ಹಲವು ವರ್ಷಗಳಿಂದ ಮೂಲಭೂತ ಸೌಕರ್ಯಗಳನ್ನೇ ಕಾಣದ ಕಡಿಮೆ ಜನಸಂಖ್ಯೆಯ ಸಣ್ಣಪುಟ್ಟ ಹಳ್ಳಿಗಳನ್ನು ಅಭಿವೃದ್ದಿಪಡಿಸುವುದಕ್ಕೆ ಆದ್ಯತೆ ನೀಡುವುದಾಗಿ ಶಾಸಕ ಕೆ.ಮಹದೇವ್ ಭರವಸೆ ನೀಡಿದರು.

ತಾಲ್ಲೂಕಿನ ಹಬಟೂರು, ಚೌಡೇನಹಳ್ಳಿ, ನಾರಳಾಪುರ, ಐಲಾಪುರ, ಕೊಣಸೂರು, ಬಸವನಗರ, ಸೀಗೆಕೊರೆಕಾವಲು, ಹಿಟ್ನೆಹೆಬ್ಬಾಗಿಲು ಗ್ರಾಮಗಳಲ್ಲಿ ಸೋಮವಾರದಂದು ಕಾಂಕ್ರೀಟ್ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿ ಮತ್ತು ಬೆಮ್ಮತ್ತಿ ಗ್ರಾಮದಲ್ಲಿ ಶಾಲಾ ಕಟ್ಟಡ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ತಾಲ್ಲೂಕಿನಲ್ಲಿರುವ ಹೆಚ್ಚು ಜನಸಂಖ್ಯೆಯ ಗ್ರಾಮಗಳು ಹಾಗೂ ಕಳೆದ ಚುನಾವಣೆಯಲ್ಲಿ ಅತಿ ಹೆಚ್ಚು ಮತ ನೀಡಿದ ಗ್ರಾಮಗಳ ಅಭಿವೃದ್ದಿಗಷ್ಟೇ ಗಮನ ನೀಡದೆ ಹಲವಾರು ವರ್ಷಗಳಿಂದ ಮೂಲಭೂತ ಸೌಕರ್ಯಗಳು ಮರೀಚಿಕೆಯಾಗಿರುವ ಸಣ್ಣಪುಟ್ಟ ಗ್ರಾಮಗಳನ್ನೂ ಸಹ ಗುರುತಿಸಿ ಉತ್ತಮ ರಸ್ತೆ, ಕುಡಿಯುವ ನೀರು, ಸೇರಿದಂತೆ ಹಲವು ಅಭಿವೃದ್ದಿ ಕಾರ್ಯಗಳನ್ನು ಕಾರ್ಯಗತಗೊಳಿಸಲು ಈಗಾಗಲೇ ಸಂಬAಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಿಯಾಯೋಜನೆ ತಯಾರಿಸಿದ್ದು ಮುಂದಿನ ದಿನಗಳಲ್ಲಿ ಅನುದಾನ ಜಾರಿಗೆ ತಂದು ಅಭಿವೃದ್ದಿಪಡಿಸುವ ಭರವಸೆ ನೀಡಿದರು.
ಶಾಸಕನಾಗಿ ಆಯ್ಕೆಯಾದಾಗಿನಿಂದ ಸಾರ್ವಜನಿಕರ ಸಮಸ್ಯೆಗಳಿಗೆ ಹಗಲಿರುಳೆನ್ನದೆ ಪರಿಹಾರ ಒದಗಿಸುತ್ತಿರುವುದನ್ನು ಸಹಿಸದ ವಿರೋಧಿಗಳು ನಿರಂತರವಾಗಿ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿದ್ದರೂ ಸಹ ದ್ವೇಶದ ರಾಜಕಾರಣಕ್ಕೆ ಒತ್ತು ನೀಡದೆ ಅಭಿವೃದ್ದಿಯೇ ನನ್ನ ಮೊದಲ ಗುರಿ ಎಂದರು.
ಕಾರ್ಯಕ್ರಮದಲ್ಲಿ ಜಿ.ಪಂ.ಸದಸ್ಯ ಜಯಕುಮಾರ್, ತಾ.ಪಂ.ಸದಸ್ಯ ಎಸ್.ರಾಮು, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಬೆಕ್ಕರೆ ನಂಜುAಡಸ್ವಾಮಿ, ವಿವಿಧ ಗ್ರಾ.ಪಂ.ಅಧ್ಯಕ್ಷರಾದ ರವಿ, ಮಮತಾ, ರಾಜಶೇಖರಯ್ಯ, ಉಪಾಧ್ಯಕ್ಷೆ ಜಯಮ್ಮ, ಸದಸ್ಯರಾದ ಮಾಲಿನಿ, ಆಶಾ, ಕುಮಾರಿ, ಪ್ರೌಢಶಾಲಾ ಮುಖ್ಯಶಿಕ್ಷಕ ಆರಾಧ್ಯಕಿಶೋರ್, ಪಿಡಿಒ ಗಳಾದ ಶಿವನಗೌಡ್ರು, ದಮಯಂತಿ, ಪಿಎಸಿಸಿಎಸ್ ನಿರ್ಧೇಶಕ ಮಹದೇವ್, ಮುಖಂಡರಾದ ಅಶೋಕ್, ಜಲೇಂದ್ರ, ಯ.ಜಯಶಂಕರ್, ರುಕ್ಮಂಗದಾಚಾರ್, ಸಂಜೀವಶೆಟ್ಟಿ, ಭುಜಂಗಾರಾಧ್ಯ, ಗುರುಆರಾಧ್ಯ, ಅಣ್ಣೇಗೌಡ, ಪುಟ್ಟಸ್ವಾಮಿ, ವಿಶ್ವೇಶ್ವರಾಚಾರ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top