ಪಟ್ಟಣದ ತಾತನಹಳ್ಳಿ ಗೇಟ್ ಬಳಿ ಪಿರಿಯಾಪಟ್ಟಣ ತಾಲ್ಲೂಕು ವ್ಯಾಪ್ತಿಯ ಪರಿರ್ತಕಗಳ ದುರಸ್ತಿ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು, ರೈತರು ಮಳೆ ಕಡಿಮೆಯಾದ ಸಂರ್ಭಗಳಲ್ಲಿ ತಮ್ಮ ಜಮೀನಿನಲ್ಲಿ ಬೆಳೆಗಳನ್ನು ಬೆಳೆಯಲು ಪಂಪ್ ಸೆಟ್ ಗಳ ಮುಖಾಂತರ ನೀರು ಹಾಯಿಸಿಕೊಳ್ಳಲು ವಿದ್ಯುತ್ ಅತಿ ಮುಖ್ಯವಾಗಿದ್ದು ನೀರಾವರಿ ಸೌಲಭ್ಯದ ವಿದ್ಯುತ್ ಸಂರ್ಕಕ್ಕೆ ಬೇಕಾಗುವ ಟ್ರಾನ್ಸ್ ಫರ್ಮರ್ ದುರಸ್ತಿಗೊಂಡ ಸಮಯದಲ್ಲಿ ಅಧಿಕಾರಿ ಮತ್ತು ಲೈನ್ ಮೆನ್ ಗಳು ಅವರ ಸಮಸ್ಯೆಯನ್ನು ನರ್ಲಕ್ಷಿಸದೇ ಶೀಘ್ರದಲ್ಲೇ ಬಗೆಹರಿಸುವಂತೆ ತಾಕೀತು ಮಾಡಿದರು, ತಮ್ಮ ವಿದ್ಯುತ್ ಸಮಸ್ಯೆಯ ಬಗ್ಗೆ ದೂರು ಹೇಳಿಕೊಳ್ಳುವ ರೈತರೊಂದಿಗೆ ಅಧಿಕಾರಿಗಳು ತಾಳ್ಮೆಯಿಂದ ರ್ತಿಸಿ ಅವರ ಕಷ್ಟ ಸುಖಗಳಿಗೆ ಸ್ಪಂದಿಸುವಂತೆ ತಿಳಿಸಿದರು. ಗ್ರಾಮಾಂತರ ಪ್ರದೇಶದ ಜನರು ವಿದ್ಯುತ್ ಸಮಸ್ಯೆ ಸಂಬಂಧ ಪಟ್ಟಣಕ್ಕೆ ಆಗಮಿಸುವುದನ್ನು ತಪ್ಪಿಸಲು ತಾಲ್ಲೂಕಿನ ಸೀಗೂರು, ಪಂಚವಳ್ಳಿ, ಹುಣಸವಾಡಿ, ಕಂಪಲಾಪುರ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ಉಪ ಕೇಂದ್ರಗಳನ್ನು ಮಂಜೂರು ಮಾಡಿಸಲಾಗಿದೆ ಎಂದರು.
ಮೈಮುಲ್ ನರ್ದೇಶಕ ಪಿ.ಎಂ ಪ್ರಸನ್ನ ಮಾತನಾಡಿ ತಾಲ್ಲೂಕಿನ ವಿವಿಧೆಡೆಯಿಂದ ಪ್ರತಿನಿತ್ಯ ವಿದ್ಯುತ್ ಸಮಸ್ಯೆ ಸಂಬಂಧ ಹಲವಾರು ದೂರುಗಳು ಕೇಳಿ ಬರುತ್ತಿದ್ದು ಅವುಗಳ ನಿವಾರಣೆಗಾಗಿ ನಮ್ಮ ತಂದೆ ಶಾಸಕ ಕೆ.ಮಹದೇವ್ ಅವರು ಸಮಸ್ಯೆಯನ್ನು ರ್ಕಾರದ ಗಮನಕ್ಕೆ ತಂದು ತಾಲ್ಲೂಕಿನಲ್ಲಿ ಪರಿರ್ತಕ ದುರಸ್ತಿ ಕೇಂದ್ರ ಪ್ರಾರಂಭಿಸಿರುವುದು ಉತ್ತಮ ಬೆಳವಣಿಗೆಯಾಗಿದೆ, ಇನ್ನು ಮುಂದಾದರೂ ಅಧಿಕಾರಿಗಳು ರೈತರ ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ವಿಳಂಬ ಮಾಡದೆ ಶೀಘ್ರ ಸ್ಪಂದಿಸುವಂತೆ ತಿಳಿಸಿದರು.
ವಿದ್ಯುತ್ ಇಲಾಖೆಯ ಹುಣಸೂರು ಮಡಿಕೇರಿ ವೃತ್ತದ ಅಧೀಕ್ಷಕ ಎಂಜಿನಿಯರ್ ಮಹದೇವಸ್ವಾಮಿ ಪ್ರಸನ್ನ ಮಾತನಾಡಿ ಈ ಹಿಂದೆ ತಾಲ್ಲೂಕಿನ ವಿವಿಧೆಡೆಯ ಪರಿರ್ತಕಗಳು ಕೆಟ್ಟು ನಿಂತ ಸಂರ್ಭ ದುರಸ್ತಿಗಾಗಿ ಕೆ.ಆರ್ ನಗರ ಉಪವಿಭಾಗಕ್ಕೆ ರೈತರು ಬರಬೇಕಾಗಿತ್ತು, ಈ ಸಮಸ್ಯೆಯನ್ನು ಮನಗಂಡು ಶಾಸಕರು ತಾಲ್ಲೂಕಿಗೆ ಪರಿರ್ತಕ ದುರಸ್ತಿ ಕೇಂದ್ರ ಮಂಜೂರು ಮಾಡಿಸಿರುವುದರಿಂದ ಇಲ್ಲಿನ ರೈತರ ವಿದ್ಯುತ್ ಸಮಸ್ಯೆಗಳಿಗೆ ಬಹುಬೇಗ ಸ್ಪಂದಿಸ ಬಹುದಾಗಿದ್ದು ರೈತರಿಗೆ ಆಗುತ್ತಿದ್ದ ಹೆಚ್ಚಿನ ಹೊರೆಯನ್ನು ಕಡಿಮೆ ಮಾಡಿದಂತಾಗಿದೆ ಎಂದರು.
ಈ ಸಂರ್ಭ ಕೆ.ಆರ್ ನಗರ ಕರ್ಯನರ್ವಾಹಕ ಎಂಜಿನಿಯರ್ ಚಂದ್ರಶೇಖರ್, ಪಿರಿಯಾಪಟ್ಟಣ ಎಇಇ ಕಲೀಂ ಅಹಮದ್, ಎಂಡಿಸಿಸಿ ಬ್ಯಾಂಕ್ ನರ್ದೇಶಕ ಸಿ.ಎನ್ ರವಿ, ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಈರಯ್ಯ, ಮಾಜಿ ಉಪಾಧ್ಯಕ್ಷ ರಘುನಾಥ್, ರೈತ ಮುಖಂಡ ವಿಜಯರಾಜೇ ಅರಸ್ ಮಾತನಾಡಿದರು.
ಕರ್ಯಕ್ರಮದಲ್ಲಿ ಪುರಸಭಾ ಸದಸ್ಯರಾದ ಕೆ. ಮಹೇಶ್, ನಿರಂಜನ್, ಎಚ್. ಕೆ ಮಂಜುನಾಥ್, ಪ್ರಕಾಶ್ ಸಿಂಗ್, ಪ್ರಕಾಶ್, ಬೆಟ್ಟದಪುರ ಎಇಇ ಕುಮಾರ್, ಮುಖಂಡರಾದ ಮುಷೀರ್ ಖಾನ್, ಪೆಪ್ಸಿ ಕುಮಾರ್, ಸಂತೋಷ್, ಗುತ್ತಿಗೆದಾರ ಸಂಘದ ಮಹೇಶ್, ಕಂಪಲಾಪುರ ಗ್ರಾ.ಪಂ ಅಧ್ಯಕ್ಷ ಆಸೀಫ್, ಸೇರಿದಂತೆ ಚಾಮುಂಡೇಶ್ವರಿ ವಿದ್ಯುತ್ ಶಕ್ತಿ ಸರಬರಾಜು ನಿಗಮದ ಅಧಿಕಾರಿಗಳು ಸಿಬ್ಬಂದಿಗಳು ಹಾಜರಿದ್ದರು.