ಜೆಡಿಎಸ್ ಶಾಸಕ ಕೆ.ಮಹದೇವ್ ಮನೆಗೆ ಸೋಮವಾರ ಬೇಟಿ ನೀಡಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ರ‍್ಥಿ ಕಾಂಗ್ರೆಸ್ ಸಿ.ಎಚ್ ವಿಜಯಶಂಕರ್ ಪರವಾಗಿ ಮತ ಯಾಚಿಸಲು ಸಹಕಾರ ನೀಡುವಂತೆ ಕೋರಿ ಮತ್ತು ಪ್ರಚಾರ ನಡೆಸಲು ದಿನಾಂಕ ನಿಗದಿ ಪಡಿಸಿ ಮಾತನಾಡಿದರು. ಕೋಮುವಾದಿ ಬಿಜೆಪಿ ಪಕ್ಷವನ್ನು ಅಧಿಕಾರದಿಂದ ದೂರವಿಡಬೇಕೆನ್ನುವುದು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಗುರಿಯಾಗಿದ್ದು ತಾಲ್ಲೂಕಿನಲ್ಲಿ ಎರಡು ಪಕ್ಷಗಳ ಮುಖಂಡರು ಹಾಗೂ ಕರ‍್ಯರ‍್ತರು ತಮ್ಮ ಬಿನ್ನಾಭಿಪ್ರಾಯಗಳನ್ನು ತೊರೆದು ಮೈತ್ರಿ ಆಭ್ರ‍್ಥಿಯ ಗೆಲುವಿಗೆ ಸಹಕರಿಸಬೇಕಿದೆ ಎಂದರು.
ಏ.4ರ ಗುರುವಾರ ಸೇರಿದಂತೆ 2 ದಿನಗಳ ಕಾಲ ಮೈತ್ರಿ ಅಭ್ರ‍್ಥಿ ಸಿ.ಎಚ್ ವಿಜಯಶಂಕರ್ ತಾಲ್ಲೂಕಿನಾದ್ಯಂತ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದು ಒಟ್ಟು 34 ಗ್ರಾ.ಪಂ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಳಗಳಿಗೆ ಭೇಟಿ ನೀಡಿ ಮತಯಾಚಿಸಲಿದ್ದಾರೆ ಎಂದರು. ಇವರೊಂದಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷರು, ಶಾಸಕ ಕೆ.ಮಹದೇವ್, ಮಾಜಿ ಶಾಸಕ ಕೆ.ವೆಂಕಟೇಶ್ ಸೇರಿದಂತೆ ಜಿಲ್ಲೆ ಮತ್ತು ತಾಲ್ಲೂಕಿನ ಎರಡೂ ಪಕ್ಷಗಳ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಶಾಸಕ ಕೆ.ಮಹದೇವ್ ಮಾತನಾಡಿ ತಾಲ್ಲೂಕಿನಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮತಗಳು ಒಟ್ಟಾದಲ್ಲಿ ಮೈತ್ರಿ ಅಭ್ರ‍್ಥಿಯ ಗೆಲುವು ಶತಸಿದ್ದ ಎಂದರು. ಸಿ.ಎಚ್ ವಿಜಯಶಂಕರ್ ಪರವಾಗಿ ತಾಲ್ಲೂಕಿನಾದ್ಯಂತ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದರು. ರಾಜ್ಯದಲ್ಲಿ ಅಧಿಕಾರದಲ್ಲಿರುವ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ರ‍್ಕಾರ ಅವಧಿಪರ‍್ಣಗೊಳಿಸುವ ನಿಟ್ಟಿನಲ್ಲಿ ಎರಡೂ ಪಕ್ಷಗಳ ಮುಖಂಡರು ಮತ್ತು ಕರ‍್ಯರ‍್ತರು ಕೈಜೋಡಿಸಬೇಕಿದೆ ಎಂದರು.