ಪೋಷಕರು ತಮ್ಮ ಮಕ್ಕಳ ವಿಶೇಷ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ಶಾಸಕ ಕೆ.ಮಹದೇವ್ ಹೇಳಿದರು.
ಪಟ್ಟಣದ ಸಂಕಲ್ಪ ನೃತ್ಯ ಶಾಲೆ ವತಿಯಿಂದ ಮಸಣಿಕಮ್ಮ ಕಂಬೈನ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಸಂಕಲ್ಪ ಎಂಬ ಕಿರುಚಿತ್ರ ನಿರ್ಮಾಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ಸಾಧನೆ ತೋರುತ್ತಿರುವುದು ಶ್ಲಾಘನೀಯ, ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ವೇದಿಕೆ ಕಲ್ಪಿಸಿ ಪ್ರತಿಭೆ ಅನಾವರಣ ಗೊಳಿಸಲು ಸಹಕರಿಸಬೇಕು ಎಂದರು.
ಮಾಜಿ ಶಾಸಕ ಎಚ್.ಸಿ.ಬಸವರಾಜು ಮಾತನಾಡಿ ಪೋಷಕರು ತಮ್ಮ ಮಕ್ಕಳಲ್ಲಿನ ಅಭಿರುಚಿಯನ್ನು ಗುರುತಿಸಿ ಉತ್ತಮ ವೇದಿಕೆ ಕಲ್ಪಿಸಿದಾಗ ಮಾತ್ರ ಯಶಸ್ಸು ದೊರೆಯುತ್ತದೆ. ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ನಗರ ಪ್ರದೇಶಗಳಿಗಿಂತ ಹೆಚ್ಚು ಸಾಧನೆ ತೋರುತ್ತಿರುವುದು ಸಂತಸದ ವಿಷಯ, ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳನ್ನು ಒಳ್ಳೆಯ ಉದ್ದೇಶಗಳಿಗೆ ಮಾತ್ರ ಬಳಸಿಕೊಳ್ಳುವಂತೆ ಕೋರಿದರು.
ಸಂಕಲ್ಪ ನೃತ್ಯ ಶಾಲೆಯ ವ್ಯವಸ್ಥಾಪಕಿ ಭವ್ಯ ಮಂಜುನಾಥ್ ಮಾತನಾಡಿ ಮಕ್ಕಳಲ್ಲಿರುವ ವಿಶೇಷ ಪ್ರತಿಭೆಗಳನ್ನು ಬಿಡುವಿನ ವೇಳೆಯಲ್ಲಿ ಪರಿಣಿತ ತಜ್ಞರಿಂದ ಪ್ರೋತ್ಸಾಹಿಸುತ್ತಿದ್ದು ಪ್ರಥಮ ಬಾರಿಗೆ ವಿದ್ಯಾರ್ಥಿ ಜೀವನದ ಕಿರುಚಿತ್ರವನ್ನು ಸಂಸ್ಥೆವತಿಯಿAದ ನಿರ್ಮಿಸಿ ಪ್ರೋತ್ಸಾಹಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಇದೇ ಸಂದರ್ಭ ಇಂಗ್ಲೀಷ್ ಶಿಕ್ಷಕ ಮಣಿಕುಮಾರ್ ಅವರ ಪುಸ್ತಕ ಬಿಡುಗಡೆ, ಪಟ್ಟಣದ ಚಿತ್ರಕಲಾವಿದ ವಿದ್ಯಾರ್ಥಿ ಪವನ್ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಮತ್ತು ಸ್ಪೋಕನ್ ಇಂಗ್ಲಿಷ್ ಪುಸ್ತಕವನ್ನು ಗಣ್ಯರು ಬಿಡುಗಡೆ ಮಾಡಿದರು.
ಸಂಸ್ಥೆವತಿಯಿAದ ಪವನ್ ರವರು ರಚಿಸಿದ ಶಾಸಕ ಕೆ.ಮಹದೇವ್ ರವರ ಪೆನ್ಸಿಲ್ ಸ್ಕೆಚ್ ಭಾವಚಿತ್ರವನ್ನು ನೀಡಿ ಶಾಸಕರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯರಾದ ನಿರಂಜನ್, ಮಂಜುನಾಥ್, ಪುಷ್ಪಲತಾಸುರೇಶ್, ಶ್ವೇತಕುಮಾರ್, ಪ್ರಕಾಶ್‌ಸಿಂಗ್, ಸಂಸ್ಥೆಯ ವ್ಯವಸ್ಥಾಪಕರಾದ ಮಂಜುಕೋಗಿಲವಾಡಿ, ಮಣಿಕುಮಾರ್, ಹಾಜರಿದ್ದರು.