ಅವರು ತಾಲೂಕಿನ ಮೆಲ್ಲಹಳ್ಳಿ ಬೋರೆ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಜನತೆ ಮುಖ್ಯವಾಗಿ ಕುಡಿಯುವ ನೀರು, ರಸ್ತೆ, ಚರಂಡಿ ಹಾಗೂ ಬೀದಿ ದೀಪ ಸೇರಿದಂತೆ ಇನ್ನಿತರ ಮೂಲಭೂತ ಸೌಲಭ್ಯಗಳನ್ನು ಮಾತ್ರ ಜನತೆ ಜನಪ್ರತಿನಿಧಿಗಳಿಂದ ಆಪೇಕ್ಷೆಸಿದ್ದು ಇವುಗಳನ್ನು ಮೊದಲ ಆಧ್ಯತೆಯಾಗಿ ನೀಡುವುದು ಎಲ್ಲರ ಕರ್ತವ್ಯವಾಗಿರಬೇಕು ಎಂದರು. ಮೆಲ್ಲಹಳ್ಳಿ ಗ್ರಾಮದ ಅರ್ಧ ಭಾಗವು ಪುರಸಭೆ ವ್ಯಾಪ್ತಿಗೆ ಇನ್ನುಳಿದ ಭಾಗವು ಗ್ರಾ.ಪಂ.ವ್ಯಾಪ್ತಿಗೆ ಸೇರಿದ್ದು ಅಭಿವೃದ್ದಿ ಕುಂಟಿತವಾಗುತ್ತಿದೆ ಎಂದು ಗ್ರಾಮಸ್ಥರು ದೂರು ನೀಡಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಶಾಸಕ ಮೆಲ್ಲಹಳ್ಳಿ ಗ್ರಾಮವನ್ನು ಸಂಪೂರ್ಣವಾಗಿ ಪುರಸಭೆ ವ್ಯಾಪ್ತಿಗೆ ಸೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ನನ್ನ ಕೊನೆ ಉಸಿರಿರುವ ವರೆಗೂ ಜೆಡಿಎಸ್ ಪಕ್ಷದಲ್ಲೇ ಇರುತ್ತೇನೆ:
ಇತ್ತೀಚಿನ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿ ಪಕ್ಷವು ನಿಮಗೆ ಆಮಿಷ ಒಡ್ಡಿದೆ ಎಂದು ವದಂತಿಗಳು ಹಬ್ಬಿರುವ ಬಗ್ಗೆ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಅವರು ನಾನು ಕಳೆದ ಒಂದು ವಾರ ವೈಯಕ್ತಿಕವಾಗಿ ವಿದೇಶ ಪ್ರಯಾಣ ಹೋಗಿದ್ದು ಈ ಸಂದರ್ಭದಲ್ಲಿ ಕೆಲವರು ನಾನು ಬಿಜೆಪಿಯ ಆಮಿಷಕ್ಕೆ ಒಳಗಾಗಿರುವುದಾಗಿ ವದಂತಿ ಹಬ್ಬಿಸಿದ್ದಾರೆ ಆದರೆ ಇವೆಲ್ಲವೂ ಸುಳ್ಳು ಎಂದು ತಿಳಿಸಿ ನನಗೆ ಬಿಜೆಪಿ ಪಕ್ಷದಿಂದ ರೂ.50ಕೋಟಿ ನೀಡುವುದಾಗಿ ಆಮಿಷ ನೀಡಿದ್ದು ಸತ್ಯ ಆದರೆ ನಾನು ಎಂದಿಗೂ ಜೆಡಿಎಸ್ ಪಕ್ಷಕ್ಕೆ ದ್ರೋಹ ಬಗೆಯುವುದಿಲ್ಲ ಎಂದು ಪ್ರತಿಕ್ರಿಯಿಸಿದರು. ನನ್ನ ಕೊನೆ ಉಸಿರು ಇರುವ ವರೆಗೂ ನಾನು ಜೆಡಿಎಸ್ ಪಕ್ಷ ಬಿಟ್ಟು ಹೋಗುವುದಿಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಈರಯ್ಯ, ಸದಸ್ಯರಾದ ಎಸ್.ರಾಮು, ಮಲ್ಲಿಕಾರ್ಜುನ್ ಗ್ರಾ.ಪಂ.ಅಧ್ಯಕ್ಷೆ ಸುಧಾ, ಉಪಾಧ್ಯಕ್ಷೆ ಅನಿತಾ, ಎಂಡಿಸಿಸಿ ಬ್ಯಾಂಕಿನ ನಿರ್ದೇಶಕ ಸಿ.ಎನ್.ರವಿ, ಪುರಸಭೆ ಮುಖ್ಯಾಧಿಕಾರಿ ಡಿ.ಪುಟ್ಟರಾಜು, ಮುಖಂಡರಾದ ರಘುನಾಥ್, ನವಿಲೂರು ಚನ್ನಪ್ಪ, ಭಾರತಿ, ಎಂ.ಬಿ.ಸAಪತ್ ಸೇರಿದಂತೆ ಹಲವರು ಹಾಜರಿದ್ದರು.