ಪಟ್ಟಣದ ತಮ್ಮ ನಿವಾಸದಲ್ಲಿ ತಾಲ್ಲೂಕಿನ ಭುವನಹಳ್ಳಿ ಪಿಎಸಿಸಿಎಸ್ ಗೆ ನೂತನವಾಗಿ ಆಯ್ಕೆಯಾದ ಜೆಡಿಎಸ್ ಬೆಂಬಲಿತ ನಿರ್ದೇಶಕರುಗಳನ್ನು ಅಭಿನಂದಿಸಿ ಅವರು ಮಾತನಾಡಿದರು. ರೈತರಿಗೆ ಅನುಕೂಲವಾಗಲೆಂದು ರಾಷ್ಟಿçÃಕೃತ ಬ್ಯಾಂಕುಗಳಿಗಿAತ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಸೇರಿದಂತೆ ಹಲವು ಸವಲತ್ತುಗಳನ್ನು ಸಹಕಾರ ಬ್ಯಾಂಕುಗಳ ಮುಖಾಂತರ ನೀಡುತ್ತಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.
ಭುವನಹಳ್ಳಿ ಗ್ರಾಮದ ಯ.ಈಶ್ವರಯ್ಯ ಮಾತನಾಡಿ ನೂತನ ಪದಾಧಿಕಾರಿಗಳು ಸಂಘಗಳಲ್ಲಿ ಸಿಗುವ ಸೌಲಭ್ಯಗಳನ್ನು ಬಹುಬೇಗ ರೈತರಿಗೆ ದೊರಕಿಸಿಕೊಡುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸುವಂತೆ ತಿಳಿಸಿದರು.
ನೂತನವಾಗಿ ಆಯ್ಕೆಯಾದ ನಿರ್ದೇಶಕರುಗಳಾದ ಬಿ.ವಿ.ಗಿರೀಶ್, ಜಿ.ಜಯಣ್ಣ, ಬಿ.ಆರ್.ಲೋಹಿತ್, ವೆಂಕಟರಮಣಶೆಟ್ಟಿ, ಶ್ರೀಮತಿ ಲಕ್ಷಿö್ಮ ನಾರಾಯಣಶೆಟ್ಟಿ ರವರನ್ನು ಅಭಿನಂದಿಸಲಾಯಿತು.
ಈ ಸಂದರ್ಭ ಗ್ರಾ.ಪಂ.ಸದಸ್ಯ ನಾರಾಯಣಶೆಟ್ಟಿ, ಪ.ರಾಜೇಗೌಡ, ಮುಖಂಡರಾದ ಬಿ.ಕೆ.ನಾಗೇಂದ್ರ, ಮಹೇಶ್, ರಾಮೇಗೌಡ, ವಿಜಯಕುಮಾರ್, ಸೋಮಶೇಖರಯ್ಯ, ಶಿವಪ್ಪ, ಬೊಮ್ಮಯ್ಯ, ಕಾಂತರಾಜ್, ರಾಜಮಣಿ, ರವಿಕುಮಾರ್, ವಸಂತೇಗೌಡ, ಸತೀಶ್, ನಟರಾಜನಾಯಕ್ ಹಾಜರಿದ್ದರು.