ಪಟ್ಟಣದ ಟಿಎಪಿಸಿಎಂಎಸ್ ಆವರಣದಲ್ಲಿ ನರ್ಮಿಸಿರುವ ನೂತನ ವಾಣಿಜ್ಯ ಮಳಿಗೆ ಹಾಗೂ ತಾಲ್ಲೂಕು ಪಡಿತರ ವಿತರಕರ ಸಂಘವನ್ನು ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿ ಬಡವರು, ರ್ಥಿಕವಾಗಿ ಹಿಂದುಳಿದವರು ಸೇರಿದಂತೆ ಹಲವರು ನ್ಯಾಯಬೆಲೆ ಅಂಗಡಿಗಳಿಂದ ವಿತರಿಸುವ ಪಡಿತರವನ್ನು ಪಡೆದು ಜೀವನವನ್ನು ಸಾಗಿಸುತ್ತಿದ್ದಾರೆ ಇವರಿಗೆ ಯಾವುದೇ ರೀತಿಯಿಂದಲು ಮೋಸ ಮಾಡುವ ಪ್ರಯತ್ನ ಮಾಡಬೇಡಿ ಎಂದು ತಿಳಿಸಿದರು. ನಾನು ಸಹ 1983 ರಿಂದ 2018ರವರೆಗೆ ನ್ಯಾಯ ಬೆಲೆ ಅಂಗಡಿಯ ಮಾಲೀಕನಾಗಿ ಸೇವೆ ಸಲ್ಲಿಸಿದ್ದು ಆ ದಿನಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು. ಪಟ್ಟಣದ ಟಿಎಪಿಸಿಎಂಎಸ್ ವಹಿವಾಟು ಜಿಲ್ಲೆಯಲ್ಲಿಯೇ ಉತ್ತಮವಾಗಿದ್ದು ಸಂಸ್ಥೆಯ ಅಭಿವೃದ್ದಿಗೆ ನರ್ದೇಶಕರ ಸಹಕಾರ ಅಗತ್ಯ ಎಂದರು.
ಟಿಎಪಿಸಿಎಂಎಸ್ನ ನರ್ದೇಶಕ ಹಾಗೂ ತಾ.ಪಂ.ಸದಸ್ಯ ಎಸ್.ರಾಮು ಮಾತನಾಡಿ ಉತ್ತಮ ವಹಿವಾಟನ್ನು ಹೊಂದಿರುವ ಸಂಸ್ಥೆಯ ಗೋದಾಮಿನ ಮೇಲ್ಛಾವಣಿಯು ಶಿಥಿಲಗೊಂಡಿದ್ದು ಆಹಾರ ದಾಸ್ತಾನು ಮಾಡಲು ಅನಾನುಕೂಲವಾಗುತ್ತಿದೆ ಎಂದರು. ಶಾಸಕರ ಅನುದಾನದಿಂದ ಮೇಲ್ಛಾವಣಿಯನ್ನು ದುರಸ್ಥಿ ಮಾಡಿಸಿಕೊಡುವಂತೆ ಮನವಿ ಸಲ್ಲಿಸಿದರು. ಸಂಸ್ಥೆಗೆ ಸಕಾಲದಲ್ಲಿ ಸಬ್ಸಿಡಿ ಹಣ ಬರುತ್ತಿದ್ದು ಹಿಂದಿನ ಬಾಕಿ ಹಣ ರೂ. 2 ಕೋಟಿ ಬರಬೇಕಿದೆ ಎಂದು ತಿಳಿಸಿದರು.
ಈ ಸಂರ್ಭದಲ್ಲಿ ಟಿಎಪಿಸಿಎಂಎಸ್ ಅಧ್ಯಕ್ಷ ಪಿ.ಎನ್.ಚಂದ್ರಶೇಖರ್, ಉಪಾಧ್ಯಕ್ಷ ಸ್ವಾಮಿ, ಕರ್ಯದಶರ್ಿ ಕಲಾವತಿ, ನರ್ದೇಶಕರಾದ ಕೃಷ್ಣೇಗೌಡ, ಸುಂದರಮ್ಮ, ಪುಟ್ಟಮ್ಮ, ರಘುನಾಥ್, ಎಂಡಿಸಿಸಿ ಬ್ಯಾಂಕ್ ನರ್ದೇಶಕ ಸಿ.ಎನ್.ರವಿ, ಮುಖಂಡರಾದ ಶಿವಣ್ಣ, ಯತೀರಾಜೇಗೌಡ, ಲಕ್ಷ್ಮೇಗೌಡ, ಆಹಾರ ನಿರೀಕ್ಷಕ ಸಣ್ಣಸ್ವಾಮಿ ಸೇರಿದಂತೆ ಹಲವರು ಹಾಜರಿದ್ದರು.