ಕೆ.ಮಹದೇವ್ ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಐತಿಹಾಸಿಕ ಗೆಲುವು

ಪಿರಿಯಾಪಟ್ಟಣ : ಎರಡು ಬಾರಿ ಸೋಲು ಕಂಡು ಮೂರನೇ ಬಾರಿಗೆ ರಾಜಕೀಯ ಗುರು ಕಾಂಗ್ರೆಸ್‌ನ ಕೆ.ವೆಂಕಟೇಶ್‌ರವರನ್ನು ಮಣಿಸುವುದರ ಮೂಲಕ ಜೆಡಿಎಸ್‌ನ ಕೆ.ಮಹದೇವ್ ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ್ದಾರೆ.
ತೀವ್ರ ಕುತೂಹಲ ಕೆರಳಿಸಿದ್ದ ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದ ಫಲಿತಾಂಶ ಜೆಡಿಎಸ್‌ನ ಕೆ.ಮಹದೇವ್ ಅವರು ಹಾಲಿ ಶಾಸಕ ಹಾಗೂ ಬಿಡಿಎ ಅಧ್ಯಕ್ಷ ಕೆ.ವೆಂಕಟೇಶ್ ಅವರನ್ನು 7629 ಮತಗಳ ಅಂತರದಿAದ ಸೋಲಿಸುವುದರ ಮೂಲಕ 2008 ಮತ್ತು 2013ರಲ್ಲಿ ಅಲ್ಪ ಮತಗಳಿಂದ ಸೋಲುಂಡಿದ್ದ ಕೆ.ಮಹದೇವ್ ಕೊನೆಗೂ ಗುರುವಿನ ವಿರುದ್ದ ಜಯ ಸಾಧಿಸಿ ಸೇಡು ತೀರಿಸಿಕೊಂಡಿದ್ದಾರೆ. ಈ ಮೂಲಕ 10-15ವರ್ಷಗಳಿಂದ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ತಮ್ಮ ಗೆಲುವನ್ನು ಸಮರ್ಪಿಸಿದ್ದಾರೆ. ಜೆಡಿಎಸ್‌ನ ಭದ್ರ ಕೋಟೆಯಂದೆ ಬಿಂಬಿತವಾಗಿರುವ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಶಾಸಕ ಕೆ.ವೆಂಕಟೇಶ್ 2004ರಲ್ಲಿ ಗೆಲುವು ಸಾಧಿಸಿದರು. ಕಾರಣಾಂತರ ಕಾಂಗ್ರೆಸ್‌ಗೆ ಹೋದ ಕೆ.ವೆಂಕಟೇಶ್ 2008ರಲ್ಲಿ 711 ಮತ್ತು 2013ರಲ್ಲಿ 2088 ಅಲ್ಪ ಮತಗಳ ಅಂತರದಿ0ದ ಗೆಲುವು ಸಾಧಿಸಿದ್ದರು. ಆದರೆ ಕಳೆದ 15 ವರ್ಷಗಳಿಂದ ತಾಲ್ಲೂಕಿನಲ್ಲಿ ಕೆ.ಮಹದೇವ್ ಪಕ್ಷವನ್ನು ಸಂಘಟಿಸಿ ಕಾರ್ಯಕರ್ತರ ನೋವು -ನಲಿವುಗಳಿಗೆ ಸ್ಪಂದಿಸಿದ್ದರಿAದ ಈ ಬಾರಿ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿರವರ ಅಲೆ ಹಾಗೂ ಮಾಜಿ ಪ್ರಧಾನಿ ದೇವೇಗೌಡರ ವೊಟ್ ಬ್ಯಾಂಕ್, ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್‌ನ ಆಡಳಿತ ವಿರೋದಿ ಅಲೆ ಮತ್ತು ಹಾಲಿ ಶಾಸಕ ಕೆ.ವೆಂಕಟೇಶ್‌ರವರ 35ವರ್ಷಗಳ ರಾಜಕೀಯ ಪ್ರಾಬಲ್ಯವನ್ನು ಬದಲಾವಣೆ ಮಾಡಲು ಜನರು ತಿರ್ಮಾನ, ಎರಡು ಚುನಾವಣೆಗಳಲ್ಲಿ ಅಲ್ಪ ಮತಗಳ ಸೋಲಿನ ಅನುಕಂಪ, ಕೆ.ಮಹದೇವ್‌ರವರ ಪುತ್ರ ಮೈಮುಲ್ ನಿರ್ದೇಶಕ ಪಿ.ಎಂ.ಪ್ರಸನ್ನ ಅವರ ಪಕ್ಷ ಸಂಘಟನೆ, ಇವೆಲ್ಲ ಕಾರಣಗಳಿಂದಾಗಿ ಜೆಡಿಎಸ್ ಅಭ್ಯರ್ಥಿ ಕೆ.ಮಹದೇವ್ ಗೆಲುವು ಸಾಧಿಸಲು ಕಾರಣವಾಗಿದೆ.
ಮೈಸೂರಿನಲ್ಲಿ ನಡೆದ ಮೊದಲ ಸುತ್ತಿನ ಮತ ಎಣಿಕೆಯಿಂದಲ್ಲೂ ಕೆ.ಮಹದೇವ್ ಅಂತಿಮ ಸುತ್ತಿನ ಮತ ಎಣಿಕೆ ವರೆಗೂ ಮುನ್ನಡೆ ಕಾಯ್ದುಕೊಂಡು ಅಂತಿಮವಾಗಿ 7629 ಮತಗಳ ಅಂತರದಿAದ ಗೆಲುವು ಸಾಧಿಸಿದರು.
ಮಂಗಳವಾರ ಬೆಳಿಗ್ಗೆಯಿಂದಲ್ಲೇ ಕೆ.ಮಹದೇವ್ ತಮ್ಮ ನಿವಾಸದಲ್ಲಿ ತಮ್ಮ ಕುಟುಂಬ ವರ್ಗ ಹಾಗೂ ಕಾರ್ಯಕರ್ತರೊಂದಿಗೆ ಫಲಿತಾಂಶವನ್ನು ಟಿವಿಯಲ್ಲಿ ವೀಕ್ಷಿಸುತ್ತಿದ್ದರು. ಫಲಿತಾಂಶ ಘೋಷಣೆಯಾದಂತೆ ಕಾರ್ಯಕರ್ತರೊಂದಿಗೆ ಮೈಸೂರಿಗೆ ತೆರಳಿದರು. ಫಲಿತಾಂಶ ಹೊರ ಬೀಳುತ್ತಿದ್ದಂತೆ ಹಳ್ಳಿಗಳಿಂದ ಆಗಮಿಸಿದ್ದ ಜೆಡಿಎಸ್ ಕಾರ್ಯಕರ್ತರು ಕೆ.ಮಹದೇವ್‌ರ ನಿವಾಸದ ಮುಂದೆ ಜಮಾವಣೆಗೊಂಡು ಸಹಿ ಹಂಚಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.
ಹೇಳಿಕೆ :-
ಕೆ.ಮಹದೇವ್ : ನಿರೀಕ್ಷೆಯಂತೆ ಫಲಿತಾಂಶ ಬಂದಿದ್ದು ಗೆಲುವಿನ ಅಂತರ ಕಡಿಮೆಯಾಗಿದೆ. ಕ್ಷೇತ್ರದ ಜನತೆ ಬದಲಾವಣೆಯನ್ನು ಬಯಸಿ ನನಗೆ ಮತ ನೀಡಿ ಆಶೀರ್ವಾದ ಮಾಡಿದ್ದಾರೆ. ತಾಲ್ಲೂಕಿನಲ್ಲಿ ಶಾಂತಿಯನ್ನು ಕಾಪಾಡುವುದು ನನ್ನ ಮೊದಲ ಅದ್ಯತೆಯಾಗಿದ್ದು ಯಾವುದೇ ಪಕ್ಷ ಭೇದ ಮಾಡದೆ ತಾಲ್ಲೂಕಿನ ಸಮಗ್ರ ಅಭಿವೃದ್ದಿಗೆ ಶ್ರಮಿಸಲಿದ್ದು ಈ ನನ್ನ ಜಯವನ್ನು ಕಾರ್ಯಕರ್ತರಿಗೆ ಅರ್ಪಿಸುತ್ತಿದ್ದೇನೆ.
ಅಭ್ಯರ್ಥಿಗಳು ಪಡೆದ ಮತಗಳ ವಿವರ :-
ಕೆ.ಮಹದೇವ್ ಜೆಡಿಎಸ್ 75981
ಕೆ.ವೆಂಕಟೇಶ್ ಕಾಂಗ್ರೆಸ್ 68352
ಎಸ್. ಮಂಜುನಾಥ ಬಿಜೆಪಿ 3862
ಗಿರೀಶ್ ಜೆಎಸ್‌ಪಿ ಪಾರ್ಟಿ 840
ಪಿ.ಶ್ರೀನಿವಾಸ್ ಪಕ್ಷೇತರ 380
ಎನ್.ಎಸ್.ಅಣ್ಣೇಗೌಡ ಪಕ್ಷೇತರ 376
ಎಚ್.ಕೆ. ಸುಮಿತ್ರ ಎಂಇಪಿ 241
ಮಹದೇವ್‌ಸ್ವಾಮಿ ಜನತಾದಳ ( ಸಂ) 203
.ಎಚ್.ಬಿ ದೇವರಾಜ್ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ 187
ಮಹದೇವ ರಿಪಬ್ಲಿಕನ್ ಸೇನಾ 168

Leave a Comment

Your email address will not be published. Required fields are marked *

error: Content is protected !!
Scroll to Top