ಮೌಡ್ಯ ಆಚರಣೆಗಳ ಮೂಲಕ ತಳ ಸಮುದಾಯಗಳ ಮೇಲಾಗುತ್ತಿರುವ ಶೋಷಣೆಗಳು ಕೊನೆಯಾಗಬೆಕು ಆಗ ಮಾತ್ರ ಸಮ ಸಮಾಜದ ನಿರ್ಮಾಣ ಸಾಧ್ಯ ಎಂಬುದು ಅಪ್ಪಣ್ಣನವರ ಕನಸಾಗಿತ್ತು – ಶಾಸಕ ಕೆ.ಮಹದೇವ್

ಪ್ರತಿ ಸಮುದಾಯಗಳು ಸಂಘಟನೆಯಾಗಿ ತಮ್ಮ ಮೂಲಭೂತ ಹಕ್ಕುಗಳನ್ನು ಪಡೆದು ಸಮಾನತೆಯಿಂದ ಬದುಕು ನಡೆಸಬೇಕು ಎಂಬುದು ಹಡಪದ ಅಪ್ಪಣ್ಣನವರ ಆಶಯವಾಗಿತ್ತು ಎಂದು ಹುಣಸೂರಿನ ಡಿ.ದೇವರಾಜ ಅರಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಆರ್.ಗುರುಸ್ವಾಮಿ ಹೇಳಿದರು.
ಪಟ್ಟಣದ ತಾಲೂಕು ಆಡಳಿತ ಕಛೇರಿ ಸಭಾಂಗಣದಲ್ಲಿ ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ ಹಡಪದ ಅಪ್ಪಣ ಜಯಂತಿ ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು, ಹಿಂದಿನ ಕಾಲದಲ್ಲಿ ತಳ ಸಮುದಾಯಗಳ ಜೀವನ ದುಸ್ತರವಾಗಿತ್ತು, ಅಜ್ಞಾನ, ಮೌಡ್ಯತೆ ಸಮಾಜದಲ್ಲಿ ಹೆಚ್ಚು ಆಚರಣೆಯಲ್ಲಿತ್ತು, ಇದನ್ನು ತಡೆಯಲು ಸಾಮಾಜಿಕ ಕ್ರಾಂತಿಗೆ ಹಡಪದ ಅಪ್ಪಣ್ಣನವರು ಮುಂದಾದರು, ಆದರಿಂದ ಹಡಪದ ಎಂಬ ಪದದ ಅರ್ಥವನ್ನು ಸಂಶೋದಕರು ವೀರ ಪಡೆ ಎಂಬುದಾಗಿ ತಿಳಿಸಿದ್ದಾರೆ. ಹಡಪದ ಅಪ್ಪಣ್ಣ ನವರು ಬಾಹ್ಯ ಭಕ್ತಿ ಆಚರಣೆಗಿಂತ ಆಂತರಿಕ ಮಾನವೀಯ ಮೌಲ್ಯದ ಆಚರಣೆ ಸೂಕ್ತವೆಂದು ಜಗತ್ತಿಗೆ ಸಾರಿದ್ದಾರೆ ಎಂದು ತಿಳಿಸಿದರು.
ಶಾಸಕ ಕೆ.ಮಹದೇವ್ ಮಾತನಾಡಿ ಮೌಡ್ಯ ಆಚರಣೆಗಳ ಮೂಲಕ ತಳ ಸಮುದಾಯಗಳ ಮೇಲಾಗುತ್ತಿರುವ ಶೋಷಣೆಗಳು ಕೊನೆಯಾಗಬೆಕು ಆಗ ಮಾತ್ರ ಸಮ ಸಮಾಜದ ನಿರ್ಮಾಣ ಸಾಧ್ಯ ಎಂಬುದು ಅಪ್ಪಣ್ಣನವರ ಕನಸಾಗಿತ್ತು, 12 ನೇ ಶತಮಾನದಲ್ಲಿ ಆಚರಣೆಯಲ್ಲಿದ್ದ ತಾರತಮ್ಯವನ್ನು ಹೋಗಲಾಡಿಸಲು ಬಸವಣ್ಣನವರು ಪ್ರತಿ ಸಮುದಾಯದ ದಾರ್ಶನಿಕರುಗಳನ್ನು ಗುರುತಿಸಿ ಸಮ ಸಮಾಜದ ನಿರ್ಮಾಣಕ್ಕೆ ಮುಂದಾದರು. ಈ ಸಾಲಿನಲ್ಲಿ ಹಡಪದ ಅಪ್ಪಣ ನವರು ಕೂಡ ಪ್ರಮುಖರಾಗಿದ್ದಾರೆ, ಹಡಪದ ಅಪ್ಪಣನವರು ಕಾಯಕದಲ್ಲಿ ಸವಿತಾ ಸಮಾಜದವರಾಗಿದ್ದು, ಇವರ ಕಾಯಕ ನಿಷ್ಠೆಯನ್ನು ಗುರುತಿಸಿದ ಬಸವಣ್ಣ ಇವರನ್ನು ಸಾಮಾಜಿಕ ಕ್ರಾಂತಿಗೆ ನೇಮಿಸಿದರು ಎಂದರು.
ಸವಿತಾ ಸಮಾಜದ ಮುಖಂಡರಾದ ನಾರಾಯಣ ಮಾತನಾಡಿ ಸಮಾಜದಲ್ಲಿ ಸವಿತಾ ಸಮಾಜವನ್ನು ತಳ ಸಮುದಾಯವೆಂದು ಕಡೆಗಣಿಸಿದ್ದ ಸಂದರ್ಭದಲ್ಲಿ ಸರ್ಕಾರವು ಈ ಸಮುದಾಯದ ಕಾಯಕ ನೀಷ್ಠೆಯನ್ನು ಗುರುತಿಸಿ ಹಡಪದ ಅಪ್ಪಣ್ಣನವರ ಜಯಂತಿಯ ಮೂಲಕ ಗೌರವಿಸುತ್ತಿರುವುದು ಹೆಮ್ಮೆಯ ವಿಷಯವಾಗಿದ್ದು, ಸರ್ಕಾರಕ್ಕೆ ಅಭಿನಂದಿಸುವುದಾಗಿ ತಿಳಿಸಿದರಲ್ಲದೆ ಸವಿತಾ ಸಮಾಜದ ವ್ಯಕ್ತಿಗಳ ಜೀವನಕ್ಕೆ ಸ್ವಯಂ ಉದ್ಯೋಗಕ್ಕೆ ಸರ್ಕಾರದ ಸವಲತ್ತುಗಳನ್ನು ಒದಗಿಸಿಕೊಡಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ತಾ.ಪಂ ಇಒ ಡಿ.ಸಿ ಶೃತಿ, ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಈರಯ್ಯ, ಸದಸ್ಯರಾದ ಎ.ಟಿ ರಂಗಸ್ವಾಮಿ, ಮಲ್ಲಿಕಾರ್ಜುನ್, ಮಾಜಿ ಸದಸ್ಯ ಆವರ್ತಿ ಸೋಮಶೇಖರ್, ಪುರಸಭೆ ಸದಸ್ಯರಾದ ರವಿ, ಪುಷ್ಪಾ ಸುರೇಶ್, ಭಾರತಿ, ನೂರ್ ಜಾನ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಮೇಗೌಡ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಯೋಗಿ, ಕೇಶಾಲಂಕಾರಿಗಳ ವಿವಿದೊದ್ದೇಶ ಸಹಕಾರ ಸಂಘದ ಗೌರವಾಧ್ಯಕ್ಷ ನಾಗರಾಜು, ಅಧ್ಯಕ್ಷ ಪಿ.ಸಿ ಕೃಷ್ಣ, ಉಪಾಧ್ಯಕ್ಷ ಮಾದೇವ್, ನಗರ ಅಧ್ಯೆಕ್ಷ ಸುಬ್ರಮಣ್ಯ, ಸೇರಿದಂತೆ ಸಮಾಜದ ಮುಖಂಡರುಗಳು ವಿವಿಧ ಇಲಾಖಾಧಿಕಾರಿಗಳು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top