
ಶಾಸಕ ಕೆ.ಮಹದೇವ್ ಮಾತನಾಡಿ ತುರ್ತು ಸಂದರ್ಭಗಳಲ್ಲಿ ದಿನಸಿ ತರಕಾರಿ ಖರೀದಿಸಲು ಮನೆಯಿಂದ ಹೊರ ಬರುವವರು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ತಿಳಿಸಿ ಸಾರ್ವಜನಿಕರು ಸರ್ಕಾರದ ಆದೇಶಗಳನ್ನು ಪಾಲಿಸಿ ಸಮುದಾಯದ ಅಂತರ ಕಾಪಾಡಿಕೊಂಡು ಕೊರೋನಾ ವೈರಸ್ ತಡೆಗಟ್ಟುವಲ್ಲಿ ಸಹಕರಿಸುವಂತೆ ಕೋರಿದರು.
ಇದೇ ವೇಳೆ ಪಟ್ಟಣದಲ್ಲಿ ನೆಲೆಸಿರುವ ಹಲವು ನಿರಾಶ್ರಿತ ಕುಟುಂಬದವರಿಗೆ ದಿನಸಿ ಸೇರಿದಂತೆ ಗೃಹೋಪಯೋಗಿ ವಸ್ತುಗಳನ್ನು ಉಚಿತವಾಗಿ ಶಾಸಕ ಕೆ.ಮಹದೇವ್ ಹಾಗೂ ಅವರ ಪುತ್ರ ಮೈಮುಲ್ ನಿರ್ದೇಶಕ ಪಿ.ಎಂ ಪ್ರಸನ್ನ ವಿತರಿಸಿದರು.
ಸರ್ಕಾರದ ವತಿಯಿಂದ ಬಡವರಿಗೆ ಉಚಿತವಾಗಿ ಹಾಲು ವಿತರಿಸುವ ಯೋಜನೆಗೆ ಪಟ್ಟಣದ ಮೇದರ್ ಬ್ಲಾಕ್ ಹಾಗೂ ಹಂದಿ ಜೋಗಿ ಕಾಲೊನಿಯಲ್ಲಿ ಚಾಲನೆ ನೀಡಿ ಮಾತನಾಡಿ ಪ್ರತಿನಿತ್ಯ 580ಲೀ. ಹಾಲು ಪಟ್ಟಣಕ್ಕೆ ಪೂರೈಕೆಯಾಗುತ್ತಿದ್ದು ವಿವಿಧೆಡೆಯ ಬಡವರಿಗೆ ತಲುಪಿಸಲಾಗುವುದು ಎಂದರು.
ಈ ವೇಳೆ ಶಾಸಕರ ಪುತ್ರ ಮೈಮುಲ್ ನಿರ್ದೇಶಕ ಪಿ.ಎಂ ಪ್ರಸನ್ನ, ಪುರಸಭೆ ಮುಖ್ಯಾಧಿಕಾರಿ ಚಂದ್ರಕುಮಾರ್ ಹಾಗೂ ಸಿಬ್ಬಂದಿ ಮತ್ತು ಪುರಸಭೆ ಸದಸ್ಯರು ಹಾಜರಿದ್ದರು.