ಪಟ್ಟಣದ ತಾ.ಪಂ.ಸಭಾAಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಬುಧವಾರ ನಡೆದ ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬಾಲ್ಯದಿಂದಲೇ ಹೋರಾಟದ ಗುಣಗಳನ್ನು ಮೈಗೂಡಿಸಿಕೊಂಡು ಪರಕೀಯರಿಂದ ದೇಶ ರಕ್ಷಣೆಗೆ ಮುಂದಾಗಿ ಹಿಂದೂ ಸಾಮ್ರಾಜ್ಯ ವಿಸ್ತರಣೆ ಮತ್ತು ರಕ್ಷಣೆಗೆ ನಿಂತ ಧೀಮಂತ ಆಡಳಿತಗಾರರಾಗಿದ್ದರು ಎಂದರು.
ಸ್ಪೂರ್ತಿ ಸ್ವಾವಲಂಬಿ ಟ್ರಸ್ಟ್ ಅಧ್ಯಕ್ಷೆ ಆಶಾ ಮಹದೇವರಾವ್ ಮುಖ್ಯ ಭಾಷಣಕಾರರಾಗಿ ಮಾತನಾಡಿ ಮರಾಠಾ ಸಂಸ್ಥಾನವನ್ನು ಮಹಾರಾಷ್ಟçದಿಂದ ಮೈಸೂರಿನವರೆಗೆ ವಿಸ್ತರಣೆ ಮಾಡಿ ಉತ್ತಮ ಆಡಳಿತ ನೀಡಿದ್ದ ಶಿವಾಜಿಯವರನ್ನು ಕಂಡರೆ ಎದುರಾಳಿಗಳು ಹೆದರಿ ಓಡುವ ಸ್ಥಿತಿ ನಿರ್ಮಾಣವಾಗಿತ್ತು. ಹಿಂದೂ ಸಾಮ್ರಾಜ್ಯದ ಉಳಿವಿಗೆ ಶ್ರಮಿಸಿದ ಮಹಾನ್ ನಾಯಕ ಶಿವಾಜಿ ಆಗಿದ್ದರು ಎಂದರು.
ಗೋAಧಳಿ ಸಮಾಜದ ತಾಲ್ಲೂಕು ಅಧ್ಯಕ್ಷ ಈಶ್ವರ್ ರಾವ್ ಮಾತನಾಡಿ ತಾಲ್ಲೂಕಿನಲ್ಲಿ ಸಮಾಜದವರು ಹಲವಾರು ವರ್ಷಗಳಿಂದ ವ್ಯಾಪಾರ ವೃತ್ತಿ ನಡೆಸುತ್ತಿದ್ದು, ಈ ಹಿಂದೆ ಶಾಸಕ ಕೆ.ಮಹದೇವ್ ರವರು ಪ.ಪಂ.ಅಧ್ಯಕ್ಷರಾಗಿದ್ದ ವೇಳೆ ನಮ್ಮನ್ನು ಗುರುತಿಸಿ ನಿವೇಶನ ನೀಡಿದ್ದರು, ಪ್ರಸ್ತುತ ಅವರು ಶಾಸಕರಾಗಿರುವುದರಿಂದ ಸಮಾಜದ ಅಭಿವೃದ್ದಿಗೆ ಇನ್ನೂ ಹೆಚ್ಚಿನ ಸಹಕಾರ ನೀಡುವಂತೆ ಕೋರಿದರು.
ಇದೇ ಸಂದರ್ಭ ತಾಲ್ಲೂಕು ಗೋಂಧಳಿ ಸಮಾಜದವರು ವರ್ಷಕ್ಕೊಮ್ಮೆ ಚಾಮುಂಡೇಶ್ವರಿ ಉತ್ಸವವನ್ನು ಖಾಸಗಿ ಜಾಗದಲ್ಲಿ ಆಚರಿಸುತ್ತಿದ್ದು ಪಟ್ಟಣದಲ್ಲಿ ಸಮಾಜಕ್ಕೆ 10 ಗುಂಟೆ ಜಮೀನು ಮಂಜೂರು ಮಾಡುವಂತೆ ಶಾಸಕರಿಗೆ ಮನವಿ ಸಲ್ಲಿಸಿದರು. ಸಮಾಜದ ವಿದ್ಯಾರ್ಥಿಗಳಾದ ಎಂ.ಆನAದ್, ಸೌಪರ್ಣಿಕಾ, ರಾಹುಲ್ ರವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಎಪಿಎಂಸಿ ಆವರಣದಿಂದ ತಾ.ಪಂ.ಸಭಾAಗಣದವರೆಗೆ ಛತ್ರಪತಿ ಶಿವಾಜಿ ಮಹಾರಾಜ್ ರವರ ಭಾವಚಿತ್ರವನ್ನು ಡೊಳ್ಳುಕುಣಿತ, ಮಹಿಳೆಯರ ಪೂರ್ಣಕುಂಭ ಸ್ವಾಗತ, ವಿಶೇಷ ವಾದ್ಯಗಳೊಂದಿಗೆ ಮೆರವಣಿಗೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಜಿ.ಪಂ.ಸದಸ್ಯರಾದ ಮಂಜುನಾಥ್, ಜಯಕುಮಾರ್, ತಾ.ಪಂ.ಸದಸ್ಯರಾದ ರಾಮು, ಆರ್.ಎಸ್.ಮಹದೇವ್, ರಂಗಸ್ವಾಮಿ, ಪುರಸಭಾ ಸದಸ್ಯರಾದ ಕೃಷ್ಣ, ನಿರಂಜನ್, ತಹಸೀಲ್ದಾರ್ ಶ್ವೇತಾ ಎನ್.ರವೀಂದ್ರ, ಬಿಇಒ ಚಿಕ್ಕಸ್ವಾಮಿ, ಗೋಂಧಳಿ ಸಮಾಜದ ಗೌರವಾಧ್ಯಕ್ಷ ದಶರಥರಾವ್, ಪದಾಧಿಕಾರಿಗಳಾದ ವಾಸುರಾವ್, ಮಹದೇವರಾವ್, ರಾಚಪ್ಪರಾವ್, ಮೂರ್ತಿರಾವ್, ಹರೀಶ್ರಾವ್, ಮುಖಂಡರಾದ ಮೈಲಾರಪ್ಪ, ನಾಗರಾಜ್, ಇಲಿಯಾಸ್, ಸುರೇಶ್, ಪುಟ್ಟಸ್ವಾಮಿ, ತಿಮ್ಮೇಗೌಡ, ದೊರೆಕೆರೆ ನಾಗೇಂದ್ರ, ಹಾಜರಿದ್ದರು.