
ಈ ಹಿಂದೆ ಅಧ್ಯಕ್ಷರಾಗಿದ್ದ ಟಿ.ಈರಯ್ಯ ಅವರು ರಾಜೀನಾಮೆ ನೀಡಿದ್ದರಿಂದ ತೆರವಾದ ಸ್ಥಾನಕ್ಕೆ ಎ.ಟಿ ರಂಗಸ್ವಾಮಿ ಅವರ ಹೆಸರು ಮಾತ್ರ ಕೇಳಿ ಬಂದಿದ್ದರಿಂದ ತಾ.ಪಂ ಇಒ ಡಿ.ಸಿ ಶೃತಿ ಆಯ್ಕೆ ಪ್ರಕಟಿಸಿದರು, ಈ ವೇಳೆ ಜೆಡಿಎಸ್ ಮಹಿಳಾ ಸದಸ್ಯರೊಬ್ಬರು ದಲಿತ ಮಹಿಳೆಯನ್ನು ಅಧಿಕಾರದಿಂದ ತಪ್ಪಿಸಿ ಕಡೆಗಣಿಸುತ್ತಿದ್ದಾರೆ ಎಂದು ಆರೋಪ ಮಾಡಿದರು.
ನೂತನ ಅಧ್ಯಕ್ಷರನ್ನು ಶಾಸಕ ಕೆ.ಮಹದೇವ್ ಅಭಿನಂದಿಸಿ ಮಾತನಾಡಿ ತಾಲೂಕಿನ ಸಮಗ್ರ ಅಭಿವೃದ್ಧಿ ಹಿತದೃಷ್ಟಿಯಿಂದ ಉತ್ತಮ ಕೆಲಸ ನಿರ್ವಹಿಸುವಂತೆ ತಿಳಿಸಿ ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದರು.
ನೂತನ ಅಧ್ಯಕ್ಷ ಎ.ಟಿ ರಂಗಸ್ವಾಮಿ ಮಾತನಾಡಿ ಎಲ್ಲ ಸದಸ್ಯರನ್ನು ಒಗ್ಗೂಡಿಸಿ ಪಕ್ಷಾತೀತವಾಗಿ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದಾಗಿ ತಿಳಿಸಿ ಅಧ್ಯಕ್ಷರಾಗಲು ಸಹಕರಿಸಿದವರಿಗೆ ಧನ್ಯವಾದ ತಿಳಿಸಿದರು.
ಈ ಸಂದರ್ಭ ತಾ.ಪಂ ಸದಸ್ಯರಾದ ಎಸ್.ರಾಮು, ಟಿ.ಈರಯ್ಯ, ಆರ್.ಎಸ್ ಮಹದೇವ್, ಮೋಹನ್ ರಾಜ್, ಮಲ್ಲಿಕಾರ್ಜುನ್, ಯುವ ಮುಖಂಡರಾದ ನವೀನ್, ಅಶೋಕ್ ಹಾಜರಿದ್ದರು.