ಉತ್ತಮ ನಾಗರೀಕ ಸಮಾಜ ನಿರ್ಮಾಣವಾಗಲು ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ಶಾಸಕ ಕೆ.ಮಹದೇವ ಅಭಿಪ್ರಾಯಪಟ್ಟರು.

ಪಟ್ಟಣದ ನ್ಯಾಯಾಲಯ ಸಮೀಪದಲ್ಲಿ ಗುರು ಭವನ ನರ‍್ಮಾಣ ಕಾಮಗಾರಿಗೆ ಸೋಮವಾರ ಚಾಲನೆ ನೀಡಿ ಮಾತನಾಡಿದರು. ಗುರುವಿನ ಋಣವನ್ನು ತೀರಿಸಲು ಸಾಧ್ಯವಿಲ್ಲ ಆದರೆ ಪ್ರತಿಯೊಬ್ಬರೂ ಗುರುವಿನ ಮರ‍್ಗರ‍್ಶನದಿಂದ ಮುನ್ನೆಡದರೆ ಯಶಸ್ಸು ಖಚಿತ ಎಂದರು. ಗುರು ಭವನದ ನರ‍್ಮಾಣ ಬಹಳ ರ‍್ಷಗಳ ಹಿಂದೆಯೆ ಕರ‍್ಯತಗವಾಗ ಬೇಕಿತ್ತು ಆದರೆ ಕೆಲವು ಅಡೆತಡೆಗಳಿಂದ ಸ್ಥಗಿತವಾಗಿತ್ತು ಇಂದು ಶಿಕ್ಷಕರು ಸೇರಿದಂತೆ ಇತರರ ಅವಿರತ ಶ್ರಮದಿಂದ ಕಾಮಗಾರಿಗೆ ಚಾಲನೆ ದೊರೆತಿದೆ ಎಂದು ತಿಳಿಸಿದರು. ತಾಲ್ಲೂಕಿನ ಅಭಿವೃದ್ದಿ ನನಗೆ ಮುಖ್ಯವಾಗಿದ್ದು ನನ್ನ ಅಧಿಕಾರಾವಧಿಯಲ್ಲಿ ತಾಲ್ಲೂಕಿಗೆ ಏನಾದರೂ ಶಾಶ್ವತ ಕೊಡುಗೆ ನೀಡಬೇಕು ಆಗ ಮಾತ್ರ ಜನಮಾನಸಲ್ಲಿ ಉಳಿಯಲು ಸಾಧ್ಯ ಎಂದರು. ಒಂದು ರ‍್ಷದೊಳಗೆ ಗುರುಭವನದ ಕಾಮಗಾರಿ ಪರ‍್ಣಗೊಳಿಸುವಂತ್ತೆ ಎಇಇ ನಾಗರಾಜುಗೆ ಸೂಚಿಸಿದರು.
ಮಾಜಿ ಶಾಸಕ ಎಚ್.ಸಿ.ಬಸವರಾಜ್ ಮಾತನಾಡಿ ಗುರುಭವನ ನರ‍್ಮಾಣದ ಸ್ಥಳಕ್ಕೆ ಹಲವು ರ‍್ಷಗಳ ಅವಿರತ ಹೋರಾಟ ಮಾಡ ಬೇಕಾಯಿತು ಎಂದು ತಿಳಿಸಿದರು.
ಈ ಸಂರ‍್ಭದಲ್ಲಿ ಜಿ.ಪಂ.ಸದಸ್ಯರಾದ ವಿ.ರಾಜೇಂದ್ರ, ಕೆ.ಸಿ.ಜಯಕುಮಾರ್, ಕೌಸಲ್ಯ ಲೊಕೇಶ್, ತಾ. ಪಂ. ಸದಸ್ಯ ಟಿ.ಈರಯ್ಯ, ಪುರಸಭೆ ಸದಸ್ಯರಾದ ಪಿ.ಸಿ.ಕೃಷ್ಣ, ನಿರಂಜನ್, ಮಂಜುನಾಥ್, ರೇವತಿ, ರತ್ನಮ್ಮ, ರವಿ, ಪ್ರಕಾಶ್ ಸಿಂಗ್, ಪಿ.ಎಂ.ವಿನೋದ್, ರ‍್ಷದ್,ಎಪಿಎಂಸಿ ಅಧ್ಯಕ್ಷ ರಾಜಯ್ಯ,ಎಂಡಿಸಿಸಿ ಬ್ಯಾಂಕ್ ನರ‍್ದೇಶಕ ಸಿ.ಎನ್.ರವಿ, ಕ್ಷೇತ್ರ ಶಿಕ್ಷಣಾಧಿಕಾರಿ ಚಿಕ್ಕಸ್ವಾಮಿ, ಶಿಕ್ಷಕರ ಸಂಘದ ಅಧ್ಯಕ್ಷ ಮರ‍್ತಿ, ಕರ‍್ಯರ‍್ಶಿ ಗಣೇಶ್ ಕುಮಾರ್, ಸೇರಿದಂತೆ ಇತರರು ಹಾಜರಿದ್ದರು.
01ಪಿವೈಪಿ03:ಪಿರಿಯಾಪಟ್ಟಣದಲ್ಲಿ ಶಿಕ್ಷಕರು ನರ‍್ಮಿಸುತ್ತಿರುವ ಗುರುಭವನ ನರ‍್ಮಾಣ ಕಾಮಗಾರಿಗೆ ಶಾಸಕ ಕೆ.ಮಹದೇವ್ ಸೋಮವಾರ ಚಾಲನೆ ನೀಡಿದರು. ಮಾಜಿ ಶಾಸಕ ಎಚ್.ಸಿ.ಬಸವರಾಜ್, ಜಿ.ಪಂ.ಸದಸ್ಯರಾದ ವಿ.ರಾಜೇಂದ್ರ, ಕೆ.ಸಿ.ಜಯಕುಮಾರ್, ಕೌಸಲ್ಯ ಲೊಕೇಶ್, ತಾ. ಪಂ. ಸದಸ್ಯ ಟಿ.ಈರಯ್ಯ ಹಾಜರಿದ್ದಾರೆ.

Leave a Comment

Your email address will not be published. Required fields are marked *

error: Content is protected !!
Scroll to Top