎರಡು ಬಾರಿ ವಿಧಾನಸಭೆ ಚುನಾವಣೆಯಲ್ಲಿ ನಿಂತು ಸೋಲುವ ಮೂಲಕ
ದುಡಿದು ಕೂಡಿಟ್ಟ ಹಣವೆಲ್ಲ ಖಾಲಿಯಾಗಿ ಸಾಲದ ಹೊರೆ ಹೆಚ್ಚಾಗಿದ್ದರೂ ಕುಂದದ ಅಭಿಮಾನಿಗಳ ಮತ್ತು ಬೆಂಬಲಿಗರ ಉತ್ಸಾಹ ಮನೆಯವರ ಆತ್ಮ ವಿಶ್ವಸವನ್ನು ಹೆಚ್ಚುಮಾಡಿತ್ತು. ಕೊನೆಗೆ ದಿನಾಂಕ: 12.05.2018ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ 7493 ಮತಗಳ ಅಂತರದಿAದ ಗೆಲ್ಲುವ ಮೂಲಕ 2008 ಮತ್ತು 2013ರ ಚುನಾವಣೆಯಲ್ಲಿನ ಸೋಲನ್ನು ಮರೆತು ಮೊದಲಬಾರಿಗೆ ವಿಧಾನಸಭಾ ಸದಸ್ಯರಾಗಿ ಆಯ್ಕೆಯಾದರು.
ತಂದೆಯ ರಾಜಕೀಯ ಹೋರಾಟದ ಯುದ್ಧಭೂಮಿಯಲ್ಲಿ ಮಗನೇ ಸಾರಥಿ:
ಕೆ. ಮಹದೇವ್‌ರವರು 2008ರಲ್ಲಿ ಮೊದಲಬಾರಿಗೆ ಚುನಾವಣೆಗೆ ಸ್ಫರ್ಧಿಸುವ ವೇಳೆಗೆ ರಾಜಕೀಯವಾಗಿ ಬೆಳಕು ಕಂಡಿದ್ದ ಹಿರಿಯ ಮಗ ಶ್ರೀ ಪಿ ಎಂ ಪ್ರಸನ್ನರವರು ತಂದೆಗೆ ಸಾರಥಿಯಂತೆ ನಿಂತರು. ತಾಲ್ಲೂಕಿನಲ್ಲಿ ತಂದೆಗೆ ಇದ್ದ ಅಪಾರ ಬೆಂಬಲ ಹಾಗೂ ಸನ್ಮಾನ್ಯ ಶ್ರೀ ಹೆಚ್.ಡಿ. ದೇವೇಗೌಡರು ಹಾಗೂ ಹೆಚ್.ಡಿ. ಕುಮಾರಸ್ವಾಮಿಯವರ ಮೇಲಿದ್ದ ಅಭಿಮಾನವನ್ನು ತಾಲ್ಲೂಕು ಜನತಾದಳದ ಯಶಸ್ಸನ್ನಾಗಿ ಪರಿವರ್ತಿಸುವಲ್ಲಿ ಪಿ ಎಂ ಪ್ರಸನ್ನರವರ ಪಾತ್ರ ದೊಡ್ಡದು. ತಾಲ್ಲೂಕಿನ ಪಕ್ಷದ ಎಲ್ಲಾ ಹಿರಿಯ ಮುಖಂಡರ ಮಾರ್ಗದರ್ಶನದಲ್ಲಿ 2008ರಿಂದ ಈ ವರೆವಿಗೂ ತಾಲ್ಲೂಕಿನಲ್ಲಿ ನಡೆಯುವ ಯಾವುದೇ ಶುಭಕಾರ್ಯಗಳು, ದುಃಖದ ಸಂದರ್ಭಗಳು, ಕ್ರೀಡೆ, ಹಬ್ಬ, ಮನರಂಜನೆಯAಥಾ ಗ್ರಾಮೀಣ ಸಂಸ್ಕೃತಿ ಬಿಂಬಿಸುವ ಚಟುವಟಿಕೆಗಳು ನಡೆದಾಗ ಅವುಗಳಿಗೆ ಧನಸಹಾಯ
ಹಾಗೂ ಸಂಬAಧಪಟ್ಟವರ ಪಕ್ಕದಲ್ಲಿ ನಿಂತು ನಿಮ್ಮೊಂದಿಗೆ ನಾವಿದ್ದೇವೆ ಎಂಬ ಧೈರ್ಯ ತುಂಬುವ ಕೆಲಸವನ್ನು ನಿರಂತರವಾಗಿ ನಡೆಸಿಕೊಂಡು ಬಂದರು. ತಾಲ್ಲೂಕಿನ ಎಲ್ಲಾ ಯುವಕರ ಮಾರ್ಗದರ್ಶಕರಾಗಿ ದುಡಿಯುವ ಮೂಲಕ ತಾಲ್ಲೂಕು ಯುವ ಪಡೆಯ ಪ್ರಶ್ನಾತೀತ ನಾಯಕರಂತೆ ಕಂಡರು. ಇದರಿಂದ 2008 ಮತ್ತು 2013ರಲ್ಲಿ
ಕೆ. ಮಹದೇವ್‌ರವರು ಕೂದಲೆಳೆಯ ಅಂತರವೆAಬAತೆ ಸೂಲು ಕಂಡರೂ ತಂದೆಯ ಮತ್ತು ಪಕ್ಷದ ವರ್ಚಸ್ಸು ಕಿಂಚಿತ್ತೂ ಕುಂದದAತೆ ಪಿ ಎಂ ಪ್ರಸನ್ನರವರು ನೋಡಿಕೊಂಡರು. ಇದು ಶ್ರೀ ಕೆ. ಮಹದೇವ್‌ರವರು 2018ರ ಗೆಲುವಿನಲ್ಲೂ
ಪ್ರತಿಬಿಂಬಿಸಿ ಅಮೋಘ ಗೆಲುವನ್ನು ಪಡೆಯಲು ಸಹಕಾರಿಯಾಯಿತು.