ತಾಲ್ಲೂಕಿನಲ್ಲಿ ಶೇ.96.46 ರಷ್ಟು ಪಲ್ಸ್ ಪೋಲಿಯೋ ಲಸಿಕೆ ಕರ್ಯಕ್ರಮ ಗುರಿ ಸಾಧನೆ ಮಾಡುವ ಮೂಲಕ ಭಾನುವಾರ ಲಸಿಕೆ ಆಂದೋಲನ ನಡೆಸಲಾಗಿದೆ.
ತಾಲ್ಲೂಕಿನಲ್ಲಿ 155 ಭೂತ್ಗಳನ್ನು ತೆರೆಯಲಾಗಿತ್ತು. ಒಟ್ಟು 20139 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿತ್ತು ಒಟ್ಟಾರೆ 19427 ಮಕ್ಕಳಿಗೆ ಲಸಿಕೆ ಹಾಕಲಾಗಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ನಾಗೇಶ್ ಮಾಹಿತಿ ನೀಡಿದ್ದಾರೆ. ಇನ್ನುಳಿದ ಮಕ್ಕಳಿಗೆ ಮನೆಗೆ ಭೇಟಿ ನೀಡಿ ಲಸಿಕೆ ಹಾಕಲಾಗುವುದ ಎಂದು ತಿಳಿಸಿದ್ದಾರೆ. 628 ಸಿಬ್ಬಂದಿಗಳು ಮತ್ತು 35 ಮೇಲ್ವಿಚಾರಕರುನ್ನು ಬಳಸಿಕೊಳ್ಳಲಾಗಿತ್ತು.
ಪಟ್ಟಣದ ಸರ್ವಜನಿಕ ಆಸ್ಪತ್ರೆಯಲ್ಲಿ ಶಾಸಕ ಕೆ.ಮಹದೇವ್ ಮಗುವಿಗೆ ಪೋಲಿಯೊ ಲಸಿಕೆ ಹಾಕುವ ಮೂಲಕ ಪಲ್ಸ್ ಪೋಲಿಯೋ ಆಂದೋಲನಕ್ಕೆ ಚಾಲನೆ ನೀಡಿದರು.
ತಾಲ್ಲೂಕಿನ ವಿವಿಧೆಡೆ ಸ್ಥಳೀಯ ಜನಪ್ರತಿನಿಧಿಗಳು ಸಹ ಆಂದೋಲನಕ್ಕೆ ಚಾಲನೆ ನೀಡಿದರು.
ಈ ಸಂರ್ಭದಲ್ಲಿ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಶ್ರೀನಿವಾಸ್ , ಟಿಎಚ್ಒ ಡಾ.ನಾಗೇಶ್, ಡಾ.ಮಮತಾ, ಆರೋಗ್ಯ ನಿರೀಕ್ಷಕ ಪ್ರಕಾಶ್, ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಲತಾ, ಪುರಸಭಾ ಸದಸ್ಯ ಪಿ.ಎನ್.ವಿನೋದ್, ಆರೋಗ್ಯ ರಕ್ಷಾ ಸಮಿತಿ ಸದಸ್ಯರು ಹಾಜರಿದ್ದರು.