ಶಾಸಕ ಕೆ.ಮಹದೇವ್ ಮಾತನಾಡಿ ಅಂದಿನ ಕಾಲದ ಕೆಂಪೇಗೌಡರ ಆಳ್ವಿಕೆಯ ಸಮಯದಲ್ಲಿ ಮೂಲಭೂತ ಸೌರ‍್ಯಗಳಿಗೆ ಒತ್ತು ಹಾಗೂ ಪ್ರಜೆಗಳ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚು ಆದ್ಯತೆ ನೀಡಿದ್ದರು, ಧರ‍್ಮಿಕ ಕೆಲಸಗಳ ಮುಖಾಂತರ ಪ್ರಜೆಗಳ ಶ್ರೇಯೋಭಿವೃದ್ಧಿಗೆ ಶ್ರಮಿಸಿ ನಾಯಕರಾಗಿ ನಾಡಪ್ರಭು ಎಂದು ಖ್ಯಾತರಾಗಿದ್ದಾರೆ ಎಂದರು. ಕೆಂಪೇಗೌಡರು ಸೇರಿದಂತೆ ಮಹಾನ್ ನಾಯಕರುಗಳ ಜಯಂತಿಗಳು ಒಂದು ರ‍್ಗಕ್ಕೆ ಸೀಮಿತವಾಗುತ್ತಿರುವುದು ವಿಷಾದನೀಯ, ಮುಂದಿನ ದಿನಗಳಲ್ಲಿ ತಾಲ್ಲೂಕು ಆಡಳಿತ ವತಿಯಿಂದ ನಡೆಯುವ ಕರ‍್ಯಕ್ರಮಗಳು ಎಲ್ಲಾ ರ‍್ಗದ ಜನರ ಉಪಸ್ಥಿತಿಯಲ್ಲಿ ನಡೆದು ಹೆಚ್ಚಿನ ಮಟ್ಟದಲ್ಲಿ ಯಶಸ್ಸು ಗಳಿಸಲು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ನಿಗಾ ವಹಿಸುವಂತೆ ತಿಳಿಸಿದರು.
ಪಟ್ಟಣದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ ನಾಡಪ್ರಭು ಕೆಂಪೇಗೌಡರ ಜಯಂತಿ ಕರ‍್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು, ಬಾಲ್ಯದಿಂದಲೇ ಹಿರಿಯರ ಮರ‍್ಗರ‍್ಶನದಲ್ಲಿ ಮಹಾನ್ ನಾಯಕರುಗಳ ಆರ‍್ಶಗಳನ್ನು ಮೈಗೂಡಿಸಿಕೊಂಡು ಚಿಕ್ಕ ವಯಸ್ಸಿನಲ್ಲಿಯೇ ನಾಯಕತ್ವದ ಗುಣ ಅಳವಡಿಸಿಕೊಂಡು ರಾಜತಾಂತ್ರಿಕತೆಯ ವಿದ್ಯಾಭ್ಯಾಸದ ಮೂಲಕ ಬೆಂಗಳೂರು ಸಾಮ್ರಾಜ್ಯವನ್ನು ಒಗ್ಗೂಡಿಸಿ ತನ್ನ ಪ್ರಜೆಗಳ ಹಿತರಕ್ಷಣೆಗಾಗಿ ಹಗಲಿರುಳು ದುಡಿದ ಮಹಾನ್ ನಾಯಕ ಎಂದರು, ಜಾತ್ಯತೀತ ಮನೋಭಾವದಿಂದ ತನ್ನ ಪ್ರಜೆಗಳಿಗಾಗಿ ಕೆರೆ ಕಟ್ಟೆಗಳು, ಉದ್ಯಾನವನಗಳನ್ನು ಬೆಂಗಳೂರಿನ ನಾಲ್ಕು ದಿಕ್ಕುಗಳಲ್ಲೂ ನರ‍್ಮಿಸಿ ಐತಿಹಾಸಿಕವಾಗಿ ಗುರುತಿಸಿಕೊಳ್ಳಲು ಕಾರಣರ‍್ತರಾಗಿದ್ದರು ಎಂದರು.
ಇದೇ ಸಂರ‍್ಭ ತಾಲ್ಲೂಕಿನ ವಿವಿಧ ಕ್ಷೇತ್ರಗಳಲ್ಲಿನ ಸಾಮಾಜಿಕ ಸೇವೆಗಾಗಿ ವಿವಿಧ ಸಮಾಜಗಳ ಹಿರಿಯ ಮುಖಂಡರುಗಳಾದ ಕಾಳಪ್ಪ, ಅಣ್ಣಯ್ಯಶೆಟ್ಟರು, ವಕೀಲ ಗೋವಿಂದೇಗೌಡ, ಮೈಲಾರಪ್ಪ, ಅಪ್ಪಾಜಿಗೌಡ, ಚೌತಿ ಗೋವಿಂದೇಗೌಡ ಹಾಗೂ ಕೆ.ಪಿ ಚಂದ್ರಶೇಖರಯ್ಯ ಅವರನ್ನು ಸನ್ಮಾನಿಸಲಾಯಿತು.
ಕರ‍್ಯಕ್ರಮದಲ್ಲಿ ಜಿ.ಪಂ ಸದಸ್ಯರಾದ ರಾಜೇಂದ್ರ, ಜಯಕುಮಾರ್, ಮಣಿ ಡಿ.ಟಿ ಸ್ವಾಮಿ, ತಾ.ಪಂ ಅಧ್ಯಕ್ಷೆ ಕೆ.ಆರ್ ನಿರೂಪ, ಉಪಾಧ್ಯಕ್ಷೆ ಜಯಮ್ಮ, ಸದಸ್ಯರಾದ ಶಿವಮ್ಮ, ಜಯಂತಿ, ಸುಮಿತ್ರಾ, ಶ್ರೀನಿವಾಸ್, ಮಹದೇವ್, ರಾಮು, ಮೋಹನ್ ರಾಜ್, ಶೋಭಾ, ರಂಗಸ್ವಾಮಿ, ಪುರಸಭಾ ಸದಸ್ಯರಾದ ಮಂಜುಳಾ, ಪಿ.ಸಿ ಕೃಷ್ಣ, ಪ್ರಕಾಶ್ ಸಿಂಗ್, ತಹಸೀಲ್ದಾರ್ ಶ್ವೇತಾ ಎನ್ ರವೀಂದ್ರ, ತಾ.ಪಂ ಇಒ ಡಿ.ಸಿ ಶ್ರುತಿ, ಬಿಇಒ ಚಿಕ್ಕಸ್ವಾಮಿ, ಪುರಸಭೆ ಮುಖ್ಯಾಧಿಕಾರಿ ಪುಟ್ಟರಾಜು, ತಾಲೂಕು ಒಕ್ಕಲಿಗರ ವೇದಿಕೆ ಅಧ್ಯಕ್ಷ ರಾಜೇಗೌಡ, ಯುವ ವೇದಿಕೆ ಅಧ್ಯಕ್ಷ ದಿನೇಶ್, ಮುಖಂಡರುಗಳಾದ ಕುಮಾರ್, ಸಿದ್ದೇಗೌಡ, ವಿಕ್ರಮ್ ಗೌಡ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಮಾಜದ ಮುಖಂಡರುಗಳು ಹಾಜರಿದ್ದರು.