ಭೀಕರ ಮಳೆ ಹಾಗೂ ನೆರೆ ಪ್ರವಾಹದಿಂದ ಮನೆಗಳನ್ನು ಕಳೆದುಕೊಂಡವರಿಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಐದು ಲಕ್ಷ ಪರಿಹಾರ ಘೋಷಿಸಿರುವುದು ಶ್ಲಾಘನೀಯ, ಇದರಿಂದ ಸಂತ್ರಸ್ತರು ಹೊಸ ಬದುಕು ಕಟ್ಟಿಕೊಳ್ಳಲು ನೆರವಾಗಲಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

ತಾಲೂಕಿನ ಕೊಪ್ಪ ಬಳಿ ನೆರೆ ಸಂತ್ರಸ್ತರಿಗೆ ತೆರೆದಿರುವ ಪರಿಹಾರ ಕೇಂದ್ರದಲ್ಲಿ ಸಂತ್ರಸ್ತರಿಗೆ ಸರ್ಕಾರದ ತಾತ್ಕಾಲಿಕ ಪರಿಹಾರ ಚೆಕ್ ವಿತರಿಸಿ ಅವರು ಮಾತನಾಡಿದರು, ಸೋಮವಾರ ಮೈಸೂರು ಜಿಲ್ಲೆಯ ಹಲವು ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ನೆರೆ ಪ್ರವಾಹದಿಂದ ಮನೆ ಕಳೆದು ಸಂತ್ರಸ್ತರಾದ ಕುಟುಂಬಗಳಿಗೆ 5 ಲಕ್ಷ ಪರಿಹಾರ ಘೋಷಿಸಿದ್ದು ತಾತ್ಕಾಲಿಕವಾಗಿ ಮೊದಲ ಹಂತದಲ್ಲಿ ಪಾತ್ರೆ, ಪೀಠೋಪಕರಣ ಹಾಗೂ ದಿನಬಳಕೆ ವಸ್ತುಗಳ ಖರ್ಚಿಗಾಗಿ 10 ಸಾವಿರ ಹಣದ ಚೆಕ್ ವಿತರಿಸಲಾಗುವುದು, ಕೊಪ್ಪ ಪರಿಹಾರ ಕೇಂದ್ರದ ಸಂತ್ರಸ್ತರಿಗೆ 3,800 ರೂ ಹಣದ ಚೆಕ್ ವಿತರಿಸಿದ್ದು ಮುಂದಿನ ದಿನಗಳಲ್ಲಿ ಪೂರ್ಣ ಪ್ರಮಾಣದ ಹಣವನ್ನು ತಾಲೂಕು ಆಡಳಿತ ವತಿಯಿಂದ ವಿತರಿಸಲಾಗುವುದು, ಬುಧವಾರ ಬೆಂಗಳೂರಿನಲ್ಲಿ ದಸರಾ ಆಚರಣೆ ಸಂಬಂಧ ಮುಖ್ಯಮಂತ್ರಿಗಳು ಸಭೆ ಕರೆದಿದ್ದು ಆ ಸಭೆಯಲ್ಲಿ ಶಾಸಕ ಕೆ.ಮಹದೇವ್ ಅವರೊಂದಿಗೆ ತಾಲೂಕಿನ ನಷ್ಟದ ಬಗ್ಗೆ ವಿವರ ನೀಡಿ ನೆರೆ ಹಾವಳಿಯಿಂದ ವ್ಯಾಪಾರಸ್ಥರು ಕಳೆದುಕೊಂಡಿರುವ ಪೀಠೋಪಕರಣ ಹಾಗೂ ಅಂಗಡಿಯಲ್ಲಿ ನಾಶವಾದ ವಸ್ತುಗಳಿಗೂ ತಾತ್ಕಾಲಿಕ ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ಮನವಿ ಸಲ್ಲಿಸುವುದಾಗಿ ಹೇಳಿದರು.

     ಶಾಸಕ ಕೆ.ಮಹದೇವ್ ಮಾತನಾಡಿ     ತಾಲೂಕಿನಲ್ಲಿ ಅಪಾರ ಪ್ರಮಾಣದ ನಷ್ಟ ಉಂಟಾಗಿದ್ದು ತಾಲ್ಲೂಕನ್ನು ನೆರೆಪೀಡಿತ ಪ್ರದೇಶವೆಂದು ಘೋಷಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಂಸದ ಪ್ರತಾಪ್ ಸಿಂಹ ಅವರೊಟ್ಟಿಗೆ ಮನವಿ ಸಲ್ಲಿಸಲಾಗುವುದು, ಕಳೆದ ಬಾರಿ ಗ್ರಾಮಾಂತರ ಪ್ರದೇಶಗಳಲ್ಲಿ ಮಳೆ ಹಾಗೂ ನೆರೆ ಹಾವಳಿ ನಷ್ಟದ ಪರಿಹಾರ ಧನ ಹಲವರಿಗೆ ದೊರಕದಿರುವುದು ವಿಷಾದನೀಯ, ಈ ಬಾರಿ ಪರಿಹಾರ ಮೊತ್ತವನ್ನು ಹೆಚ್ಚಿಸಿರುವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಅಭಿನಂದಿಸುವುದಾಗಿ ತಿಳಿಸಿ ಮುಂಬರುವ ದಿನಗಳಲ್ಲಿ ನೆರೆಪೀಡಿತ ಪ್ರದೇಶಗಳ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದರು.

    ಈ ವೇಳೆ 100 ಕ್ಕೂ ಹೆಚ್ಚು ಸಂತ್ರಸ್ತರಿಗೆ 3,800 ರುಾ. ಪರಿಹಾರ ಚೆಕ್ ವಿತರಿಸಲಾಯಿತು.

     ಈ ಸಂದರ್ಭ ತಹಸೀಲ್ದಾರ್ ಶ್ವೇತಾ ಎನ್ ರವೀಂದ್ರ, ಜಿ.ಪಂ ಸದಸ್ಯ ರಾಜೇಂದ್ರ, ತಾ.ಪಂ ಸದಸ್ಯ ಎಸ್ ರಾಮು, ಗ್ರಾ.ಪಂ ಅಧ್ಯಕ್ಷೆ ಶಹೀನಾ ಬಾನು,  ಮುಖಂಡ ಸೋಮಶೇಖರ್,  ಬೈಲುಕೊಪ್ಪ ಠಾಣೆ ಎಸ್ಐ ಸಿ.ಯು ಸವಿ, ಉಪ ತಹಸೀಲ್ದಾರ್ ನಿಜಾಮುದ್ದೀನ್, ಕಂದಾಯ ಅಧಿಕಾರಿ ಮಹೇಶ್, ಗ್ರಾಮ ಲೆಕ್ಕಿಗರಾದ ಅಶ್ವಿನಿ, ಪ್ರದೀಪ್ ಗಡೇಕರ್, ತೇಜಸ್ವಿ, ಪ್ರದೀಪ್ ಸೇರಿದಂತೆ ತಾಲೂಕು ಮಟ್ಟದ ವಿವಿಧ ಅಧಿಕಾರಿಗಳು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top