ಲೋಕಸಭಾ ಚುನಾವಣೆಯಲ್ಲಿ ಶಾಸಕ ಕೆ. ಮಹದೇವ್ ಬೆಂಬಲ ಕೋರಲು ಅವರ ಮನೆಗೆ ಶುಕ್ರವಾರ ಭೇಟಿ ನೀಡಿ ಮಾತನಾಡಿದರು. ಸಂವಿಧಾನ ಬದಲಾಯಿಸುವ ಹಾಗೂ ಮೀಸಲಾತಿಯನ್ನು ತೆಗೆದು ಹಾಕುವ ಮಾತನಾಡುವ ಶಕ್ತಿಗಳನ್ನು ದೂರವಿಟ್ಟು ಸಂವಿಧಾನ ಮತ್ತು ದೇಶದ ಆಂತರಿಕ ಭದ್ರತೆಯನ್ನು ಕಾಪಾಡುವುದು ನಮ್ಮ ಗುರಿಯಾಗಿದೆ ಎಂದರು. ಜಾತ್ಯತೀತ ಶಕ್ತಿಗಳು ಎಂದರೆ ದೇಶದ ಯಾವುದೇ ಜಾತಿ ರ್ಮವಿರಲಿ ಎಲ್ಲರನ್ನೂ ಕೂಡ ಒಂದು ಭಾವನೆಯಿಂದ ಕಾಣುವಂತಹ ಸಂಘಟನೆಗಳು ರಾಜಕೀಯ ಶಕ್ತಿಗಳು ಒಂದಾಗಿ ದೇಶದ ಆಡಳಿತವನ್ನು ಹಿಡಿಯಬೇಕಿದೆ ಎಂದು ಅಭಿಪ್ರಾಯಪಟ್ಟರು.
ಶಾಸಕ ಕೆ. ಮಹದೇವ್ ಮಾತನಾಡಿ ರಾಜ್ಯದಲ್ಲಿ ಸಮ್ಮಿಶ್ರ ರ್ಕಾರ ರಚನೆಯ ನಂತರ ಎದುರಿಸುತ್ತಿರುವ ಮೊದಲನೇ ಚುನಾವಣೆ ಇದಾಗಿದ್ದು, ಈ ಚುನಾವಣೆಯಲ್ಲಿ ಮೈತ್ರಿ ಅಭ್ರ್ಥಿಗಳನ್ನು ಹಾಕಬೇಕೆಂಬ ಹೈಕಮಾಂಡ್ ನರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ ಎಂದು ತಿಳಿಸಿದರು. ದೇಶದ ಹಿತದೃಷ್ಟಿಯಿಂದ ಹಾಗೂ ಕೋಮುವಾದಿ ಪಕ್ಷವನ್ನು ಅಧಿಕಾರದಿಂದ ದೂರವಿಡಬೇಕು ಎಂಬ ನರ್ಧಾರದಿಂದ ಜಾತ್ಯತೀತ ಪಕ್ಷಗಳ ಮೈತ್ರಿಯಾಗಿದೆ ಎಂದರು. ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ರ್ಥಿಯಾಗಿರುವ ಸಿ.ಎಚ್. ವಿಜಯಶಂಕರ್ ಗೆ ಸಂಪರ್ಣ ಸಹಕಾರ ನೀಡುವುದಾಗಿ ಹಾಗೂ ಅವರ ಪರ ಪ್ರಚಾರ ನಡೆಸುವುದಾಗಿ ಭರವಸೆ ನೀಡಿದರು.
ಈ ಸಂರ್ಭದಲ್ಲಿ ಮೈಮುಲ್ ನರ್ದೇಶಕ ಪಿ.ಎಂ. ಪ್ರಸನ್ನ, ತಾ.ಪಂ. ಸದಸ್ಯ ಎಸ್.ರಾಮು, ಜೆಡಿಎಸ್ ಮುಖಂಡರಾದ ಅಪರ್ವ ಮೋಹನ್, ಪೆಪ್ಸಿ ಕುಮಾರ್ ಕಾಂಗ್ರೆಸ್ ಮುಖಂಡರಾದ ಡಿ.ಟಿ. ಸ್ವಾಮಿ, ರಹಮತ್ ಜಾನ್ ಬಾಬು, ಎಂ.ಎಂ. ರಾಜೇಗೌಡ, ಸಿಗೂರು ವಿಜಯಕುಮಾರ್, ಶಿವಣ್ಣ, ಎಸ್.ಟಿ. ಕೃಷ್ಣ ಪ್ರಸಾದ್, ನಾಗಣ್ಣ, ಸೇರಿದಂತೆ ಮತ್ತಿತರರು ಹಾಜರಿದ್ದ29ಪಿವೈಪಿ02: ಪಿರಿಯಾಪಟ್ಟಣ ಜೆಡಿಎಸ್ ಶಾಸಕ ಕೆ.ಮಹದೇವ್ ರ ನಿವಾಸಕ್ಕೆ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ರ್ಥಿ ಸಿ.ಎಚ್. ವಿಜಯಶಂಕರ್ ಭೇಟಿ ನೀಡಿ ತಮ್ಮ ಪರ ಪ್ರಚಾರದಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.