ಗ್ರಾಮಾಂತರ ಪ್ರದೇಶದ ಪ್ರತಿಭಾನ್ವಿತ ವಿದ್ಯರ‍್ಥಿಗಳು ರ‍್ಥಿಕ ಕಾರಣದಿಂದ ತಮ್ಮ ವಿದ್ಯಾಭ್ಯಾಸ ಮೊಟಕುಗೊಳಿಸಬಾರದು ಎಂಬ ಉದ್ದೇಶದಿಂದ ಹಳ್ಳಿಗಳಲ್ಲಿನ ರ‍್ಕಾರಿ ಶಾಲೆಗಳಲ್ಲಿಯೂ ನಗರ ಪ್ರದೇಶಗಳ ಖಾಸಗಿ ಶಾಲೆಗಳಲ್ಲಿ ಸಿಗುವ ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ಮೂಲಭೂತ ಸೌರ‍್ಯ ದೊರಕಿಸಿಕೊಡುವ ನಿಟ್ಟಿನಲ್ಲಿ ಪಬ್ಲಿಕ್ ಶಾಲೆಗಳನ್ನು ಪ್ರಾರಂಭಿಸಿದೆ ಎಂದು ಶಾಸಕ ಕೆ.ಮಹದೇವ್ ಹೇಳಿದರು.

ತಾಲ್ಲೂಕಿನ ಹಾರನಹಳ್ಳಿ ಗ್ರಾಮದಲ್ಲಿ ನೂತನವಾಗಿ ಆರಂಭವಾಗಿರುವ ರ‍್ನಾಟಕ ಪಬ್ಲಿಕ್ ಶಾಲೆ ಉದ್ಘಾಟಿಸಿ ಅವರು ಮಾತನಾಡಿದರು, ರ‍್ಕಾರಿ ಶಾಲೆಗಳಲ್ಲಿ ಉತ್ತಮ ವಿದ್ಯರ‍್ಹತೆ ಹೊಂದಿರುವ ಶಿಕ್ಷಕರಿದ್ದರೂ ಸಹ ಪೋಷಕರು ಪೈಪೋಟಿಗೆ ಬಿದ್ದಂತೆ ತಮ್ಮ ಮಕ್ಕಳನ್ನು ಪ್ರತಿಷ್ಠೆಗಾಗಿ ನಗರ ಪ್ರದೇಶಗಳ ಖಾಸಗಿ ಶಾಲೆಗಳಿಗೆ ದುಪ್ಪಟ್ಟು ಹಣ ರ‍್ಚು ಮಾಡಿ ಸೇರಿಸುತ್ತಿರುವುದು ವಿಷಾದನೀಯ, ಖಾಸಗಿ ಶಾಲೆಗಳಂತೆಯೇ ರ‍್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ರ‍್ಕಾರ ಪಬ್ಲಿಕ್ ಶಾಲೆಗಳನ್ನು ಆರಂಭಿಸಿ ಒಂದೇ ಆವರಣದಲ್ಲಿ ಪ್ರಾಥಮಿಕ ಹಂತದಿಂದ ಪದವಿ ಹಂತದವರೆಗೂ ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ಯೋಜನೆ ಜಾರಿಗೆ ತಂದಿದೆ, ಖಾಸಗಿ ಶಾಲೆಗಳಂತೆಯೇ ಕ್ರೀಡಾ ಚಟುವಟಿಕೆಗಳು, ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಗುಣಮಟ್ಟದ ಶಿಕ್ಷಣ ಮತ್ತು ಸಾರಿಗೆ ಸೌಲಭ್ಯ ಮುಂದಿನ ದಿನಗಳಲ್ಲಿ ಕರ‍್ಯ ಪ್ರಾರಂಭಿಸಲಿದೆ ಎಂದರು, ಹಾರನಹಳ್ಳಿ ಹೋಬಳಿ ಅಭಿವೃದ್ಧಿಯಲ್ಲಿ ಹಿಂದುಳಿದಿರುವುದು ವಿಷಾದಕರ ಸಂಗತಿಯಾಗಿದ್ದು ಈ ಭಾಗದ ಜನರ ಕಷ್ಟಗಳನ್ನು ನೀಗಿಸುವ ಉದ್ದೇಶದಿಂದ ತಾಲ್ಲೂಕಿಗೆ ಒಂದರಂತೆ ನಿಗದಿಯಾಗಿದ್ದ ಪಬ್ಲಿಕ್ ಶಾಲೆಗಳನ್ನು ನಮ್ಮ ತಾಲ್ಲೂಕಿಗೆ ಎರಡು ಪಬ್ಲಿಕ್ ಶಾಲೆ ಮಂಜೂರು ಮಾಡಿಸಿಕೊಳ್ಳಲಾಗಿದೆ ಇದಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಈ ಭಾಗದ ರೈತರ ಹಾಗೂ ತಾಲ್ಲೂಕಿನ ಜನತೆಯ ಪರವಾಗಿ ಅಭಿನಂದನೆ ತಿಳಿಸಿದರು. ಮುಂದಿನ ದಿನಗಳಲ್ಲಿ ಹಾರನಹಳ್ಳಿ ಹೋಬಳಿ ಕೇಂದ್ರ ಅಭಿವೃದ್ಧಿಯಾಗಿ ಇತರೆ ಕೇಂದ್ರಗಳಿಗೆ ಮಾದರಿಯಾಗಲಿ ಎಂದು ಆಶಿಸಿದರು.
ಬಿಇಒ ಚಿಕ್ಕಸ್ವಾಮಿ ಮಾತನಾಡಿ ಇತ್ತೀಚಿನ ದಿನಗಳಲ್ಲಿ ರ‍್ಕಾರಿ ಶಾಲೆಗಳ ಫಲಿತಾಂಶ ಖಾಸಗಿ ಶಾಲೆಗಳಿಗಿಂತ ಗಣನೀಯ ಏರಿಕೆ ಕಂಡಿರುವುದು ಶಿಕ್ಷಕರುಗಳ ಜವಾಬ್ದಾರಿಗೆ ಹಿಡಿದ ಕೈಗನ್ನಡಿಯಾಗಿದೆ, ಖಾಸಗಿ ಶಾಲೆಗಳಲ್ಲಿ ಅತಿ ಹೆಚ್ಚು ಹಣ ಪಾವತಿಸಿ ದೊರಕುವ ಶಿಕ್ಷಣ ಹಾಗೂ ಸೌರ‍್ಯಗಳು ರ‍್ಕಾರಿ ಶಾಲೆಗಳಲ್ಲಿಯೇ ಉಚಿತವಾಗಿ ಸಿಗಲು ರ‍್ಕಾರ ಪ್ರಾರಂಭಿಸಿರುವ ಯೋಜನೆ ಶ್ಲಾಘನೀಯ ಎಂದರು.
ಕರ‍್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹರೀಶ್, ತಾ.ಪಂ ಉಪಾಧ್ಯಕ್ಷೆ ಜಯಮ್ಮ ಜವರಪ್ಪ, ಜಿ.ಪಂ ಸದಸ್ಯೆ ರುದ್ರಮ್ಮ ನಾಗಯ್ಯ, ತಾ.ಪಂ ಸದಸ್ಯರಾದ ಸುಮಿತ್ರಾ ನಾಗರಾಜ್, ಮೋಹನ್ ರಾಜ್, ಸುಮಿತ್ರಾ ಶಂಕರೇಗೌಡ, ಪುಷ್ಪಲತಾ ಪುಟ್ಟಸ್ವಾಮಿ, ಜಯಂತಿ ಸೋಮಶೇಖರ್, ಮಲ್ಲಿಕರ‍್ಜುನ್, ಮಾಜಿ ಸದಸ್ಯ ಅತ್ತರ್ ಮತೀನ್, ಹಾರನಹಳ್ಳಿ ಗ್ರಾ.ಪಂ ಅಧ್ಯಕ್ಷ ಸಣ್ಣಯ್ಯ, ಉಪಾಧ್ಯಕ್ಷೆ ಯಶೋದಮ್ಮ, ಕ್ಷೇತ್ರ ಸಂಪನ್ಮೂಲ ಸಂಯೋಜಕ ಹೇಮಂತರಾಜ್ ಸೇರಿದಂತೆ ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಸ್ಥಳೀಯ ಗ್ರಾ.ಪಂ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಶಾಲಾ ಮುಖ್ಯ ಶಿಕ್ಷಕರು ಮತ್ತು ಸಿಬ್ಬಂದಿ ರ‍್ಗ, ವಿವಿಧ ರ‍್ಕಾರಿ ಇಲಾಖೆಗಳ ಅಧಿಕಾರಿಗಳು, ಪೋಷಕರು ಮತ್ತು ವಿದ್ಯರ‍್ಥಿಗಳು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top