ಕುಮಾರಣ್ಣ ನಮ್ಮ ಪಾಲಿನ ದೇವರಿದ್ದಂತೆ. ಯಾರೋ ಮೂರು ನಾಲ್ಕನೇ ವ್ಯಕ್ತಿಗಳಿಂದ ಪಕ್ಷ ಬಿಡುವಂತೆ ಆಫರ್ ಬಂದರೆ ನಾನ್ಯಾಕೆ ತಲೆ ಕೆಡಿಸಿಕೊಳ್ಳಬೇಕು? ಜೆಡಿಎಸ್ ಪಕ್ಷ ನನಗೆ ತಾಯಿ ಸಮಾನವಿದ್ದು ಶಾಸಕ ಸ್ಥಾನ ದೊರೆಯುವಂತೆ ಮಾಡಿದೆ. ಮಾತೃ ವಿರೋಧಿ ಚಟುವಟಿಕೆ ಮಾಡುವುದಿಲ್ಲ. ಕಳೆದೆರಡು ದಿನಗಳ ಹಿಂದೆ ಕುಟುಂಬ ಸಮೇತ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ತೆರಳಿ ಹರಕೆ ತೀರಿಸಿ ಬಂದಿದ್ದೇನೆ. ಪಕ್ಷ ತೊರೆಯುವ ಯಾವುದೇ ವಿಚಾರಗಳಿಲ್ಲ. ಗಾಳಿಸುದ್ದಿಗಳಿಗೆ ಜನತೆ ತಲೆಕೆಡಿಸಿಕೊಳ್ಳಬಾರದೆಂದು ಪ್ರತಿಕ್ರಿಯಿಸಿದ್ದಾರೆ.