ಪಟ್ಟಣದ ಪುಷ್ಪ ವಿದ್ಯಾಸಂಸ್ಥೆ ಆವರಣದಲ್ಲಿ ತಾಲ್ಲೂಕು ನೌಕರರ ಸಂಘದ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರ, ಹಾಸ್ಯ ಸಂಜೆ, ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಾರ್ವಜನಿಕ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು ಪ್ರಾಮಾಣಿಕ ಹಾಗೂ ಪಾರದರ್ಶಕ ಸೇವೆ ನೀಡುವಂತೆ ಕೋರಿದರು. ಇದೇ ಸಂದರ್ಭ ಸಂಘದ ವತಿಯಿಂದ ಕೋರಿದ ನಿವೇಶನ ನಿಮರ್ಾಣದ ಮನವಿಯನ್ನು ಶೀಘ್ರದಲ್ಲೇ ಕಾರ್ಯಗತಗೊಳಿಸುವುದಾಗಿ ಭರವಸೆ ನೀಡಿದರು.
ತಾಲ್ಲೂಕು ಸಕರ್ಾರಿ ನೌಕರರ ಸಂಘದ ಅಧ್ಯಕ್ಷ ಈ.ಬಿ.ವೆಂಕಟೇಶ್ ಮಾತನಾಡಿ ಸಮಾಜದ ಅಭಿವೃದ್ದಿಯಲ್ಲಿ ಸಕರ್ಾರಿ ನೌಕರರ ಪಾತ್ರ ಮಹತ್ವದಾಗಿದೆ, ಸಕರ್ಾರಿ ನೌಕರ ವೃತ್ತಿಗೆ ಸಮಾಜದಲ್ಲಿ ಗೌರವವಿದ್ದು ತಮ್ಮ ಸಾರ್ವಜನಿಕ ಕೆಲಸಗಳ ಮುಖಾಂತರ ಒಳ್ಳೆಯ ಹೆಸರುಗಳಿಸಲು ಮುಂದಾಗಬೇಕು ನೌಕರರೆಲ್ಲ ಸಂಘಟಿತರಾಗಿ ಸಂಘದ ಅಭಿವೃದ್ದಿಗೆ ಸಹಕರಿಸಬೇಕು ಎಂದರು.
ಜಿಲ್ಲಾ ಸಕರ್ಾರಿ ನೌಕರರ ಸಂಘದ ಉಪಾಧ್ಯಕ್ಷ ಗೋವಿಂದರಾಜ್ 2019ನೇ ವರ್ಷದ ಸಂಘದ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿ ಪ್ರಸ್ತುತ್ತ ಸಕರ್ಾರಿ ನೌಕರರು ಎನ್ಪಿಎಸ್ ಪಿಂಚಣಿ ವ್ಯವಸ್ಥೆಯಿಂದ ನೊಂದಿದ್ದು ಸಂಬಂಧಿಸಿದ ಇಲಾಖೆಯವರು ನೌಕರರ ಸಮಸ್ಯೆ ಬಗೆಹರಿಸಿ ಇನ್ನು ಹೆಚ್ಚಿನ ಉತ್ತಮ ಕೆಲಸಕಾರ್ಯಗಳನ್ನು ನಿರ್ವಹಿಸಲು ಪ್ರೋತ್ಸಾಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾಥರ್ಿಗಳನ್ನು ಗೌರವಿಸಲಾಯಿತು. ಖ್ಯಾತ ಮಿಮಿಕ್ರಿ ನಟ ಗೋಪಾಲ್ ಮತ್ತು ತಂಡದವರ ಹಾಸ್ಯ ಸಂಜೆ ಕಾರ್ಯಕ್ರಮ ನಡೆಸಿಕೊಟ್ಟರು.
ಈ ಸಂದರ್ಭ ತಹಸೀಲ್ದಾರ್ ಕುಂಜಿಅಹಮ್ಮದ್, ಬಿಇಒ ಚಿಕ್ಕಸ್ವಾಮಿ, ಪುರಸಭಾ ಮುಖ್ಯಾಧಿಕಾರಿ ಡಿ.ಪುಟ್ಟರಾಜು, ಸಹಾಯಕ ಖಜಾನಾಧಿಕಾರಿ ವಿರೂಪಾಕ್ಷ, ಜಿಲ್ಲಾ ಸಂಘದ ಕಾರ್ಯದಶರ್ಿಗಳಾದ ನಾಗಣ್ಣ, ಆನಂದ್, ಖಜಾಂಚಿ ರಮೇಶ್ಕುಮಾರ್, ಸಂಘಟನಾ ಕಾರ್ಯದಶರ್ಿ ಬಾಲಕೃಷ್ಣ, ತಾಲ್ಲೂಕು ಸಂಘದ ಕಾರ್ಯಕಾರಿ ಮಂಡಳಿಯ ಪರಮಶಿವಯ್ಯ, ನಾರಾಯಣ್ಗೌಡ, ಶೇಷಗಿರಿ, ಶಿವಯೋಗ, ನಾಗರಾಜು, ಪ್ರದೀಪ್, ಹೇಮಂತ್ಕುಮಾರ್, ನಾಗಣ್ಣೇಗೌಡ, ಶಿವಮೂತರ್ಿ, ವಿಜಯ್, ಶ್ರೀಧರ್, ಮಹದೇವ್, ಜಗನ್ನಾಥ್, ಪ್ರಕಾಶ್, ಜಯಣ್ಣ, ರವಿ, ಕುಮಾರ್, ಸಾಕಮ್ಮ, ದಾರುಣವತಿ, ಮೋಕ್ಷ, ರಾಣಿಯಮ್ಮ, ಗಾಯಿತ್ರಿ, ಎಚ್.ಡಿ.ಮಂಜುನಾಥ್, ಶ್ರೀನಾಥ್ ಹಾಗೂ ನಿದರ್ೇಶಕರುಗಳು ಹಾಜರಿದ್ದರು.