ಪಟ್ಟಣದ ತಾ.ಪಂ.ಕಚೇರಿ ಆವರಣದಲ್ಲಿ ಕೃಷಿ ಇಲಾಖೆ ವತಿಯಿಂದ ಫಲಾನುಭವಿಗಳಿಗೆ ಪವರ್ಟಿಲ್ಲರ್ ವಿತರಿಸಿ ಮಾತನಾಡಿದರು. ಸರ್ಕಾರವು ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಸೇರಿದಂತೆ ವಿವಿಧ ಬಗೆಯ ಕೃಷಿ ಪರಿಕರಗಳನ್ನು ಸಬ್ಸಿಡಿ ರೂಪದಲ್ಲಿ ನೀಡುತ್ತಿರುವ ಮಾಹಿತಿಯನ್ನು ಕೃಷಿ ಅಧಿಕಾರಿಗಳು ರೈತರಿಗೆ ಸರಿಯಾದ ಮಾಹಿತಿ ನೀಡಿ ಸರ್ಕಾರದ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಈ ಹಿಂದೆ ಸರ್ಕಾರವು ಸಬ್ಸಿಡಿಯ ಹಣವನ್ನು ಸಂಬAಧಿಸಿದ ಕಂಪನಿಗಳಿಗೆ ನೇರವಾಗಿ ಪಾವತಿಸುತ್ತಿತ್ತು, ಕಳೆದ ವರ್ಷದಿಂದ ಸಬ್ಸಿಡಿ ಹಣವನ್ನು ರೈತರ ಖಾತೆಗೆ ಜಮಾ ಮಾಡುತ್ತಿರುವುದರಿಂದ ಕಂಪನಿಗಳು ಯಂತ್ರೋಪಕರಣ ವಿತರಿಸಲು ಮುಂದೆ ಬರುತ್ತಿಲ್ಲ. ಹಿಂದಿನ ವಿಧಾನವನ್ನೇ ಮುಂದುವರಿಸುವAತೆ ಸಚಿವರೊಂದಿಗೆ ಮಾತನಾಡಿ ಪ್ರಸ್ತುತವಿರುವ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.
ತಾಲ್ಲೂಕಿನ 5 ಫಲಾನುಭವಿಗಳಿಗೆ ಪವರ್ ಟಿಲ್ಲರ್ ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸಹಾಯಕ ಕೃಷಿ ಅಧಿಕಾರಿ ಯಾದವ್ಬಾಬು, ತಾ.ಪಂ.ಸದಸ್ಯ ಮೋಹನ್ರಾಜ್, ಮೈಮುಲ್ ನಿರ್ದೇಶಕ ಪಿ.ಎಂ.ಪ್ರಸನ್ನ, ಮುಖಂಡರಾದ ಸಿ.ಎನ್.ರವಿ, ಹೇಮಂತ್ಕುಮಾರ್, ಚನ್ನಯ್ಯ, ಕೃಷ್ಣೇಗೌಡ, ರಾಜಣ್ಣ, ಅಪೂರ್ವಮೋಹನ್, ಜಿ.ಸಿ.ಮಹದೇವ್ ಮತ್ತಿತರರು ಹಾಜರಿದ್ದರು.