ಇತ್ತೀಚೆಗೆ ನಡೆದ ತಾಲ್ಲೂಕಿನ ಅತ್ತಿಗೋಡು ಗ್ರಾಮದ ಪ್ರಾಥಮಿಕ ಶಾಲೆಯ 70 ನೇ ವರ್ಷದ ಮತ್ತು ಪ್ರೌಢಶಾಲೆಯ 7 ನೇ ವರ್ಷದ ಶಾಲಾ ಸಂಭ್ರಮೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರಿ ಶಾಲೆಗಳ ಅಭಿವೃದ್ದಿ ಮತ್ತು ಉನ್ನತ ಗುಣಮಟ್ಟದ ಶಿಕ್ಷಣ ದೊರೆಯುವ ಸಲುವಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳು ಸರಿಯಾದ ರೀತಿಯಲ್ಲಿ ಸದ್ಬಳಕೆಯಾದರೆ ಅತ್ತಿಗೋಡು ಸರ್ಕಾರಿ ಶಾಲೆಯಂತೆಯೇ ಅಭಿವೃದ್ದಿ ಹೊಂದಬಹುದು ಎಂದರು.
ಜಿ.ಪA.ಹAಗಾಮಿ ಅಧ್ಯಕ್ಷ ಸಾ.ರಾ.ನಂದೀಶ್ ಪ್ರತಿಭಾ ಪುರಸ್ಕಾರ ಮತ್ತು ದತ್ತಿವಿತರಣೆ ನಡೆಸಿ ಮಾತನಾಡಿ ಪೋಷಕರುಗಳು ಖಾಸಗಿ ಶಾಲಾ ವ್ಯಾಮೋಹ ಬಿಟ್ಟು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಿ ಗುಣಮಟ್ಟದ ಶಿಕ್ಷಣ ಕಲಿಸುವಂತೆ ಕೋರಿದರು.
ತಾ.ಪಂ.ಅಧ್ಯಕ್ಷೆ ಕೆ.ಆರ್.ನಿರೂಪ ದಾನಿಗಳಿಗೆ ಸನ್ಮಾನಿಸಿ ಮಾತನಾಡಿ ತಾಲ್ಲೂಕಿನ ಸರ್ಕಾರಿ ಶಾಲೆಯೊಂದು ಸರ್ಕಾರದ ಸವಲತ್ತುಗಳ ಜೊತೆಗೆ ದಾನಿಗಳ ಸಹಾಯದಿಂದ ಖಾಸಗಿ ಶಾಲೆಗಳಿಗಿಂತಲೂ ಹೆಚ್ಚಿನ ಸೌಕರ್ಯ ನೀಡುತ್ತಿರುವುದಕ್ಕೆ ಮುಖ್ಯ ಶಿಕ್ಷಕ ನಾಗಶೆಟ್ಟಿ ರವರು ಹಾಗು ಶಿಕ್ಷಕ ವೃಂದದವರ ಸಾಮಾಜಿಕ ಕಳಕಳಿಗೆ ಅಭಿನಂದನೆ ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಚಿಕ್ಕಸ್ವಾಮಿ ಮಾತನಾಡಿ ವಿದ್ಯಾರ್ಥಿಜೀವನ ಅತ್ಯಮೂಲ್ಯವಾಗಿದ್ದು ಬದುಕನ್ನು ನಿರ್ದರಿಸುವ ಮಹತ್ವ ಸ್ಥಾನ ಹೊಂದಿರುವುದರಿAದ ವಿದ್ಯಾರ್ಥಿಗಳು ಕಲಿಕೆಯತ್ತ ಹೆಚ್ಚು ಗಮನ ಹರಿಸಿ ಉತ್ತಮ ಫಲಿತಾಂಶ ಗಳಿಸುವಂತೆ ತಿಳಿಸಿದರು.
ರಾವಂದೂರು ಮುರುಘ ಮಠದ ಮೋಕ್ಷಪತಿ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
ಇದೇ ಸಂದರ್ಭ ಶಾಲೆಯ ಅಭಿವೃದ್ದಿಗೆ ಅತಿ ಹೆಚ್ಚಿನ ಸಹಕಾರ ನೀಡಿರುವ ಜಿ.ಪಂ.ನಿವೃತ್ತ ಸಹಾಯಕ ಅಭಿಯಂತರಾದ ಡಿ.ಚಂದ್ರಶೇಖರ್ ರವರಿಗೆ ಮಹಾ ಪೋಷಕ ರತ್ನ ಮತ್ತು ವರ್ತಕರಾದ ಎಸ್.ಮಲ್ಲೇಶ್, ಸಹಪ್ರಾದ್ಯಾಪಕರಾದ ನೇತ್ರಾವತಿ ಶಿವದೇವಪ್ಪ, ರವರಿಗೆ ಪೋಷಕ ರತ್ನ ಪ್ರಶಸ್ತಿ ನೀಡಲಾಯಿತು.
ಸುಧಾಮಣಿ ಅಶೋಕ್ ಕುಮಾರ್, ಐಟಿಸಿ ಕಂಪನಿಯ ರವೀಶ್, ಪೂವಿ ಉಮೇಶ್ ಎ.ಬಿ.ತೋಂಟದಾರ್ಯ, ಅಶ್ವಿನಿ ರಜನಿಕಾಂತ್, ಪವಿತ್ರ ಮಾದೇಶ್, ಎಂ.ಸುರೇಶ್, ಎ.ಬಿ.ನಟರಾಜ್, ಅವರುಗಳನ್ನು ಸನ್ಮಾನಿಸಲಾಯಿತು.
ಶಾಲಾ ವಾರ್ಷಿಕ ವರದಿಯನ್ನು ವಿಡಿಯೋ ತುಣುಕಿನ ಮೂಲಕ ಪ್ರದರ್ಶಿಸಿದ್ದು ವಿಶೇಷವಾಗಿತ್ತು. ಎಸ್ಎಸ್ಎಲ್ಸಿ ಯಲ್ಲಿ ಹೆಚ್ಚು ಅಂಕ ಮತ್ತು ಕನ್ನಡ ವಿಷಯದಲ್ಲಿ 125 ಪೂರ್ಣ ಅಂಕ ಪಡೆದ ಶ್ವೇತ, ರೋಜ, ಐಶ್ವರ್ಯ, ಚೈತ್ರ, ರಶ್ಮಿತ, ಮಹಂತೇಶ್, ಭೂಮಿಕ, ಸಂಗೀತ, ಸಂಜು, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಶಾಲಾ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಕಾರ್ಯಕ್ರಮದಲ್ಲಿ ಜಿ.ಪಂ.ಸದಸ್ಯ ಮಂಜುನಾಥ್, ತಾ.ಪಂ.ಸದಸ್ಯ ಮಲ್ಲಿಕಾರ್ಜುನ್, ಗ್ರಾ.ಪಂ.ಅಧ್ಯಕ್ಷ ಲಕ್ಮಣೇಗೌಡ, ಸದಸ್ಯರಾದ ಆರತಿ, ಗೌರಿ ಜಯ, ಮುಖಂಡರುಗಳಾದ ಹೊಲದಪ್ಪ, ವಿ.ಜಿ.ಅಪ್ಪಾಜಿಗೌಡ, ಶಿಕ್ಷಣ ಇಲಾಖೆಯ ವಿವಿಧ ಪದಾಧಿಕಾರಿಗಳಾದ ವಿಜಯ್, ಕೆ.ಎಸ್.ಮಹದೇವಪ್ಪ, ರಘುಪತಿ, ಮೂರ್ತಿ , ಡಾ.ಮಮತ, ಕೆನರಾ ಬ್ಯಾಂಕ್ ನ ಅವಿನಾಶ್, ಪ್ರೌಢಶಾಲಾ ಮುಖ್ಯ ಶಿಕ್ಷಕ ನಾಗಶೆಟ್ಟಿ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಎಂ.ಸುರೇಶ್, ಎಸ್ಡಿಎಂಸಿ ಅಧ್ಯಕ್ಷರುಗಳಾದ ಚಂದ್ರಕಲ, ಕಾಮಾಕ್ಷಿ, ಶಿಕ್ಷಕ ವೃಂದದವರು, ಹಾಜರಿದ್ದರು.