ತಾಲೂಕಿನ ಮುಸ್ಲಿಂ ಜನಾಂಗದ ಹಿತ ಕಾಯಲು ಬದ್ಧ ಎಂದು ಶಾಸಕ ಕೆ.ಮಹದೇವ್ ಹೇಳಿದರು.

ತಾಲೂಕಿನ ಕಂಪಲಾಪುರದ ಮಸೀದಿಯಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಸಮಾಜದ ವತಿಯಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು,  ರಾಜಕಾರಣ ನಿಂತ ನೀರಲ್ಲ ರಾಜಕಾರಣಿಗಳಲ್ಲಿ ಸ್ವಾರ್ಥ ಇರಬಾರದು, ಅವಕಾಶ ಸಿಕ್ಕಾಗ ಒಂದು ವರ್ಗಕ್ಕೆ ಸೀಮಿತವಾಗದೆ ಎಲ್ಲ ಸಮಾಜದ ಅಭಿವೃದ್ಧಿಗೆ ಶ್ರಮಿಸುವುದೇ ನಿಜವಾದ ರಾಜಕಾರಣಿಯ ಲಕ್ಷಣ ಎಂದರು, ಈ ನಿಟ್ಟಿನಲ್ಲಿ ತಾಲೂಕಿನ ಎಲ್ಲಾ ವರ್ಗದ ಜನರನ್ನು ಸಮನಾಗಿ ಕಂಡು ಪಕ್ಷಭೇದ ಹಾಗೂ ಜಾತಿ ಭೇದ ಮಾಡದೆ ಪ್ರತಿ ಹಳ್ಳಿಗಳಲ್ಲೂ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿರುವುದಾಗಿ ತಿಳಿಸಿದರು.    2008 , 2013 ಹಾಗೂ 2018 ರ ವಿಧಾನ ಸಭಾ ಚುನಾವಣೆಯಲ್ಲಿ ನನಗೆ ಮುಸ್ಲಿಂ ಸಮಾಜದ ಮತಗಳು ಶೇ 60 ರಿಂದ 70 ಭಾಗ ಬಂದಿದೆ, ಅದಕ್ಕೆ ನಾನು ಅಭಾರಿಯಾಗಿದ್ದೇನೆ

ತಾಲೂಕಿನಲ್ಲಿ ಕಡಿಮೆ ಜನಸಂಖ್ಯೆಯಿದ್ದರೂ ಎಲ್ಲ ಸಮುದಾಯಗಳ ಜೊತೆ ಅನ್ಯೂನ್ಯವಾಗಿ ಬದುಕುತ್ತಿದ್ದೀರಿ ಇದು ನಿಜಕ್ಕೂ ಸಂತಸದ ವಿಷಯ ಅದಕ್ಕೆ ನಿಮ್ಮ ಮೇಲೆ ನನಗೆ ಅಪಾರ ಗೌರವವಿದೆ ಎಂದರು.

ಇದೇ ಸಂದರ್ಭ ಮುಸ್ಲಿಂ ಸಮುದಾಯದವರು ಶಾದಿ ಮಹಲ್ ನಿರ್ಮಿಸಿಕೊಡುವ ಬಗ್ಗೆ ಶಾಸಕರಿಗೆ ಮನವಿ ಸಲ್ಲಿಸಿದರು ಇದಕ್ಕೆ ಸ್ಪಂದಿಸಿದ ಶಾಸಕರು ಶಾದಿ ಮಹಲ್ ನಿರ್ಮಾಣಕ್ಕೆ ಹೆಚ್ಚು ಅನುದಾನ ನೀಡುವ ಭರವಸೆ ನೀಡಿದರು.

   ಖಬರಸ್ಥಾನ್( ಸ್ಮಶಾನ) ಕ್ಕೆ 29 ಗುಂಟೆ ಜಮೀನು ಉಚಿತವಾಗಿ ನೀಡಿದ ದಿ.ಅಹಮದ್ ಮೊಹಿದ್ದೀನ್ ಸಾಬ್ ರವರಮಗ ಅಕ್ರಂ ಅಹಮದ್ ರವರನ್ನು ಶಾಸಕ ಕೆ.ಮಹದೇವ್ ಸನ್ಮಾನಿಸಿದರು.

 ಕಾರ್ಯಕ್ರಮದಲ್ಲಿ ಗ್ರಾ.ಪಂ ಅಧ್ಯಕ್ಷ  ಆಸೀಫ್ ಖಾನ್, ಮಸೀದಿ ಅಧ್ಯಕ್ಷ ಮುಜಾಮಿಲ್, ಪಿಎಸಿಸಿಎಸ್ ಅಧ್ಯಕ್ಷ ಕೆ.ಕುಮಾರ್ ಮುಖಂಡರಾದ ರಕೀಬ್ ಅಹಮದ್, ರಿಜ್ವಾನ್ ಖಾನ್, ಮಹಮ್ಮದ್ ಶಫಿ, ಕೃಷ್ಣೇಗೌಡ, ಗಿರೀಶ್, ಆನಂದ್ ಸೇರಿದಂತೆ ಮಸೀದಿ ಗುರುಗಳು, ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top