ಪಟ್ಟಣದ ಸ್ವಚ್ಛತೆ ಕಾಪಾಡುವಲ್ಲಿ ಪುರಸಭೆ ಪೌರ ಕಾರ್ಮಿಕ ಸಿಬ್ಬಂದಿಗಳ ಕಾರ್ಯ ಮಹತ್ವವಾದುದು ಎಂದು ಶಾಸಕ ಕೆ.ಮಹದೇವ್ ಹೇಳಿದರು.

   ಪುರಸಭೆ ವತಿಯಿಂದ ನಡೆದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರುಮಾತನಾಡಿದರು, ಪಟ್ಟಣ ಪುರಸಭೆಯು ಒಟ್ಟು 23 ವಾರ್ಡ್ ಗಳನ್ನು ಹೊಂದಿದ್ದು ಇಲ್ಲಿನ ಬಡಾವಣೆಗಳ ಸ್ವಚ್ಛತೆಯ ಕಾರ್ಯಕ್ಕಾಗಿ ಕನಿಷ್ಠ 40 ಮಂದಿ ಪೌರಕಾರ್ಮಿಕರ ಅಗತ್ಯವಿದೆ ಆದರೆ ಹಾಲಿ ಕೇವಲ 10 ಮಂದಿ ಪೌರಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದು ಪಟ್ಟಣದ ಸ್ವಚ್ಛತೆ ಕಾಪಾಡುವಲ್ಲಿ ಸಿಬ್ಬಂದಿಗಳ ಕೊರತೆ ಎದ್ದು ಕಾಣುತ್ತಿದೆ, ಶೀಘ್ರದಲ್ಲೇ ಸಂಬಂಧಪಟ್ಟ ಇಲಾಖೆಯ ಸಚಿವರೊಂದಿಗೆ ಚರ್ಚಿಸಿ ಪಟ್ಟಣಕ್ಕೆ ಅಗತ್ಯವಿರುವ ಪೌರಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು, ಪಟ್ಟಣದ ಪೌರ ಕಾರ್ಮಿಕರು ತಮ್ಮ ಅನಾರೋಗ್ಯದ ನಡುವೆಯೂ ಸ್ವಚ್ಛತೆಯ ಕಾರ್ಯದಲ್ಲಿ ಭಾಗಿಯಾಗುವ ಮೂಲಕ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ, ಪಟ್ಟಣದ ಸ್ವಚ್ಛತೆ ಕಾಪಾಡುವಲ್ಲಿ ನಾಗರಿಕರು ಪುರಸಭೆ ಸಿಬ್ಬಂದಿಗಳೊಂದಿಗೆ ಸಹಕರಿಸುವಂತೆ ಕೋರಿದರು.

    ಇದೇ ವೇಳೆ  10 ಮಂದಿ ಪೌರ ಕಾರ್ಮಿಕರು, ಪುರಸಭಾ ಮುಖ್ಯಾಧಿಕಾರಿ, ಪರಿಸರ ಎಂಜಿನಿಯರ್, ಆರೋಗ್ಯ ನಿರೀಕ್ಷಕರನ್ನು ಶಾಸಕ ಕೆ.ಮಹದೇವ್ ಸನ್ಮಾನಿಸಿ ಗೌರವಿಸಿದರು. 

   ಈ ಸಂದರ್ಭ ಪುರಸಭಾ ಸದಸ್ಯರಾದ ಕೆ.ಮಹೇಶ್, ಮಂಜುನಾಥ್ ಸಿಂಗ್, ರವಿ, ಎಚ್.ಕೆ ಮಂಜುನಾಥ್, ಪಿ.ಸಿ ಕೃಷ್ಣ, ಪ್ರಕಾಶ್ ಸಿಂಗ್, ಹರ್ಷದ್, ರತ್ನಮ್ಮ, ಪ್ರಕಾಶ್, ಶ್ಯಾಮ್, ಪುರಸಭೆ ಮುಖ್ಯಾಧಿಕಾರಿ ಚಂದ್ರಕುಮಾರ್, ಪರಿಸರ ಇಂಜಿನಿಯರ್ ಪ್ರಸನ್ನ,  ಆರೋಗ್ಯ ನಿರೀಕ್ಷಕ ಆದರ್ಶ ಹಾಗೂ ಸಿಬ್ಬಂದಿಗಳು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top