ಇತ್ತೀಚೆಗಷ್ಟೇ ಉದ್ಘಾಟನೆಯಾಗಿದ್ದ ತಾಲ್ಲೂಕಿನ ಬೆಟ್ಟದಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅನಿರೀಕ್ಷಿತ ಭೇಟಿ ನೀಡಿ ಮೂಲಭೂತ ಸೌಕರ್ಯಗಳನ್ನು ವೀಕ್ಷಿಸಿದರು.
ತಾಲ್ಲೂಕಿನ ಬೆಟ್ಟದಪುರದ ಪಿಎಸಿಸಿಎಸ್ ನ ಮೊದಲ ಅಂತಸ್ತಿನ ನೂತನ ಕಟ್ಟಡ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿ ರಾವಂದೂರಿಗೆ ತೆರಳುತ್ತಿದ್ದಾಗ ಮಾರ್ಗ ಮಧ್ಯೆ ಕಂಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ
ಅನಿರೀಕ್ಷಿತ ಭೇಟಿ ನೀಡಿ ಪ್ರಾಂಶುಪಾಲೆ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದು ಮಾತನಾಡಿದ ಅವರು ಗ್ರಾಮಾಂತರ ಪ್ರದೇಶಗಳ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಮೇ¯ಂತಸ್ತಿನ ಹೆಚ್ಚುವರಿ ಕಟ್ಟಡಕ್ಕಾಗಿ 1.5 ಕೋಟಿ ಹಣ ಬಿಡುಗಡೆಗೊಳಿಸಿದ್ದು ಶೀಘ್ರದಲ್ಲೇ ಕಾಮಗಾರಿ ಆರಂಭಿಸುವ ಭರವಸೆ ನೀಡಿದರು.
ಈ ಸಂದರ್ಭ ಪ್ರಾಂಶುಪಾಲೆ ಎಸ್.ಜಿ.ಚೈತ್ರ ಕಾಲೇಜಿಗೆ ಅಗತ್ಯವಿರುವ ಶುದ್ದ ಕುಡಿಯುವ ನೀರಿನ ಘಟಕ, ಪೀಠೋಪಕರಣ, ಖಾಯಂ ಗ್ರಂಥಪಾಲಕರು ಮತ್ತು ದೈಹಿಕ ಶಿಕ್ಷಣ ನಿರ್ದೇಶಕರು, ಗ್ರಂಥಾಲಯ ಪುಸ್ತಕಗಳ ಕೊರತೆಯ ಮನವಿ ನೀಡಿದರು.
ಶಾಸಕ ಕೆ.ಮಹದೇವ್, ಸಿಡಿಸಿ ಸದಸ್ಯರಾದ ಗಿರಿ ಅಯ್ಯರ್, ಲೋಕೇಶ್, ರಾಜೇಂದ್ರ, ಉಪನ್ಯಾಸಕರುಗಳು ಹಾಜರಿದ್ದರು.
ನೋ ಕಮೆಂಟ್ಸ್ : ಜಿ.ಪಂ.ನಲ್ಲಿ ಅಧ್ಯಕ್ಷ ಹುದ್ದೆಗೆ ಮೈತ್ರಿ ಸಂಬAಧ ಬಿಜೆಪಿ ಯವರೊಂದಿಗೆ ಮಾತುಕತೆ ನಡೆಸಿದ್ದ ಜೆಡಿಎಸ್ ನವರು ದಿಢೀರ್ ಬೆಳವಣಿಗೆಯಲ್ಲಿ ಕಾಂಗ್ರೆಸ್ ನೊಂದಿಗೆ ಮೈತ್ರಿ ಮಾಡಿಕೊಂಡ ವಿಷಯ ಪ್ರಸ್ತಾಪಿಸಿದಾಗ ಕಳೆದ ಕೆಲ ದಿನಗಳಿಂದ ಅಧ್ಯಕ್ಷ ಹುದ್ದೆಯ ರಾಮಾಯಣ ನೋಡಿದ್ದೀರಿ, ಹೆಚ್ಚಿಗೆ ಮಾತನಾಡಲ್ಲ, ನೋ ಕಮೆಂಟ್ಸ್ ಎಂದಷ್ಟೇ ಉತ್ತರಿಸಿದರು.