
ಪಟ್ಟಣದ ತಾಲೂಕು ಆಡಳಿತ ಕಚೇರಿ ಸಭಾಂಗಣದಲ್ಲಿ ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಕೊರೋನಾ ವೈರಸ್ ಹರಡದಂತೆ ತಡೆಗಟ್ಟಲು ಕೈಗೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳ ಬಗ್ಗೆ ನಡೆದ ತಾಲೂಕಿನ ವಿವಿಧೆಡೆಯ ಖಾಸಗಿ ವೈದ್ಯರು ಮತ್ತು ಸಿಬ್ಬಂದಿ ಸಭೆಯಲ್ಲಿ ಅವರು ಮಾತನಾಡಿದರು, ತಮ್ಮ ಕ್ಲಿನಿಕ್ ಗಳಲ್ಲಿ ತಪಾಸಣೆಗೆಂದು ಬರುವ ರೋಗಿಗಳ ಮಾಹಿತಿ ವಿವರ ಮತ್ತು ಸ್ವಚ್ಛತೆಗೆ ಹೆಚ್ಚು ಒತ್ತು ಕೊಡುವಂತೆ ತಿಳಿಸಿದರು.
ಶಾನುಭೋಗನಹಳ್ಳಿ ಹೆರಿಗೆ ಆಸ್ಪತ್ರೆ ವೈದ್ಯ ಡಾ.ರವಿಕುಮಾರ್ ಪಿಪಿಟಿ ಮೂಲಕ ಕೊರೊನಾ ರೋಗದ ಲಕ್ಷಣ, ತಡೆಗಟ್ಟುವ ವಿಧಾನ ಹಾಗೂ ತಪಾಸಣೆಗೆ ಬರುವ ರೋಗಿಗಳೊಂದಿಗೆ ವೈದ್ಯರು ಅನುಸರಿಸಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಿದರು.
ತಹಶೀಲ್ದಾರ್ ಶ್ವೇತಾ ಎನ್ ರವೀಂದ್ರ, ತಾಲೂಕು ಆರೋಗ್ಯಾಧಿಕಾರಿ ಡಾ.ನಾಗೇಶ್ ಮಾತನಾಡಿದರು, ತಾಲೂಕಿನ ವಿವಿಧೆಡೆ ಖಾಸಗಿ ವೈದ್ಯರುಗಳು ಮಾತನಾಡಿ ಹೆಚ್ಚುವರಿ ಚಿಕಿತ್ಸೆಗೆಂದು ರೋಗಿಗಳನ್ನು ಬೇರೆಡೆ ಕರೆದುಕೊಂಡು ಹೋಗಲು ಸೂಚಿಸಿದಾಗ ಅವರಿಗೆ ತೆರಳಲು ತೊಂದರೆಯಾಗುತ್ತಿದೆ ಮತ್ತು ಕರ್ತವ್ಯದ ಸ್ಥಳಕ್ಕೆ ಹಾಜರಾಗಲು ಪಾಸ್ ಅವಶ್ಯಕತೆ ಇದೆ ಎಂದು ಕೋರಿದರು, ಇದಕ್ಕೆ ಸ್ಪಂದಿಸಿದ ಶಾಸಕ
ಕೆ.ಮಹದೇವ್ ಹಾಗೂ ತಹಸೀಲ್ದಾರ್ ಶ್ವೇತಾ ಎನ್ ರವೀಂದ್ರ ಈ ಸಂಬಂಧ ಆರಕ್ಷಕ ಇಲಾಖೆಗೆ ಅನುಮತಿ ನೀಡಲು ತಿಳಿಸಲಾಗುವುದು ಪಾಸ್ ಗಳನ್ನು ವಿನಾಕಾರಣ ದುರ್ಬಳಕೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿರುವುದರಿಂದ ಕಟ್ಟುನಿಟ್ಟಾಗಿ ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆಗೆ ಸೂಚಿಸಲಾಗಿದೆ ಎಂದರು.
ಈ ಸಂದರ್ಭ ಹಿರಿಯ ಆರೋಗ್ಯ ನಿರೀಕ್ಷಕ ಕೆ.ಆರ್ ಪ್ರಕಾಶ್, ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ ಲತಾ, ವಿವಿಧೆಡೆಯ ಖಾಸಗಿ ವೈದ್ಯರುಗಳಾದ ಡಾ.ಪ್ರಕಾಶ್ ಬಾಬುರಾವ್, ಡಾ.ಚಂದ್ರಶೇಖರ್,
ಡಾ.ಮಹದೇವಸ್ವಾಮಿ, ಡಾ.ಬಸವರಾಜು, ಡಾ.ಜಾಧವ್, ಡಾ.ಸುಬ್ರಹ್ಮಣ್ಯ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.