ಪಟ್ಟಣದ ತಾ.ಪಂ.ಸಭಾAಗಣದಲ್ಲಿ ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿವತಿಯಿಂದ ನಡೆದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಪ್ರಧಾನಭಾಷಣಕಾರರಾಗಿ ಮಾತನಾಡಿ ಅವರು ಮಡಿವಾಳ ಎಂಬುದು ಕಾಯಕ ಸಂಕೇತವಾಗಿದ್ದು ಮಲೀನವಾದುದ್ದನ್ನು ಮಡಿ ಮಾಡುವ ಮೂಲಕ ಮಡಿವಾಳ ಎಂಬ ಹೆಸರು ಜನಾಂಗಕ್ಕೆ ಬಂದಿದೆ ಎಂದರು. ಬಸವಣ್ಣನವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಪ್ರಮುಖರಲ್ಲಿ ಮಡಿವಾಳ ಮಾಚಿದೇವ ಒಬ್ಬರಾಗಿದ್ದು ಸಮಾಜದ ಉದ್ದಾರಕ್ಕಾಗಿ ಕಲ್ಯಾಣದಲ್ಲಿ ಕ್ರಾಂತಿಯುAಟುಮಾಡಿದ್ದು ಅಜರಾಮರಾಗಿದೆ ಎಂದರು.
ಶಾಸಕ ಕೆ.ಮಹದೇವ್ ಮಾತನಾಡಿ ಕಾಯಕದಲ್ಲಿ ಭಗವಂತನನ್ನು ಕಾಣುತ್ತಿದ್ದ ಮಾಚಿದೇವರು ಹಿಂದಿನ ಕಾಲದಲ್ಲಿ ಆಚರಣೆಯಲ್ಲಿದ್ದ ಸಾಮಾಜಿಕ ಪಿಡುಗಗಳ ವಿರುದ್ಧ ಹೋರಾಟ ನಡೆಸಿ ಅರಿವು ಮೂಡಿಸುತ್ತಿದ್ದರು. ಸಂತರ ಜಯಂತಿಗಳು ಕೇವಲ ಜನಾಂಗಕ್ಕೆ ಸೀಮಿತವಾಗ ಬಾರದು ಎಂದರು.
ಈ ಸಂದರ್ಭದಲ್ಲಿ ಸಮಾಜದವತಿಯಿಂದ ಪಟ್ಟಣದಲ್ಲಿ ನಿವೇಶನ ಮಂಜೂರು ಮತ್ತು ಪಟ್ಟಣದ ವೃತ್ತವೊಂದಕ್ಕೆ ಮಡಿವಾಳ ಮಾಚಿದೇವರ ಹೆಸರಿಡುವಂತೆ ಮನವಿ ಸಲ್ಲಿಸಲಾಯಿತು.
ಸಮಾರಂಭಕ್ಕೂ ಮೊದಲು ಪಟ್ಟಣದ ಸಿಪಿಐ ಕಚೇರಿಬಳಿಯಿಂದ ಮಡಿವಾಳ ಮಾಚಿದೇವರ ಭಾವಚಿತ್ರವನ್ನು ಮೆರವಣಿಗೆಯಲ್ಲಿ ತರಲಾಯಿತು. ಮೆರವಣಿಗೆಯಲ್ಲಿ ಕಳಸ ಹೊತ್ತ ಮಹಿಳೆಯರು, ವಿವಿಧ ಕಲಾತಂಡಗಳು ಭಾವಹಿಸಿದ್ದವು.
ಕಾರ್ಯಕ್ರಮದಲ್ಲಿ ಜಿ.ಪಂ.ಸದಸ್ಯರಾದ ಕೆ.ಎಸ್.ಮಂಜುನಾಥ್, ಜಯಕುಮಾರ್, ಎಪಿಎಂಸಿ ಅಧ್ಯಕ್ಷ ರಾಜಯ್ಯ, ಎಂಡಿಸಿಸಿ ನಿರ್ದೇಶಕ ಸಿ.ಎನ್.ರವಿ, ಗ್ರಾ.ಪಂ.ಅಧ್ಯಕ್ಷೆ ರಾಗಿಣಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಈ.ಬಿ.ವೆಂಕಟೇಶ್, ಶಿರಸ್ತೇದಾರ್ ಪ್ರಕಾಶ್, ಪುರಸಭೆ ಸದಸ್ಯರಾದ ವಿನೋದ್, ಭಾರತಿ, ಮಡಿವಾಳ ಜನಾಂಗದ ಕೆ.ಆರ್.ನಗರ ಘಟಕದ ಅಧ್ಯಕ್ಷ ಕುಮಾರ್, ತಾಲ್ಲೂಕು ಮಡಿವಾಳ ಸಮಾಜದ ಅಧ್ಯಕ್ಷ ರಾಮಚಂದ್ರಶೆಟ್ಟಿ, ಉಪಾಧ್ಯಕ್ಷ ಮಾದೇಶ್, ಗೌರವಾಧ್ಯಕ್ಷ ಎಚ್.ಸಿ.ಕೃಷ್ಣಶೆಟ್ಟಿ, ಶಿವಪ್ಪ, ಕೃಷ್ಣಶೆಟ್ಟಿ ಸಮಾಜದ ಮುಖಂಡರು ಹಾಜರಿದ್ದರು.