ತಾಲ್ಲೂಕಿನ ಬೆಟ್ಟದಪುರದಲ್ಲಿ ನೂತನವಾಗಿ ನಿರ್ಮಿಸಿರುವ ಪ್ರಾಥಮಿಕ ಆರೋಗ್ಯಕೇಂದ್ರ ಉದ್ಘಾಟನೆಗೆ ಆಗಮಿಸಿದ ಸಂದರ್ಭ ಪ್ರತಾಪಸಿಂಹ ರವರು ವೇದಿಕೆಯಲ್ಲಿ ಮಾತು ಮುಗಿಸುತ್ತಿದ್ದಂತೆ ತಾಲ್ಲೂಕಿನ ದೊಡ್ಡನೇರಳೆ ಗ್ರಾಮದ ರೈತ ಅಪ್ಪಾಜಿಗೌಡ ಎಂಬುವರು ವೇದಿಕೆಯೇರಿ ಮಾತನಾಡಿ ತಂಬಾಕನ್ನು ಹರಾಜು ಮಾರುಕಟ್ಟೆಗೆ ಬಿಟ್ಟ 15 ದಿನಗಳ ನಂತರ ಅವರ ಬ್ಯಾಂಕ್ ಖಾತೆಗಳಿಗೆ ಹಣ ಜಮಾವಣೆಯಾಗುತ್ತಿದೆ. ಇದರಿಂದ ರೈತರಿಗೆ ತೊಂದರೆಯಾಗುತ್ತಿದ್ದು ಮಾರುಕಟ್ಟೆಗೆ ತಂಬಾಕು ಬಿಟ್ಟ 2-3 ದಿನದೊಳಗೆ ಹಣ ಪಾವತಿಸುವಂತೆ ಆದೇಶಿಸಬೇಕೆಂದು ಮನವಿ ಮಾಡಿದರು.
ಮನವಿಗೆ ಸ್ಪಂದಿಸಿ ಸಂಸದ ಪ್ರತಾಪಸಿಂಹ ಮಾತನಾಡಿ ಕಳೆದ 4 ವರ್ಷಗಳಿಂದ ತಂಬಾಕು ಬೆಳೆಗಾರರ ಕಷ್ಟಸುಖಗಳಿಗೆ ಸ್ಪಂದಿಸುತ್ತಾ ಬಂದಿದ್ದು ಮಂಡಳಿಯವರೊAದಿಗೆ ಮಾತನಾಡಿ ತಂಬಾಕು ಬೆಳೆಗೆ ತಾರತಮ್ಯ ಬೆಲೆ ನೀಡದೆ ಸರಾಸರಿ ಉತ್ತಮ ಬೆಲೆ ನೀಡಿ ರೈತರ ಸಂಕಷ್ಟಗಳನ್ನು ಪರಿಹರಿಸಿ ಶೀಘ್ರದಲ್ಲಿ ಹಣ ಪಾವತಿ ಮಾಡುವಂತೆ ಸೂಚಿಸಲಾಗುವುದು ಎಂದರು.
ವೇದಿಕೆಯಲ್ಲಿದ್ದ ಶಾಸಕ ಕೆ.ಮಹದೇವ್ ಪ್ರತಿಕ್ರಿಯಿಸಿ ತಾಲ್ಲೂಕಿನ ತಂಬಾಕು ಬೆಳೆಗಾರರ ಸಮಸ್ಯೆಗಳನ್ನು ಪರಿಹರಿಸುವಂತೆ ಸಂಸತ್ ಅಧಿವೇಶನದಲ್ಲಿ ಪ್ರಧಾನಿಯವರ ಗಮನ ಸೆಳೆಯುವಂತೆ ಚರ್ಚಿಸಿ ತಾಲ್ಲೂಕಿನ ರೈತರ ಅಭಿವೃದ್ದಿಗೆ ಸಹಕಾರ ನೀಡಬೇಕೆಂದು ಈಗಾಗಲೇ ಮಾಜಿ ಪ್ರಧಾನಿ ಹಾಗೂ ಸಂಸದರಾದ ಹೆಚ್.ಡಿ.ದೇವೇಗೌಡ ರವರೊಂದಿಗೆ ಮಾತನಾಡಿದ್ದು ತಾಲ್ಲೂಕಿನ ತಂಬಾಕು ರೈತರ ಹಿತ ಕಾಪಾಡಲು ಶ್ರಮಿಸುವುದಾಗಿ ತಿಳಿಸಿದರು.
ಈ ಸಂದರ್ಭ ಜಿ.ಪಂ.ಆರೋಗ್ಯ ಮತು ಶಿಕ್ಷಣ ಸ್ಥಾಯಿಸಮಿತಿ ಅಧ್ಯಕ್ಷ ಅಚ್ಯುತಾನಂದ್, ಸದಸ್ಯರಾದ ಮಂಜುನಾಥ್, ತಾ.ಪಂ.ಅಧ್ಯಕ್ಷೆ ಕೆ.ಆರ್.ನಿರೂಪ, ಉಪಾಧ್ಯಕ್ಷೆ ಜಯಮ್ಮ ಜವರಪ್ಪ, ಸದಸ್ಯ ಮಲ್ಲಿಕಾರ್ಜುನ್, ಗ್ರಾ.ಪಂ.ಸದಸ್ಯ ಅಯ್ಯರ್ಗಿರಿ ಮತ್ತಿತರಿದ್ದರು.